SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 20, 2024 Shiva Rajkumar
ಸದ್ಯ ದೇಶದೆಲ್ಲೆಡೆ ಶಿವರಾಜ್ ಕುಮಾರ್ರವರ ಒಂದು ವಿಡಿಯೋ ದೇಶೆದೆಲ್ಲಡೆ ಸಖತ್ ವೈರಲ್ ಆಗುತ್ತಿದೆ. ಸೈಮಾ ಆವಾರ್ಡ್ ಸಮಾರಂಭದ ವೇಳೆ ನಡೆದ ಘಟನೆಯ ವಿಡಿಯೋ ಇದಾಗಿದೆ
ಶಿವರಾಜ್ ಕುಮಾರ್ Shiva Rajkumar
ವಿಡಿಯೋದಲ್ಲಿ ನಟಿ ಐಶ್ವರ್ಯಾ ರೈ, ಶಿವಣ್ಣರನ್ನ ನೋಡುತ್ತಲೇ ಅವರಿಗೆ ಕೈ ಮುಗಿದು ಕುಶಲೋಪರಿ ವಿಚಾರಿಸಿದ್ದಾರೆ. ಆ ಬಳಿಕ ತಮ್ಮ ಮಗಳನ್ನ ಶಿವರಾಜ್ ಕುಮಾರ್ Shiva Rajkumar ರವರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಐಶ್ವರ್ಯವರ ಮಗಳನ್ನ ಮಾತನಾಡಿಸಿ ಶಿವರಾಜ್ ಕುಮಾರ್ ಆಕೆಗೆ ಶೇಕ್ ಹ್ಯಾಕ್ ನೀಡಲು ಮುಂದಾದಾಗ, ಐಶ್ವರ್ಯರವರ ಪುತ್ರಿ ಶಿವಣ್ಣರಿಗೆ ಕೈ ಮುಗಿದು ಆ ಬಳಿಕ ಕಾಲಿಗೆ ಬಿದ್ದು ಆಶೀರ್ವಾದ ಕೇಳುತ್ತಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಐಶ್ವರ್ಯಾ ರೈ ಮಗಳ ಗುಣವನ್ನ ಮೆಚ್ಚಿಕೊಳ್ಳುತ್ತಿದ್ದಾರೆ.
ದುಬೈನಲ್ಲಿ ನಡೆದ ಸೌತ್ ಇಂಡಿಯನ್ ಇಂಟರ್ನ್ಯಾಶನಲ್ ಮೂವೀ ಅವಾರ್ಡ್ಸ್ (SIIMA) 2024 Ponniyin Selvan II ಗಾಗಿ ಐಶ್ವರ್ಯಾ ರೈ ಅವಾರ್ಡ್ ಪಡೆದಿದ್ದರು. ಅವರು ಆವಾರ್ಡ್ ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗ, ವೇದಿಕೆ ಕೆಳಗಡೆ ಶಿವಣ್ಣ ನಡೆದು ಬರುತ್ತಿದ್ದರು, ಅವರನ್ನ ಭೇಟಿಯಾದ ಐಶ್ವರ್ಯಾ ಮತ್ತು ಅವರ ಮಗಳು ಆರಾಧ್ಯ ಸೂಪರ್ಸ್ಟಾರ್ ಶಿವ ರಾಜ್ಕುಮಾರ್ ರವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.ಈ ವೇಳೆ ನಡೆದ ವಿಡಿಯೋ ಲಿಂಕ್ನ್ನ ಐಶ್ವರ್ಯಾ ರೈ ಬಚ್ಚನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ವಿಡಿಯೋಗೆ ಬಂದ ಕಾಮೆಂಟ್ಗಳನ್ನ ಸಹ ಕಾಣ ಬಹುದಾಗಿದೆ.

View this post on Instagram
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ