shivamogga man shot in kashmir : ಕಾಶ್ಮೀರದಲ್ಲಿ ನಡೆದ ಉಗ್ರರ ಕೃತ್ಯವನ್ನು ಖಂಡಿಸಿ ಶಿವಮೊಗ್ಗದಲ್ಲಿ ನಿನ್ನೆ ರಾತ್ರಿಯೇ ಪ್ರತಿಭಟನೆಗಳು ನಡೆದಿವೆ. ಭಯೋತ್ಪಾದಕ ಕೃತ್ಯವನ್ನ ಖಂಡಿಸಿ ಉಷಾ ನರ್ಸಿಂಗ್ ಹೋಮ್ ವೃತ್ತದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪ್ರತಿಭಟನೆ ನಡೆಸಿದೆ. ಈ ವೇಳೆ ಕಾರ್ಯಕರ್ತರು ಶಿವಮೊಗ್ಗದ ಮಂಜುನಾಥ್ರವರ ಸಾವಿಗೆ ಸಂತಾಪ ಸೂಚಿಸಿದರು. ಅಲ್ಲದೆ ಉಗ್ರರ ಪ್ರತಿಕೃತಿ ದಹಿಸಿ, ಆಕ್ರೋಶ ಹೊರಹಾಕಿದರು.
ಶಿವಮೊಗ್ಗದಲ್ಲಿ ತೀವ್ರ ಆಕ್ರೋಶ : shivamogga man shot in kashmir
ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಕಾಶ್ಮೀರದಲ್ಲಿ ಹೊಸ ಸರ್ಕಾರ ಬಂದಮೇಲೆ ಭಯೋತ್ಪಾದನೆಗೆ ಉತ್ತೇಜನ ಸಿಕ್ಕಂತಾಗಿದೆ ಎಂದು ಆಕ್ರೋಶ ಹೊರಹಾಕಿದ ಮುಖಂಡರು ಉಗ್ರರ ತಾಕತ್ತು ಮುರಿಯುವ ಶಕ್ತಿ ಭಾರತಕ್ಕಿದೆ ಎಂದರು.
ಇದೇ ವೇಳೆ ಇತ್ತ ರಾಮಣ್ಣ ಶ್ರೇಷ್ಟಿ ಪಾರ್ಕ್ ಬಳಿಯಲ್ಲಿ ಬಿಜೆಪಿ ಮುಖಂಡರು ಮಂಜುನಾಥ್ರವರ ಭಾವಚಿತ್ರ ಹಿಡಿದು ಮೌನಾಚರಣೆ ನಡೆಸಿದರು. ಮೃತರಿಗೆ ಸಂತಾಪ ಸೂಚಿಸಿ ನಡೆದ ಘಟನೆಯನ್ನು ಖಂಡಿಸಿದರು. ದೀಪ ಹಚ್ಚಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಸ್ಎನ್ ಚನ್ನಬಸಪ್ಪರವರು ಕಾಶ್ಮೀರದಲ್ಲಿ ಪ್ರವಾಸಕ್ಕೆ ತೆರಳಿದ್ದವರನ್ನು ಹಿಂದೂ ಎಂಬುದನ್ನು ಅರಿತೇ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಕುಟುಂಬಸ್ಥರಿಗೆ ಸಾಂತ್ವನ : shivamogga man shot in kashmir
ಇನ್ನೂ ಮಂಜುನಾಥ್ರವರ ಕುಟುಂಬಕ್ಕೆ ಮುಖಂಡರು ವಿಷಯ ತಿಳಿಯುತ್ತಲೇ ತೆರಳಿ ಅವರ ಸಂಬಂಧಿಕರಿಗೆ ದೈರ್ಯ ತುಂಬಿದ್ದಾರೆ. ಸಂಸದ ಬಿವೈ ರಾಘವೇಂದ್ರ, ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಶಾಸಕ ಚನ್ನಬಸಪ್ಪ ಸೇರಿದಂತೆ ವಿವಿದ ಮುಖಂಡರು ಮಂಜುನಾಥ್ರವರ ಮನೆಗೆ ತೆರಳಿ ಸಂತಾಪ ಸೂಚಿಸಿದರು. ಸಂಬಂಧಿಕರ ಜೊತೆ ಮಾತನಾಡಿ , ಮುಂದಿನ ಪ್ರಕ್ರಿಯೆಗಳ ಬಗ್ಗೆ ಚರ್ಚಿಸಿದರು. ಸಚಿವರ ಬಳಿ ಮಾತನಾಡುವ ಪ್ರಯತ್ನ ಮಾಡಿ ದೈರ್ಯ ತುಂಬಿದರು. ಅಲ್ಲದೆ ಘಟನೆಯನ್ನು ಖಂಡಿಸಿ ಆಕ್ರೋಶ ಹೊರಹಾಕಿದರು.