shivamogga news today ಜುಲೈ 10 : ಶಿವಮೊಗ್ಗದಲ್ಲಿ ಗುರು ಪೂರ್ಣಿಮಾ ಸಂಭ್ರಮ: ರಾಘವೇಂದ್ರ ಸ್ವಾಮಿ ಮಠದಲ್ಲಿ ಫುಲ್​ ರಶ್,  ಟ್ರಾಫಿಕ್ ಜಾಮ್!

prathapa thirthahalli
Prathapa thirthahalli - content producer

shivamogga news today : ಶಿವಮೊಗ್ಗದಲ್ಲಿ ಗುರು ಪೂರ್ಣಿಮಾ ಸಂಭ್ರಮ: ರಾಘವೇಂದ್ರ ಸ್ವಾಮಿ ಮಠದಲ್ಲಿ ಫುಲ್​ ರಶ್,  ಟ್ರಾಫಿಕ್ ಜಾಮ್!

ಇಂದು ರಾಜ್ಯದಾದ್ಯಂತ ಗುರು ಪೂರ್ಣಿಮವನ್ನು ಬಹಳಾ ಶ್ರದ್ದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಅನೇಕ ಜನರು ತಮ್ಮಿಷ್ಟದ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಅದರಂತೆ ಇಂದು ಶಿವಮೊಗ್ಗದಲ್ಲಿಯೂ ಸಹ ಗುರು ಪೂರ್ಣಿಮದ ಪ್ರಯುಕ್ತ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.

ಶಿವಮೊಗ್ಗದ ತಿಲಕ್ ನಗರದಲ್ಲಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರು ಪೂರ್ಣಿಮಾ ಪ್ರಯುಕ್ತ ನೂರಾರು ಭಕ್ತರು ಜಮಾಯಿಸಿದ್ದರು. ಬೆಳಗ್ಗಿನ ಜಾವದಿಂದಲೇ ಭಕ್ತಾದಿಗಳು ಆಗಮಿಸಿ ಗುರು ರಾಯರ ದರ್ಶನ ಪಡೆದು ಪುನೀತರಾದರು. ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಮಠದ ಸುತ್ತಮುತ್ತಲ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಚೇರಿ ಸೇರಿದಂತೆ ಇತರೆ ಕೆಲಸಗಳಿಗೆ ತೆರಳಬೇಕಿದ್ದ ಜನರು ಟ್ರಾಫಿಕ್ ಸಮಸ್ಯೆಯಿಂದಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

- Advertisement -
shivamogga news today ತಿಲಕ್​ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಟ್ರಾಫಿಕ್​ ಜಾಮ್​
ತಿಲಕ್​ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಟ್ರಾಫಿಕ್​ ಜಾಮ್​
shivamogga news today ತಿಲಕ್​ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಟ್ರಾಫಿಕ್​ ಜಾಮ್​
shivamogga news today ತಿಲಕ್​ ನಗರದ ರಾಘವೇಂದ್ರ ಸ್ವಾಮಿ ಮಠದಲ್ಲಿ ಟ್ರಾಫಿಕ್​ ಜಾಮ್​
Share This Article
Leave a Comment

Leave a Reply

Your email address will not be published. Required fields are marked *