Telangana labourer ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 28, 2025 : ನಂಬಿಕೆ ಅನ್ನೊದೇ ದ್ರೋಹಿಗಳ ಆಸ್ತಿಯಾಗಿದೆ ಎನ್ನುವುದನ್ನ ಇತ್ತೀಚಿನ ಕ್ರೈಂ ಪ್ರಕರಣಗಳೇ ಹೇಳುತ್ತಿದೆ. ಇದಕ್ಕೆ ಇನ್ನೊಂದು ಉದಾಹರಣೆ ಶಿವಮೊಗ್ಗದಲ್ಲಿಯೇ ನಡೆದಿದೆ. ವಿಷಯ ಏನಂದ್ರೆ, ಮಂಗಳವಾದ್ಯ ನುಡಿಸೋಕೆ ಅಂತಾ ತೆಲಂಗಾಣ ರಂಗಾರೆಡ್ಡಿ ಜಿಲ್ಲೆಗೆ ಹೋದವನೊಬ್ಬ ಅಲ್ಲಿಯೇ ಕಾರ್ಮಿಕನೊಬ್ಬನಿಗೆ ಶಿವಮೊಗ್ಗದಲ್ಲಿ ಮೋಸ ಮಾಡಿದ್ದಾನೆ. ಇಡೀ ವಂಚನೆ ಪ್ರಕರಣ ನಡೆದಿರೋದು ನಂಬಿಕೆಯ ಹೆಸರಿನಲ್ಲಿ.. Telangana labourer
ನಾನೂ ಸಹ ಆಗ್ತೀನಿ! ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ!
ಅಸಲಿಗೆ ಕ್ರೈಂ ಕಥೆ ಆರಂಭವಾಗುವುದು ರಂಗಾರೆಡ್ಡಿ ಜಿಲ್ಲೆ ಶಂಶಾಬಾದ್ನಲ್ಲಿ. ಇಲ್ಲಿನ ನಿವಾಸಿಯೊಬ್ಬರಿಗೆ ಉಡುಪಿಯ ಸುರೇಶ ಅಂತ ಹೇಳಿಕೊಂಡವನೊಬ್ಬ ಪರಿಚಯವಾಗಿದ್ದ. ಮಂಗಳವಾದ್ಯ ನುಡಿಸಲು ಹೋಗಿದ್ದ ಸುರೇಶನ ಮಾತು, ಸಂತ್ರಸ್ತರ ನಂಬಿಕೆ ಗಿಟ್ಟಿಸಿತ್ತು. ಹೀಗೆ ಮಾತ್ ಮಾತಲ್ಲೆ ಇದ್ದ ಸಂಪರ್ಕವನ್ನು ಬಳಸಿಕೊಂಡ ಸುರೇಶ ಒಂದಿನ ಸಂತ್ರಸ್ತರಿಗೆ ಫೋನ್ ಮಾಡಿ, ಚಿನ್ನ ಸಿಕ್ಕಿದೆ ಕಣ್ರಿ, ಬೇಕಿದ್ರೆ ಬನ್ನಿ ಅಂತಾ ಹೇಳಿದ್ದ. ಶುರುವಿನಲ್ಲಿ ಅನುಮಾನದಲ್ಲಿದ್ದ ಸಂತ್ರಸ್ತ, ದೇವರು ಕೊಟ್ಟ ವರ ಅಂತಾ ಹೇಳುತ್ತಿದ್ದಾನೆ ಸುರೇಶ.
ನನ್ನ ಭಾಗ್ಯದ ಬಾಗಿಲು ತೆರೆಯಬಹುದು ಅಂದ್ಕೊಂಡು ಸುರೇಶ್ನನ್ನ ಭೇಟಿಯಾಗೋಕೆ ಚಿತ್ರದುರ್ಗಕ್ಕೆ ಬಂದಿದ್ದ. ಅಲ್ಲಿ ಸುರೇಶ್ ಹತ್ರ ಮೂರು ಕಾಯಿನ್ ಇಸ್ಕೊಂಡು ವಾಪಸ್ ತೆಲಂಗಾಣಕ್ಕೆ ತೆರಳಿದ್ದ ಸಂತ್ರಸ್ತರು, ಚಿನ್ನದ ನಾಣ್ಯವನ್ನು ಒರೆ ಹಚ್ಚಿಸಿ ಪರೀಕ್ಷೆ ಮಾಡಿಸಿದ್ರು. ಒರಿಜಿನಲ್ ಅನ್ನೊದು ಗ್ಯಾರಂಟಿ ಆಯ್ತಲ್ಲ. ತಕ್ಷಣಕ್ಕೆ ಸುರೇಶ ಸಂತ್ರಸ್ತನ ಕಣ್ಣಿಗೆ ಕುಬೇರನಾಗಿ ಕಾಣಿಸಿದ್ದ. ಬಂಗಾರದ ಆಸೆಯ ನಂಬಿಕೆ ಮನದಲ್ಲಿಯೇ ಹಣ್ಣಾದ ಹಿನ್ನೆಲೆಯಲ್ಲಿ ನಾಲ್ಕು ಲಕ್ಷಕ್ಕೆ ಡೀಲ್ ಕುದುರಿತ್ತು. ಸಂತ್ರಸ್ತ ದುಡ್ಡಿನ ಕಂತೆ ಹಿಡ್ಕೊಂಡು ಚಿತ್ರದುರ್ಗಕ್ಕೆ ಬಂದಿದ್ದು ಆಯ್ತು. Telangana labourer

ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೆಯಿತು : ಇ-ಪೇಪರ್ ಓದಿ
ಇಲ್ಲೊಂದು ಟ್ವಿಸ್ಟ್ ಕೊಟ್ಟ ಸುರೇಶ, ಚಿತ್ರದುರ್ಗ ಬೇಡ, ಶಿವಮೊಗ್ಗಕ್ಕೆ ಬನ್ನಿ ಅಂದಿದ್ದ, ದೇವರ ಕೊಟ್ಟ ಚಿನ್ನ ಬಿಡುಕಾಗುತ್ತಾ ಎನ್ನುತ್ತಲೇ ಸಂತ್ರಸ್ತನು ಸಹ ಚಿತ್ರದುರ್ಗದಿಂದ ಶಿವಮೊಗ್ಗ ಬಸ್ ಹತ್ತಿಕೊಂಡು ಬಂದಿದ್ದ. ಆನಂತರ ಸಿಟಿಯಲ್ಲಿ ಸಂತ್ರಸ್ತನಿಗೆ ಕರೆ ಮಾಡಿದ ಸುರೇಶ ಹೊಸ ಸೇತುವೆ ದಾಟಿದ ತಕ್ಷಣ ಸಿಗುವ ಹೊಸ ಪ್ಲೈ ಓವರ್ ಹತ್ತಿರ ಬಂದುಬಿಡಿ ಅಂತಾ ಕರೆಸಿಕೊಂಡವನೇ ಆತನ ಬಳಿ ಇದ್ದ ಚಿನ್ನದ ನಾಣ್ಯಗಳ ಚೀಲವನ್ನು ಸಂತ್ರಸ್ತನ ಕೈಗೆ ಕೊಟ್ಟು ಶುಭವಾಗಲಿ ಎಂದಿದ್ದ.
ಸಂತ್ರಸ್ತನು ಸಹ ಆಡಿದ ಮಾತಿನಂತೆ ನಾಲ್ಕು ಲಕ್ಷಕೊಟ್ಟು ಅಲ್ಲಿಂದ ಕಾಲ್ಕಿತ್ತಿದ್ದರು. ಆದರೆ, ತನ್ನ ತವರಿಗೆ ಹೋದ ಸಂತ್ರಸ್ತನಿಗೆ ಬಂಗಾರದ ನಿದಿಯ ಅಸಲಿಯತ್ತು ನಕಲಿ ಎಂಬುದು ಗೊತ್ತಾಗಿದೆ. ಹಾಗಾಗಿ ಬೇರೆ ವಿಧಿಯಿಲ್ಲದೆ ಪೊಲೀಸರೊಂದೆ ದುಡ್ಡು ವಾಪಸ್ ಕೊಡಿಸುವ ನಂಬಿಕೆ ಎಂದುಕೊಂಡು ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾನೆ. ಪೊಲೀಸರು THE BHARATIYA NYAYA SANHITA (BNS), 2023 (U/s-318(4)) ಅಡಿಯಲ್ಲಿ ಕೇಸ್ ಹಾಕಿ ಇನ್ವಿಸ್ಟಿಗೇಷನ್ ಮಾಡ್ತಿದ್ದಾರೆ.

ನಂಬಿ ತೆಲಂಗಾಣದಿಂದ ಬಂದವನಿಗೆ ಸಿಕ್ಕಿದ್ದು ಫೇಕ್ ಚಿನ್ನ. ನಿಮಗೂ ಸಹ ಇಂತಹದ್ದೊಂದು ಆಪರ್ ಬಂದರೆ, ತಕ್ಷಣ ಪೊಲೀಸರಿಗೆ ಹೇಳಿಬಿಡಿ,, ಯಾರಿಗೂ ಹೇಳ್ಬೇಡಿ ಅಂತಾ ಹೋದರೆ, ನಿಮಗೂ ನುಕ್ಸಾನು ಗ್ಯಾರಂಟಿ..
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
