ಜಗತ್ತಿನಲ್ಲಿ ಯುದ್ಧ ಶುರುಮಾಡಿದ ಮತ್ತೆರಡು ದೇಶಗಳು! ಶಿವನ ದೇಗುಲಕ್ಕಾಗಿ ಸಮರ!? ಕುತೂಹಲದ ಸ್ಟೋರಿ

ajjimane ganesh

Thailand Cambodian Border Clashes 24  ಥಾಯ್-ಕಾಂಬೋಡಿಯಾ ಗಡಿ ಸಂಘರ್ಷ , ಒಂದು ದೇವಸ್ಥಾನಕ್ಕಾಗಿ

Thailand Cambodian Border Clashes 24  ವಿಶ್ವ ಮಟ್ಟದಲ್ಲಿ ಮತ್ತೊಂದು ಯುದ್ಧ ಆರಂಭವಾಗಿದೆ. ಥಾಯ್ಲೆಂಡ್  ಮತ್ತು ಕಾಂಬೋಡಿಯಾ ಸಮರ ಶುರುಮಾಡಿವೆ,  ವಿವಾದಿತ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ಥಾಯ್ ಅಧಿಕಾರಿಗಳು ತಿಳಿಸಿದ್ದಾರೆ ಅಂತಾ ಬಿಬಿಸಿ ವರದಿ ಮಾಡಿದೆ. ಅದರ ವರದಿಯ ಪ್ರಕಾರ, ಆಗ್ನೇಯ ಏಷ್ಯಾದ ಈ ಎರಡು ನೆರೆಹೊರೆ ರಾಷ್ಟ್ರಗಳ ನಡುವೆ ಶತಮಾನಕ್ಕೂ ಹೆಚ್ಚು ಕಾಲದಿಂದ ಇರುವ ಗಡಿ ವಿವಾದ (Border Dispute) ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ.

ಇಂದು ಮುಂಜಾನೆ ಉಭಯ ದೇಶಗಳ ನಡುವೆ  ಗುಂಡಿನ ಚಕಮಕಿ ನಡೆದಿದೆ. ಸಂಘರ್ಷಕ್ಕೆ ಒಂದು ದೇಶ ಇನ್ನೊಂದು ದೇಶದ ಮೇಲೆ ಅಪವಾದ ಹೊರುತ್ತಿಸುತ್ತಿವೆ. ಥಾಯ್ಲೆಂಡ್, ಕಾಂಬೋಡಿಯಾ ರಾಕೆಟ್‌ಗಳನ್ನು ಹಾರಿಸಿದೆ ಸಂಘರ್ಷ ಆರಂಭಿಸಿದೆ ಎಂದರೆ, ಬ್ಯಾಂಕಾಕ್ ಕಾಂಬೋಡಿಯಾ ಮಿಲಿಟರಿ ಗುರಿಗಳ ಮೇಲೆ ವಾಯುದಾಳಿ (Air Strikes) ನಡೆಸಿದೆ ಎಂದು ದೂರಿದೆ.  ಉಭಯ ದೇಶದ ರಕ್ಷಣಾ ಪಡೆಗಳು ಗಡಿಯ ಸಮೀಪವಿರುವ ತಮ್ಮ ನಾಗರಿಕರಿಗೆ ಸ್ಥಳೀಯ ಪ್ರದೇಶವನ್ನು ತೊರೆಯುವಂತೆ ಸೂಚಿಸಿದೆ. ಈ ನಡುವೆ ಥಾಯ್ಲೆಂಡ್ 40,000 ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿದೆ.  

Thailand Cambodian Border Clashes 24
Thailand Cambodian Border Clashes 24

Thailand Cambodian Border Clashes 24 

ಅಂತಾರಾಷ್ಟ್ರೀಯ ವರದಿಯ ಪ್ರಕಾರ, ಥಾಯ್ಲೆಂಡ್ ಕಾಂಬೋಡಿಯಾ ಗಡಿಯ ಬಳಿಯಲ್ಲಿ ಡ್ರೋನ್​ಗಳನ್ನು ಹಾರಿಸಿತ್ತು. ಇದು ಸಂಘರ್ಷಕ್ಕೆ ಕಾರಣವಾಯಿತು ಎನ್ನಲಾಗುತ್ತಿದೆ. ಇನ್ನೊಂದೆಡೆ ಕಾಂಬೋಡಿಯಾ ಗಡಿಯ ಬಳಿ ಇರುವ  ಹಿಂದೂ ದೇವಾಲಯದ ಕಡೆಗೆ ಥಾಯ್ಲೆಂಡ್ ಸೈನಿಕರು ಮುನ್ನುಗ್ಗಿರುವುದು ಈ ಸಮರಕ್ಕೆ ಕಾರಣ ಎನ್ನಲಾಗುತ್ತಿದೆ.  

ವಿಶೇಷ ಅಂದರೆ, ಈ ಎರಡು ದೇಶಗಳ ನಡುವಿನ ವಿಶೇಷವಾಗಿದೆ. ಅಲ್ಲದೆ ಈ ವಿವಾದಕ್ಕೆ ನೂರು ವರುಷದ ಇತಿಹಾಸವೂ ಇದೆ. ಫ್ರೆಂಚ್ ಆಕ್ರಮಣದ ಬಳಿಕ ದಾಖಲಾದ ಗಡಿಯಿಂದಾಗಿ, ಈ ಸಮಸ್ಯೆ ಆರಂಭಗೊಂಡಿತು ಎನ್ನಲಾಗುತ್ತದೆ. ಇನ್ನೂ 2008 ರಲ್ಲಿ, ಕಾಂಬೋಡಿಯಾ ವಿವಾದಿತ ಪ್ರದೇಶದಲ್ಲಿರುವ 11 ನೇ ಶತಮಾನದ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ನೋಂದಾಯಿಸಲು ಪ್ರಯತ್ನಿಸಿದಾಗ ಈ ವಿವಾದ  ವೈರತ್ವಕ್ಕೆ ತಿರುಗಿತು. ಇತ್ತೀಚೆಗೆ ಸೈನಿಕನೊಬ್ಬ ಸಾವನ್ನಪ್ಪಿದ ಬಳಿಕ ಕಾಂಬೋಡಿಯಾ ಥಾಯ್ಲೆಂಡ್ ಸಂಪರ್ಕದಿಂದ ದೂರ ಉಳಿಯಿತು. ಅಲ್ಲಿಂದ ಪರೋಕ್ಷವಾಗಿ ಸಮರ ಆರಂಭವಾಗಿ, ಇದೀಗ ಘರ್ಷಣೆಗೆ ಕಾರಣವಾಗಿದೆ. 

Malenadu Today

ಏನಿದು ದೇವಸ್ಥಾನದ ವಿವಾದ

ಖೇಮರ್​ ಸಾಮ್ರಾಜ್ಯದ ರಾಜ ಎರಡನೇ ಉದಯಾದಿತ್ಯವರ್ಮನ್ ನಿರ್ಮಿಸಿದ ಪ್ರಿ ವಿಯರ್ ದೇವಾಲಯ (Preah Vihear Temple), ಇದನ್ನು ಪ್ರಸಾದ್ ಪ್ರಿ ವಿಯರ್ ಎಂದೂ ಕರೆಯುತ್ತಾರೆ. ಈ ಶಿವ ದೇವಾಲಯವು ಕಾಂಬೋಡಿಯಾ-ಥಾಯ್ಲೆಂಡ್ ಗಡಿಯಲ್ಲಿರುವ ಡ್ಯಾಂಗ್ರೆಕ್ ಪರ್ವತ ಶ್ರೇಣಿಯ (Dângrêk Mountains) ಕಡಿದಾದ ಜಾಗದಲ್ಲಿದೆ. 

ಫ್ರೆಂಚ್ ಆಕ್ರಮಣದ ನಂತರ (ನವೆಂಬರ್ 9, 1953) ಎರಡು ರಾಷ್ಟ್ರಗಳ ಗಡಿಗಳನ್ನು ಗುರುತಿಸಲಾಯಿತು. ಆ ಸಮಯದಲ್ಲಿ, ಕಾಂಬೋಡಿಯಾ ಫ್ರೆಂಚ್ ಇಂಡೋಚೀನಾ ಆಗಿತ್ತು ಮತ್ತು ಥಾಯ್ಲೆಂಡ್ ಸಿಯಾಮ್ ಆಗಿತ್ತು. ವಸಾಹತುಶಾಹಿ ಆಡಳಿತಗಾರರು ದೇವಾಲಯವನ್ನು ಕಾಂಬೋಡಿಯಾಕ್ಕೆ ಸೇರಿಸಿದ್ದರು. ಆದರೆ  ಥಾಯ್ಲೆಂಡ್ ದೇವಾಲಯದ ಸುತ್ತಮುತ್ತಲಿನ ಭೂಮಿಯ ಮೇಲೆ ಸಾರ್ವಭೌಮತ್ವವನ್ನು (Sovereignty) ಪ್ರತಿಪಾದಿಸಲು ಪ್ರಾರಂಭಿಸಿತು.

Malenadu Today

ಈ ವಿಚಾರ 1962 ರಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯವನ್ನು (International Court of Justice – ICJ) ತಲುಪಿತು. ಅಲ್ಲಿ ತೀರ್ಪು ಕಾಂಬೋಡಿಯಾದ ಪರವಾಗಿತ್ತು. ಆಗ  ತಮ್ಮ ಪಡೆಗಳನ್ನು ಹಿಂಪಡೆಯಲು ಥಾಯ್ಲೆಂಡ್‌ಗೆ ಆದೇಶಿಸಲಾಯಿತು.  ಆನಂತರ ಥಾಯ್ಲೆಂಡ್‌  ದೇಗುಲದ ಸುತ್ತಲಿನ 4.6 ಚದರ ಕಿಲೋಮೀಟರ್ ಪ್ರದೇಶದ ನಿಖರ ಗಡಿರೇಖೆಯ ಬಗ್ಗೆ ವಿವಾದವೆತ್ತಿತ್ತು.  2008 ರಲ್ಲಿ, ಕಾಂಬೋಡಿಯಾ ವಿವಾದಿತ ಪ್ರದೇಶದಲ್ಲಿರುವ 11 ನೇ ಶತಮಾನದ ದೇವಾಲಯವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ (UNESCO World Heritage Site) ಎಂದು ನೋಂದಾಯಿಸಲು ಪ್ರಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.  

Malenadu Today

Thailand Cambodian Border Clashes 24  for shiva temple

ಥಾಯ್ಲೆಂಡ್, ಕಾಂಬೋಡಿಯಾ, ಗಡಿ ಸಂಘರ್ಷ,  Thailand, Cambodia, Border Clash,  UNESCO Temple,  #ThaiCambodiaConflict 

 

Share This Article