ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 : ಸೊರಬ : ಶಿವಮೊಗ್ಗ ಪೊಲೀಸರು ದೇವಸ್ಥಾನಗಳ ಸರಣಿ ಕಳ್ಳತನ ಪ್ರಕರಣವೊಂದನ್ನ ಭೇದಿಸಿದ್ದು, ಬರೋಬ್ಬರಿ ನಾಲ್ಕು ಲಕ್ಷ ಮೌಲ್ಯದ ಚಿನ್ನಾಭರಣ ಸಹಿತ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.

ಸೊರಬ : ಕೋಣ ತಿವಿದು ವ್ಯಕ್ತಿ ಸಾವು
ಸೊರಬ ಪೊಲೀಸ್ ಠಾಣೆ ಮತ್ತು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದೇವಸ್ಥಾನಗಳಲ್ಲಿ ಕಳ್ಳತನ ನಡೆಸಿದ್ದ ಆರೋಪಿಯನ್ನು ಮಾಲು ಸಮೇತವಾಗಿ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಪೂರ್ತಿ ವಿವರ/Temple Theft case
ಕಳೆದ ಮೇ 26, 2025 ರಂದು ಕಡಸೂರು ಗ್ರಾಮದ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಕಳ್ಳತನವಾಗಿರುವ ಬಗ್ಗೆ ಸೊರಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು. ಇದರ ನಡುವೆ ದೀಪಾವಳಿ ಹಬ್ಬದ ಪ್ರಯುಕ್ತ ಗಸ್ತಿನಲ್ಲಿ ನಿರತರಾಗಿದ್ದ ಸೊರಬ ಠಾಣೆಯ ಸಿಬ್ಬಂದಿಗಳಿಗೆ ಅಕ್ಟೋಬರ್ 20, 2025 ರಂದು ಮಧ್ಯಾಹ್ನ 1:30 ರ ಅನುಮಾನಸ್ಪದ ವ್ಯಕ್ತಿಯೊಬ್ಬ ಪತ್ತೆಯಾಗಿದ್ದ.
ಸಾಗರ ಬಸ್ ನಿಲ್ದಾಣದ ಬಳಿ ಬ್ರೇಕ್ ಫೇಲ್! ಬೈಕ್ಗಳ ಮೇಲೆ ಹರಿದ ಖಾಸಗಿ ಬಸ್
ಸೊರಬ ಪಟ್ಟಣದ ಪುರಸಭೆ ವೃತ್ತದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಆತನನ್ನು ಪೊಲೀಸರು ಹಿಡಿದು ತಂದು ವಿಚಾರಿಸಿದ್ದಾರೆ. ಆಗ ಕಳ್ಳತನದ ಕೇಸ್ಗಳು ಬಯಲಿಗೆ ಬಂದಿದೆ. ಪೊಲೀಸರ ವಶಕ್ಕೆ ಬಂದ ವ್ಯಕ್ತಿ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸವಳಂಗ ಗ್ರಾಮದ 24 ವರ್ಷದ ಸಂದೀಪ ಕೆ ಎಂಬುದು ಗೊತ್ತಾಗಿದೆ.

ಈತ ಸೊರಬದ ಕಡಸೂರು ಮಾರಿಕಾಂಬ ದೇವಸ್ಥಾನ, ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಯಲಕುಂಡ್ಲಿ ರಾಚಮ್ಮ ದೇವಸ್ಥಾನ, ದಿಗಟೆಕೊಪ್ಪ ಚೌಡಮ್ಮ ದೇವಸ್ಥಾನ, ಶಿರೂರು-ಆಲಕ್ಕೆ ಯಕ್ಷಾಂಬ ದೇವಸ್ಥಾನ, ಬಲೆಗಾರು ರೇಣುಕಾಂಬ ದೇವಸ್ಥಾನ, ಮರತ್ತೂರು ದುರ್ಗಮ್ಮ ದೇವಸ್ಥಾನ ಹಾಗೂ ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೊಪ್ಪ ಕೋಟೇಶ್ವರ ದೇವಸ್ಥಾನಗಳು ಸೇರಿದಂತೆ ಒಟ್ಟು 7 ಪ್ರಕರಣಗಳಲ್ಲಿ ಕಳ್ಳತನವೆಸಗಿರುವುದನ್ನ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ.
ವಿಚಾರಣೆ ಮುಗಿದ ಬೆನ್ನಲ್ಲೆ ಪೊಲೀಸರು ಆರೋಪಿಯಿಂದ ಒಟ್ಟು 36 ಗ್ರಾಂ ಬಂಗಾರದ ಒಡವೆಗಳನ್ನು (ಅಂದಾಜು ಮೌಲ್ಯ ₹ 4,00,000) ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಳೆ ಸುದ್ದಿ | ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಆರೆಂಜ್ ಅಲರ್ಟ್! ಮುಂದುವರಿಯಲಿದೆ ವರ್ಷಧಾರೆ
ಸಿ.ಪಿ.ಐ ಮಹಾಂತೇಶ ಕೆ. ಲಂಬಿ ಮತ್ತು ಪಿ.ಎಸ್.ಐ ನವೀನ್ ಎಂ.ಎಚ್. ನೇತೃತ್ವದ ಸೊರಬ ಪೊಲೀಸ್ ಠಾಣೆಯ ನಾಗೇಶ, ರಾಘವೇಂದ್ರ, ಲೋಕೇಶ್, ವಿನಯ, ಗಿರೀಶ್, ಹನುಮಂತ, ರಾಜುನಾಯ್ಕ, ಮಲ್ಲೇಶ, ಶಶಿಧರ, ಸಂದೀಪ, ಸೋಮಶೇಖರ, ಮೋಹನ, ರವೀಂದ್ರ, ಹೇಮಲತಾ ಮತ್ತು ರೂಪಾಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Temple Theft case Soraba Police Arrest Accused Recover Gold Worth ₹4 Lakh an accused for a series of temple thefts across Soraba and Sagara regions.

ದಾಖಲೆ ಬರೆದ ಸರಕು! ಹಸಕ್ಕೆ ಐದಂಕಿಯ ರೇಟು! ಎಷ್ಟಿದೆ ಅಡಿಕೆ ದರ?
Temple theft accused arrest, Soraba police recover gold, Sandeep K arrest, Kadsoor Marikamba temple theft, Temple theft solved Shivamogga, Sagara temple robbery case, Gold recovery from temple thief, ದೇವಸ್ಥಾನ ಕಳ್ಳತನ, ಸೊರಬ ಪೊಲೀಸ್, ಚಿನ್ನಾಭರಣ ವಶ, ಸರಣಿ ಕಳ್ಳ, ಸಂದೀಪ ಕೆ ಬಂಧನ, ಶಿವಮೊಗ್ಗ ಕಳ್ಳತನ ಪ್ರಕರಣ, ಮಾರಿಕಾಂಬ ದೇವಸ್ಥಾನ,
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
