SHIVAMOGGA | MALENADUTODAY NEWS | Aug 25, 2024 ಮಲೆನಾಡು ಟುಡೆ
ಶಿವಮೊಗ್ಗದಲ್ಲಿ ಅಧಿಕಾರ ವ್ಯವಸ್ಥೆಯಲ್ಲಿ ದುಡ್ಡು ಕೊಡದೇ ಕೆಲಸವೇ ಆಗಲ್ಲವೇನೋ ಎಂಬ ಸಂಶಯ ಮೂಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶೇಕಡಾ ನೂರರಷ್ಟು ವಿಕಲಚೇತನತೆಯನ್ನು ಹೊಂದಿರುವ ವ್ಯಕ್ತಿಯೊಬ್ಬರು ಕಳೆದ ಎಂಟು ತಿಂಗಳಿನಿಂದ ತಮಗೆ ಸರ್ಕಾರ ನೀಡುವ ವಿಕಲಚೇತನ ಮಾಸಾಶನಕ್ಕಾಗಿ ಸಿಕ್ಕ ಸಿಕ್ಕ ಅಧಿಕಾರಿಗಳ ಬಳಿಯಲ್ಲಿ ಅರ್ಜಿ ಹಿಡಿದು ಓಡಾಡುತ್ತಿದ್ದಾರೆ. ಆದಾಗ್ಯು ಅವರಿಗೆ ಸಲ್ಲದ ಕಾರಣಗಳನ್ನ ಹೇಳಲಾಗುತ್ತಿದೆಯಂತೆ ಅಲ್ಲದೆ ಅವರನ್ನ ಹೆದರಿಸುವ ಪ್ರಯತ್ನಗಳು ನಡೆಯುತ್ತಿದೆ ಎನ್ನಲಾಗಿದೆ.
ಈ ಸಂಬಂಧ ಮಲೆನಾಡು ಟುಡೆಯ ಬಳಿಯಲ್ಲಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹುಂಚಾ ಗ್ರಾಮ ಅಳಲೆ ಕೊಪ್ಪ ನಿವಾಸಿ ಶಿವರಾಮ್ ಎಂಬವರು ಅಳಲು ತೋಡಿಕೊಂಡಿದ್ದೂ, ದಯವಿಟ್ಟು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಶಿವರಾಮ್‌ರವರು ಕಳೆದ ಏಳೆಂಟು ವರ್ಷಗಳಿಂದ ವಿಕಲಚೇತನ ಮಾಸಾಶನ ಪಡೆಯುತ್ತಿದ್ದರು. ಈ ನಡುವೆ ಈ ವರ್ಷದ ಜನವರಿ ವಿಕಲಚೇತನ ಮಾಸಾಶನ ರದ್ದಾಗಿದೆ, ಎನ್‌ಪಿಸಿಐ ಮಾಡಿಲ್ಲ ಅಂತಾ ರದ್ದು ಮಾಡಿದ್ದರು ಎನ್ನಲಾಗಿದೆ. ಆನಂತರ ಎನ್‌ಪಿಸಿಐ ಭರ್ತಿ ಮಾಡಿಕೊಟ್ಟ ಬೆನ್ನಲ್ಲೆ ನಿಮ್ಮ ಆದಾಯ ಜಾಸ್ತಿಯಿದೆ ಮಾಸಾಶನ ರದ್ದು ಮಾಡಿದ್ರು ಎನ್ನುತ್ತಾರೆ ಶಿವರಾಮ್
ಅದಾದ ಬಳಿಕ ಶೇಕಡಾ ನೂರುರಷ್ಟು ವಿಕಲಚೇತನತೆ ಇರುವ ಶಿವರಾಮ್ ಆನಂತರ ತಮಗೆ ವಾರ್ಷಿಕ ಮೂವತ್ತು ಸಾವಿರವಷ್ಟೆ ಆದಾಯ ಇರುವುದಾಗಿ ವಿಐ ಮೂಲಕ ಧೃಡಿಕರಿಸಿದ್ದಾರೆ. ಇದಾದ ಬಳಿಕವೂ ವಿಕಲಚೇತನ ಮಾಸಾಶನವನ್ನ ಹೊಸನಗರ ತಾಲ್ಲೂಕು ಆಡಳಿತದ ಅಧಿಕಾರಿಗಳು ನೀಡುತ್ತಿಲ್ಲವಂತೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೂ ಎರಡು ಸಹ ಶಿವರಾಮ್ ದೂರಿದ್ದಾರೆ. ಆದಾಗ್ಯು ಹೊಸನಗರ ತಾಲ್ಲೂಕು ಆಡಳಿತ ವ್ಯವಸ್ಥೆಯಲ್ಲಿ ಕೆಲವರು ಶಿವರಾಮ್‌ರವರನ್ನ ಅಲೆದಾಡಿಸುತ್ತಿದ್ದಾರಂತೆ
ಬ್ಯಾಂಕ್‌ನಲ್ಲಿ ಎನ್‌ಪಿಸಿಐ ಮೂಲಕ ಪದೇ ಪದೇ ಮ್ಯಾಪಿಂಗ್ ಮಾಡಲು ಹೇಳುತ್ತಿರುವ ಕೆಲವು ಅಧಿಕಾರಿಗಳು, ಅವರನ್ನ ನೋಡಿ, ಇವರನ್ನ ಭೇಟಿಯಾಗಿ ಎನ್ನುತ್ತಿದ್ದಾರಂತೆ. ಇದೀಗ ಎಲ್ಲೆಡೆ ಓಡಾಡಲು ಆಗುತ್ತಿಲ್ಲ. ಬೇರೆಯವರ ಸಹಾಯದೊಂದಿಗೆ ಕಚೇರಿ ಸಿಬ್ಬಂದಿಗಳನ್ನ ಸಂಪರ್ಕಿಸಬೇಕು. ತಮಗೆ ಸಿಗಬೇಕಾದ ಹಣಕ್ಕಾಗಿ ಹೋರಾಟ ನಡೆಸುತ್ತಿದ್ದೇನೆ. ಹಾಗಿದ್ದರೂ ತಮಗೆ ಮಾಸಾಶನ ದೊರಕುತ್ತಿಲ್ಲ. ಸರ್ಕಾರ ಕೊಡುವ ದುಡ್ಡಿಗೆ ಹತ್ತಾರು ಕಾಗದ ಪತ್ರಗಳನ್ನ ಹಿಡಿದುಕೊಂಡು ಅಲೆಯುತ್ತಿದ್ದೇನೆ. ಆದರೆ ತಮಗೆ ಮಾಶಾಸನ ಮಾತ್ರ ದೊರಕ್ಕುತ್ತಿಲ್ಲವೆಂದು ಆಪಾದಿಸಿದ್ದಾರೆ.
ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆಯವರು ಈ ಹಿಂದೆ ಸರ್ಕಾರದ ಸೌಲಭ್ಯಗಳು ನೀಡುವಲ್ಲಿ ವಿಳಂಬವಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾಗಿದ್ದರೂ ಇಲ್ಲ ಸಲ್ಲದ ಕಾರಣ ಹೇಳಿ ಸೌಲಭ್ಯವನ್ನ ವಂಚಿಸ್ತಿರುವ ಆರೋಪ ವಿಕಲಚೇತನ ವ್ಯಕ್ತಿಯೊಬ್ಬರು ಮಾಡುತ್ತಿದ್ದಾರೆ. ಅವರಲ್ಲಿರುವ ಕಾಗದ ಪತ್ರಗಳು ಹಾಗೂ ಅಧಿಕಾರಿಗಳಿಗೆ ಸಲ್ಲಿಸಿರುವ ದೂರು, ಅರ್ಜಿ, ಮನವಿ ಕಾಪಿಗಳು ವ್ಯವಸ್ಥೆಯ ಸಮಸ್ಯೆಯನ್ನು ಸಾರಿ ಹೇಳುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರೇ ಗಮನ ಹರಿಸಿ ಮಾಸಾಶನ ಕೊಡಿಸುವ ವ್ಯವಸ್ಥೆ ಮಾಡಬೇಕಿದೆ.
ಇನ್ನಷ್ಟು ಸುದ್ದಿಗಳು
-
Shivamogga court | @ಜೈಲರ್ ಕೊಲೆ ಕೇಸ್ | ಇಬ್ಬರು ಮಹಿಳೆಯರಿಗೆ ಜೀವಾವಧಿ ಶಿಕ್ಷೆ , ಮೂವರಿಗೆ ಐದು ವರ್ಷ ಜೈಲು
-
ವೃದ್ಧಾಪ್ಯ ವೇತನದ ದುಡ್ಡು ಕೇಳಿದ್ರೆ ಗೆಟ್ ಔಟ್ , ಹೋಗಿ ಸಾಯಿ ಅಂತಾರಂತೆ | ಅಜ್ಜಿ ಅಳಲನ್ನ ಆಲಿಸುತ್ತಾ ವ್ಯವಸ್ಥೆ?
-
Anandpur Sagar | ಐತಿಹಾಸಿಕ ಪುಷ್ಕರಣಿಯಲ್ಲಿ ಈಜುವಾಗ ಬೆಂಗಳೂರು ಮೂಲದ ಯುವಕ ಸಾವು