shivamogga City Corporation news : K. Mayannagowda Reappointed as Commissioner Shivamogga news :
ಶಿವಮೊಗ್ಗ ಮಹಾನಗರ ಪಾಲಿಕೆಗೆ ಮತ್ತೆ ಕೆ. ಮಾಯಣ್ಣಗೌಡ ಅವರ ಎಂಟ್ರಿಯಾಗಿದೆ. ಹಾಲಿ ಆಯುಕ್ತೆ ಕವಿತಾ ಯೋಗಪ್ಪನವರ್ರನ್ನು ವರ್ಗಾವಣೆ ಮಾಡಲಾಗಿದೆ. ಈ ಸಂಬಂಧ ಅಧಿಕೃತ ಆದೇಶ ಹೊರಬಿದ್ದಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಕೆ. ಮಾಯಣ್ಣಗೌಡರನ್ನು ನೇಮಕ ಮಾಡಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ್ ಅವರು ಆದೇಶ ಹೊರಡಿಸಿದ್ದಾರೆ. ಕಳೆದ ವರ್ಷ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಕೆ. ಮಾಯಣ್ಣಗೌಡ ರವರನ್ನು 2024ರ ಜೂನ್ 8 ರಂದು ವರ್ಗಾವಣೆ ಮಾಡಲಾಗಿತ್ತು. ಇದೀಗ ಹೆಚ್ಚುಕಮ್ಮಿ ವರ್ಷದ ನಂತರ ಅದೇ ದಿನಾಂಕದ ಸಮಯಕ್ಕೆ ಅವರ ವರ್ಗಾವಣೆ ಆಗಿದೆ. ಈ ನಡುವೆ ಪ್ರಸ್ತುತ ಶಿವಮೊಗ್ಗ ಪಾಲಿಕೆ ಆಯುಕ್ತರಾಗಿದ್ದ ಡಾ. ಕವಿತಾ ಯೋಗಪ್ಪನವರ್ ಅವರಿಗೆ ಮುಂದಿನ ಸ್ಥಳ ತೋರಿಸಿಲ್ಲ. ಬದಲಾಗಿ ಸ್ಥಳ ನಿಯುಕ್ತಿಗಾಗಿ ಸಂಬಂಧಪಟ್ಟ ಪ್ರಾಧಿಕಾರದಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಸದ್ಯ ಮಾಯಣ್ಣಗೌಡರ ವರ್ಗಾವಣೆ ತೀವ್ರ ಕುತೂಹಲ ಹಾಗೂ ರಾಜಕಾರಣದ ಚರ್ಚೆಗಳಿಗೆ ಕಾರಣವಾಗಿದೆ.
shivamogga City Corporation news
ಶಿವಮೊಗ್ಗ ಮಹಾನಗರ ಪಾಲಿಕೆ, ಕೆ. ಮಾಯಣ್ಣಗೌಡ, ಪಾಲಿಕೆ ಆಯುಕ್ತ, ಡಾ. ಕವಿತಾ ಯೋಗಪ್ಪನವರ್, ಶಿವಮೊಗ್ಗ ಸುದ್ದಿ, ನಗರಾಭಿವೃದ್ಧಿ ಇಲಾಖೆ, ಸರ್ಕಾರಿ ವರ್ಗಾವಣೆ, ಸ್ಥಳೀಯ ಆಡಳಿತ., Shivamogga City Corporation, K. Mayannagowda, Commissioner Shivamogga, Dr. Kavitha Yogappanavar, Shivamogga news, Urban Development Department, government transfer, local administration.
ಶಿವಮೊಗ್ಗ ಪಾಲಿಕೆಗೆ ಕೆ. ಮಾಯಣ್ಣಗೌಡ ಮರು ನೇಮಕ: ಆಯುಕ್ತರಾಗಿ ಮತ್ತೆ ಅಧಿಕಾರ ಸ್ವೀಕಾರ
