SHIVAMOGGA NEWS TODAY

ಶಿವಮೊಗ್ಗ: ತುಂಗಾನಗರದಲ್ಲಿ ಯುವಕನ ಶವ ಪತ್ತೆ; ಗೆಳೆಯನ ವಿರುದ್ಧ ಕೊಲೆ ಆರೋಪ ?

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Shivamogga ಶಿವಮೊಗ್ಗ: ನಗರದ ತುಂಗಾನಗರ ಸಮೀಪದ ಕಾಮತ್ ಲೇಔಟ್‌ನ ತೋಟವೊಂದರ ಬಳಿ ಯುವಕನೊಬ್ಬ ಶವವಾಗಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ. ಮೇಲಿನ ತುಂಗಾನಗರ ನಿವಾಸಿ ಮಂಜುನಾಥ್ (24) ಮೃತಪಟ್ಟ ದುರ್ದೈವಿ.

ಶಿವಮೊಗ್ಗ: ಜ್ಯೋತಿಷಿ ಕಮಲಾಕರ್ ಭಟ್‌ಗೆ ಪೋ*ಕ್ಸೋ ಸಂಕಷ್ಟ; 2 ದಿನ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್ 

ಪ್ರಾಥಮಿಕ ಮಾಹಿತಿಯ ಪ್ರಕಾರ, ಮಂಜುನಾಥ್ ಅಡಿಕೆ ಆರಿಸುವ ಹಾಗೂ ಮೂಟೆ ಹೊರುವ ಕೆಲಸ ಮಾಡುತ್ತಿದ್ದನು. ವಿಪರೀತ ಕುಡಿತದ ಚಟ ಹೊಂದಿದ್ದ ಈತ, ಒಂದು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟು ಮನೆಯಲ್ಲಿದ್ದನು. ನಿನ್ನೆ ಬೆಳಿಗ್ಗೆ ಕೆಲಸದ ನಿಮಿತ್ತ ಮನೆಯಿಂದ ಹೊರಹೋದವನು ಇಂದು ಶವವಾಗಿ ಪತ್ತೆಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಸೋಕೋ ತಂಡ ಹಾಗೂ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದಾರೆ.

ತಮ್ಮನ ಸಾವಿಗೆ ಸಂತೋಷ್​ ಕಾರಣ?

ಇನ್ನೂ ಘಟನೆಯ ಕುರಿತಾಗಿ ಮುಂಜುನಾಥ್​ ಅಕ್ಕ ಲಕ್ಷ್ಮೀದೇವಿ ಸುದ್ದಿಗಾರರೊಂದಿಗೆ ಮಾತನಾಡಿ ನನ್ನ ತಮ್ಮನ ಸಾವಿಗೆ ಆತನ ಗೆಳೆಯ ಸಂತೋಷ್​ ಕಾರಣ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಮಂಜುನಾಥ್ ಬಳಿ ಸುಮಾರು 20 ರಿಂದ 30 ಸಾವಿರ ಹಣವಿದ್ದು, ಅದನ್ನು ಖರ್ಚು ಮಾಡಿಸುವ ಉದ್ದೇಶದಿಂದ ಆತನ ಗೆಳೆಯ ಸಂತೋಷ್ ನಿನ್ನೆ ಬೆಳಿಗ್ಗೆ ಮನೆಗೆ ಬಂದು ಆತನನ್ನು ಕರೆದುಕೊಂಡು ಹೋಗಿದ್ದನು ಎಂದು ಅವರು ತಿಳಿಸಿದ್ದಾರೆ. 

ಸದ್ಯ ಆರೋಪಕ್ಕೊಳಗಾದ ಸ್ನೇಹಿತ ಸಂತೋಷ್ ನಾಪತ್ತೆಯಾಗಿದ್ದು, ಆತನೇ ತನ್ನ ತಮ್ಮನ ಸಾವಿಗೆ ಕಾರಣ ಎಂದು ಲಕ್ಷ್ಮೀದೇವಿ ಅನುಮಾನ ವ್ಯಕ್ತಪಡಿಸಿದ್ದಾರೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿರುವ ಗೆಳೆಯನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Shivamogga Youth Found Dead, Friend Suspected

Shivamogga Youth Found Dead, Friend Suspected
Shivamogga Youth Found Dead, Friend Suspected
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.