theft case :  ಹಿಟ್ಟಿನ ಗೊಂಬೆಯಲ್ಲಿ ಬಂಗಾರವಿಟ್ಟು 21 ದಿನ ಪೂಜೆ..! ಅನಾರೋಗ್ಯಕ್ಕೆ ಪರಿಹಾರ ಹೇಳಿ ತಾನೇ ಲಾಕ್ ಆದ ಸ್ವಾಮೀಜಿ

prathapa thirthahalli
Prathapa thirthahalli - content producer

theft case : ಆರೋಗ್ಯ ಸುಧಾರಣೆಗೆ ಪೂಜೆಮಾಡಿಸಬೇಕೆಂದು ನಂಬಿಸಿ ಲಕ್ಷಾಂತರ ಮೌಲ್ಯದ ಚಿನ್ನಭರಣವನ್ನು ದೋಚಿ ಪರಾರಿಯಾಗಿದ್ದ ಸ್ವಾಮಿಯನ್ನು ಸಾಗರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಸಯ್ಯ ಹಿರೇಮಠ್ (29) ಬಂಧಿತ ಆರೋಪಿ

- Advertisement -

theft case : ಏನಿದು ಪ್ರಕರಣ

ಮಾರ್ಚ್​ 2025 ರಂದು ಹೊನ್ನೇಸರ ಗ್ರಾಮದ ನಿವಾಸಿಯೊಬ್ಬರು ಹೆಂಡತಿಯ ಆರೋಗ್ಯ ಹದಗೆಟ್ಟಿತ್ತು. ಈ ಹಿನ್ನಲೆ ವಿನಾಯಕ್​ ರವರು ಮಡದಿಯ ಆರೋಗ್ಯ ಸುಧಾರಣೆಗೆಂದು ಸ್ವಾಮೀಜಿ ಒಬ್ಬರ ಮೊರೆ ಹೋಗಿದ್ದರು. ಆವೇಳೆ ಸ್ವಾಮೀಜಿ  ನಿಮ್ಮ ಹೆಂಡತಿಯ ಆರೋಗ್ಯ ಸುಧಾರಣೆ ಆಗಬೇಕಾದರೆ ನಿಮ್ಮ ಬಳಿ ಇರುವ ಒಡವೆಯನ್ನು ಹಿಟ್ಟಿನ ಗೊಂಬೆಯೊಳಗೆ ಇಟ್ಟು 21 ದಿನ ಪೂಜೆ ಮಾಡಬೇಕೆಂದು ನಂಬಿಸಿದ್ದರು. ಅದನ್ನು ನಂಬಿದ ಸಾಗರದ ನಿವಾಸಿ​ ತನ್ನ ಬಳಿ ಇದ್ದ ಉಂಗುರ ಹಾಗೂ ಮಡದಿಯ ಮಾಂಗಲ್ಯ ಸರವನ್ನು ಹಿಟ್ಟಿನಲ್ಲಿ ಗೊಂಬೆ ಮಾಡಿ ಅದರೊಳಗೆ ಇಟ್ಟು ಸ್ವಾಮೀಜಿ ಹೇಳಿದಂತೆ ಪೂಜೆ ಮಾಡುತ್ತಿದ್ದರು. ಇದೇ ಸಮಯವನ್ನು ಉಪಯೋಗಿಸಿಕೊಂಡ ಸ್ವಾಮೀಜಿ  ಹಿಟ್ಟಿನೊಳಗಿದ್ದ ಮಾಂಗಲ್ಯ ಚೈನ್​ ಹಾಗೂ ಉಂಗುರವನ್ನು ಕದ್ದು ಪರಾರಿಯಾಗಿದ್ದರು. ಪೂಜೆ  ಬಳಿಕ ವಿಚಾರ ತಿಳಿದ ಸಾಗರದ ನಿವಾಸಿ​  ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಂಡಿದ್ದರು.

ಪ್ರಕರಣ ಸಂಬಂಧ ಪೊಲೀಸರು ತಂಡ ರಚಿಸಿ ಕಾರ್ಯಾಚರಣೆ ನಡೆಸಿದಾಗ ಪ್ರಕರಣದ  ಆರೋಪಿಯಾದ   ಬಸಯ್ಯ ಹಿರೇಮಠ್, (29) ಎಂಬಾತನು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಪೊಲೀಸರು  ಈತನನ್ನು ವಶಕ್ಕೆ ಪಡೆದು ಆರೋಪಿತನಿಂದ ಅಂದಾಜು ಮೌಲ್ಯ 3 ಲಕ್ಷದ 40  ಸಾವಿರ ರೂಪಾಯಿಗಳ 33 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಚೈನ್ ಹಾಗೂ 5 ಗ್ರಾಂ ತೂಕದ ಬಂಗಾರದ ಉಂಗುರವನ್ನು ವಶಪಡಿಸಿಕೊಂಡಿದ್ದಾರೆ.

 

        

TAGGED:
Share This Article
Leave a Comment

Leave a Reply

Your email address will not be published. Required fields are marked *