social media : ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿದೆ ಕಾಡಾ ಕಾರ್ತಿ ವಿಡಿಯೋ
social media : ಕಾಡಾ ಕಾರ್ತಿಕ್ ಹೆಸರಿನ ಇನ್ ಸ್ಟಾ ಗ್ರಾಮ್ ಖಾತೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಿನಿಮಾ ಮ್ಯೂಸಿಕ್‌ಗಳ ಜೊತೆಯಲ್ಲಿ ಕಾಡಾ ಕಾರ್ತಿಯನ್ನು ತೋರಿಸುವ ಪ್ರಯತ್ನಗಳು ನಡೆಯುತ್ತಿದೆ.
ಹಂದಿ ಅಣ್ಣಿ ಕೊಲೆ ಕೇಸ್‌ನಲ್ಲಿ ಕಾಡಾ ಕಾರ್ತಿ ಸೇರಿದಂತೆ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದರು. ಈ ತೀರ್ಪು ಹೊರಬಿದ್ದ ಬೆನ್ನಲ್ಲೆ ಕಾಡಾ ಶಿವಮೊಗ್ಗಕ್ಕೆ ಗ್ರಾಂಡ್ ಎಂಟ್ರಿ ಕೊಡುತ್ತಾನೆ ಎನ್ನುವ ರೂಮರ್ ರೌಡಿ ವಲಯದಲ್ಲಿತ್ತು. ಇದರ ಬೆನ್ನಲ್ಲೆ ಕಾಡಾ ಕಾರ್ತಿ ಹೆಸರಿನ ಇನ್ ಸ್ಟಾಗ್ರಾಮ್ ಅಕೌಂಟ್ ನಲ್ಲಿ ಪೋಸ್ಟ್ ಆಗಿರುವ ವಿಡಿಯೋದಲ್ಲಿ ಕಾರ್ತಿ ಐಶಾರಾಮಿ ಕಾರಿನಲ್ಲಿ ಬರುತ್ತಿರುವ ರೀತಿಯ ದೃಶ್ಯಗಳು ಕಾಣುತ್ತಿವೆ ಮತ್ತು ಆತನ ಹಿಂದೆ ಹಲವಾರು ಹುಡುಗರು ಇರುವುದನ್ನ ಕಾಣಬಹುದು. ಸದ್ಯ ಕಾಡಾ ಕಾರ್ತಿ ತನ್ನ ವಿರುದ್ದದ ಕೇಸ್ನಿಂದ ಮುಕ್ತವಾಗಿದ್ದಾನೆ.
