Shimoga railway crossing closure information ಶಿವಮೊಗ್ಗ, malenadu today news : August 18 2025: ಶಿವಮೊಗ್ಗದ ಮೂರು ರೈಲ್ವೆ ಕ್ರಾಸಿಂಗ್ನಲ್ಲಿ ರೈಲ್ವೆ ಇಲಾಖೆ ನಿಗದಿತ ಕಾಮಗಾರಿಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಆಯಾ ನಿರ್ದಿಷ್ಟ ದಿನಗಳಲ್ಲಿ ರೈಲ್ವೆ ಕ್ರಾಸಿಂಗ್ಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯಾ ಮಾರ್ಗಗಳಿಗೆ ಸಂಬಂದಿಸಿದಂತೆ ಜಿಲ್ಲಾಡಳಿತ ಪ್ರಕಟಣೆಯನ್ನು ಹೊರಡಿಸಿದೆ.
ಜಿಲ್ಲಾಡಳಿತದ ಪ್ರಕಟಣೆಯ ವಿವರವನ್ನು ಗಮನಿಸುವುದಾದರೆ, ನೈಋತ್ಯ ರೈಲ್ವೆಯ ಶಿವಮೊಗ್ಗ ವಿಭಾಗದ ಸಹಾಯಕ ವಿಭಾಗೀಯ ಇಂಜಿನಿಯರ್ ಅವರು, ಶಿವಮೊಗ್ಗ ವ್ಯಾಪ್ತಿಯ ಮೂರು ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳಾದ LC No 73, LC No 67, ಮತ್ತು LC No 64 ಅನ್ನು ನಿರ್ವಹಣೆ ಮತ್ತು ಪರಿಶೀಲನಾ ಕಾರ್ಯಗಳಿಗಾಗಿ ತಾತ್ಕಾಲಿಕವಾಗಿ ಮುಚ್ಚಲು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ, ಸಾರ್ವಜನಿಕರು ಮತ್ತು ವಾಹನಗಳ ಸುಗಮ ಸಂಚಾರಕ್ಕಾಗಿ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಯಾರ್ಯ ಮಾರ್ಗ ಮತ್ತು ವಿವರ railway
ಸಾಗರ ಬಾಳೆಕೊಪ್ಪ ರಸ್ತೆಯಲ್ಲಿರುವ LC No 73 ನಲ್ಲಿ ಆಗಸ್ಟ್ 18, 2025 ರ ಬೆಳಿಗ್ಗೆ 7:00 ರಿಂದ ಆಗಸ್ಟ್ 19, 2025 ರ ಸಂಜೆ 6:00 ರವರೆಗೆ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಹೀಗಾಗಿ ಕುಂಸಿಯಿಂದ ಚಿಕ್ಕ ಮರಸ, ಬಾಳೇಕೊಪ್ಪದ ಮೂಲಕ LC No 73 ವರೆಗೆ ತಲುಪ ಬಹುದಾಗಿದೆ.
ಆದರೆ, ಹಾರನಹಳ್ಳಿ, ಆಯನೂರು ರಸ್ತೆ ಕಿರಿದಾಗಿರುವುದರಿಂದ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಭಾರೀ ವಾಹನಗಳು ಹಾರನಹಳ್ಳಿ LC 68 – ಹಿಟ್ಟಿನಕೊಪ್ಪ – ಬಾಳಕೊಪ್ಪ ಮತ್ತು ಸಾಗರದಿಂದ ಶಿವಮೊಗ್ಗಕ್ಕೆ ಬರುವ ಭಾರಿ ವಾಹನಗಳು ಚೋರಡಿ – ಶೆಟ್ಟಿಕೆರೆ – ಸೂಡೂರು – 5ನೇ ಮೈಲುಗಲ್ಲು – ಆಯನೂರು ಮಾರ್ಗವನ್ನು ಬಳಸಬಹುದು ಎಂದು ತಿಳಿಸಲಾಗಿದೆ.
ಇನ್ನೂ LC No 67 ಹೊನ್ನಾಳಿ ರಸ್ತೆಯಲ್ಲಿರುವ ರೈಲ್ವೆ ಕ್ರಾಸಿಂಗ್ಗೆ ಸಂಬಂಧಿಸಿದಂತೆ ಆಗಸ್ಟ್ 20, 2025 ರ ಬೆಳಿಗ್ಗೆ 7:00 ರಿಂದ ಆಗಸ್ಟ್ 21, 2025 ರ ಸಂಜೆ 6:00 ರವರೆಗೆ ರೈಲ್ವೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ವಾಹನ ಸವಾರರು ಆಯನೂರು/ಹಾರನಹಳ್ಳಿ ಮೂಲಕ ಹೊನ್ನಳ್ಳಿ ಮತ್ತು ಹೊನ್ನಳ್ಳಿ ಆಯನೂರು ಮೈಸವಳ್ಳಿ, LC 64 , ಕೊನಗವಳ್ಳಿ/ಮುದುವಾಲ, ಹೊನ್ನಾಳಿ – ತ್ಯಾಜವಳ್ಳಿ – ದೇವಬಾಳು – ಯಡವಾಲ – ಹಿಟ್ಟಾರುಕ್ರಾಸ್ – ಮಲ್ಲಾಪುರ ಮೂಲಕ ಸವಳಂಗ ತಲುಪಬಹುದು.
ಈ ಮಾರ್ಗವೂ ಸಹ ಕಿರಿದಾಗಿರುವುದರಿಂದ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಭಾರಿ ವಾಹನಗಳು ಆಯನೂರಿನಿಂದ NH 206 ರಸ್ತೆ ಮೂಲಕ ಶಿವಮೊಗ್ಗ ತಲುಪಬಹುದು ಎಂದು ತಿಳಿಸಲಾಗಿದೆ.
ಅಲ್ಲದೆ ಹಾರನಹಳ್ಳಿ – ಹೊನ್ನಾಳಿ ಮತ್ತು ಹೊನ್ನಾಳಿ – ಹಾರನಹಳ್ಳಿ – LC 23 – ಬಾಳೇಕೊಪ್ಪ – ವಿಟ್ಟಲಗೊಂಡನಕೊಪ್ಪ – ಕೆಸಿನಕಟ್ಟೆ ಮೂಲಕ ತಲುಪಬಹುದು. ಈ ಮಾರ್ಗವೂ ಕಿರಿದಾಗಿರುವುದರಿಂದ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
LC No 64/SH 52 ಕೊನಗವಳ್ಳಿ ರಸ್ತೆ /Shimoga railway crossing closure information
ಆಗಸ್ಟ್ 22, 2025 ರ ಬೆಳಿಗ್ಗೆ 7:00 ರಿಂದ ಆಗಸ್ಟ್ 23, 2025 ರ ಸಂಜೆ 6:00 ರವರೆಗೆ ಈ ಭಾಗದಲ್ಲಿ ರೈಲ್ವೆ ಇಲಾಖೆ ತನ್ನ ಕಾಮಗಾರಿಯನ್ನು ಹಮ್ಮಿಕೊಂಡಿದೆ. ಹೀಗಾಗಿ ಕೊನಗವಳ್ಳಿ – ತಾಂಡ – ತ್ಯಾಜವಳ್ಳಿ -ಮದುವಾಲಾ- ಹಾರನಳ್ಳಿ ಮಾರ್ಗವನ್ನು ಬಳಸಬಹುದು ಎಂದು ತಿಳಿಸಲಾಗಿದೆ.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ

Shimoga railway crossing closure information
