ಹೋಟೆಲ್ನ ಬಾಗಿಲು ಒಡೆದು ಲಕ್ಷಾಂತರ ಮೌಲ್ಯದ ವಸ್ತಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಕಳ್ಳನನ್ನು ಹೊಳೆಹೊನ್ನೂರು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
theft case in holehonnor ಏನಿದು ಪ್ರಕರಣ
ಎಪ್ರಿಲ್ 04 ರಂದು ಭದ್ರಾವತಿ ಎಮ್ಮೆಹಟ್ಟಿ ಗ್ರಾಮದ ಹೋಟೆಲ್ ಒಂದರ ಬಾಗಿಲು ಒಡೆದು ಕಳ್ಳರು 5 ಬ್ಯಾಟರಿ ಹಾಗೂ ಪಾತ್ರೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಹಿನ್ನೆಲೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಹೋಟೆಲ್ ಮಾಲೀಕರು ದೂರನ್ನು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂಡವನ್ನು ರಚಿಸಿ ಕಳ್ಳರ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದರು.
ಇದೀಗ ಹೋಟೆಲ್ನಲ್ಲಿ ಕಳ್ಳತನ ಮಾಡಿದ್ದ ಕಳ್ಳ ಪೊಲೀಸರ ಬಲೆಗೆ ಬಿದ್ದಿದ್ದು, 27 ವರ್ಷದ ರಾಜೇಶ್ ಹೆಚ್ಕೆ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಆತನಿಂದ 60 ಸಾವಿರ ಮೌಲ್ಯದ 5 ಬ್ಯಾಟರಿ 80 ಸಾವಿರ ಮೌಲ್ಯದ ಅಡಿಗೆ ಪಾತ್ರೆಗಳು ಹಾಗೂ ಕೃತ್ಯಕ್ಕೆ ಬಳಸಿದ 5 ಲಕ್ಷ ಮೌಲ್ಯದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
