theft crime : ಶಿವಮೊಗ್ಗ ಪೊಲೀಸರು ಕಳ್ಳತನದ ಪ್ರಕರಣವೊಂದನ್ನು ಭೇದಿಸಿದ್ದು, ಕಳ್ಳರಿಂದ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ಮೌಲ್ಯದ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
theft crime : ಏನಿದು ಘಟನೆ
ಏಪ್ರಿಲ್ 05 ರಂದು ಶಿಕಾರಿಪುರದ ಸುಭೇದಾರ್ ಕೇರಿಯ ವಾಸಿ ಫೈಜಾನ್ ಭಾಷಾ ಎಂಬುವವರು ಪಲ್ಸರ್ ಎಂಬ ಬೈಕ್ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಹಿನ್ನೆಲೆ ಶಿಕಾರಿಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಕಳ್ಳರ ಪತ್ತೆಗಾಗಿ ಶಿಕಾರಿಪುರ ಟೌನ್ ಪೊಲೀಸರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ಹಿನ್ನಲೆ ಕಳ್ಳರ ಪತ್ತೆಗಾಗಿ ಬಲೆ ಬೀಸಿದ ಪೊಲೀಸರಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಪ್ರತಾಪ್, 33 ವರ್ಷ, ದೊಡ್ಡಲಿಂಗೇನಹಳ್ಳಿ, ತರೀಕೆರೆ ಚಿಕ್ಕಮಗಳೂರು ಮತ್ತು ಭೋಜರಾಜ, 32 ವರ್ಷ, ಬಿಳಚೋಡ್ ಗ್ರಾಮ, ಜಗಳೂರು ದಾವಣಗೆರೆ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆ ವೇಳೆ ಈ ಇಬ್ಬರ ಮೇಲೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಆರೋಪಿಗಳಿಂದ ಒಟ್ಟು 20 ಲಕ್ಷದ 50 ಸಾವಿರ ಮೌಲ್ಯದ 16 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ