SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 8, 2024 shimoga news
ಶಿವಮೊಗ್ಗ ಪೊಲೀಸ್ ಇಲಾಖೆ ಗಣೇಶನ ಹಬ್ಬದ ಸಂದರ್ಭದಲ್ಲಿ ಹೈ ಅಲರ್ಟ್ ಆಗಿದ್ದಾರೆ. ಶಾಂತಿಯುತವಾಗಿ ಹಬ್ಬ ಆಚರಿಸುವ ಸಲುವಾಗಿ, ಹಬ್ಬದ ದಿನವೇ ಹಳೆಯ ಶಿವಮೊಗ್ಗ ಸೇರಿದಂತೆ ಹಲವೆಡೆ ರೂಟ್ ಮಾರ್ಚ್ ನಡೆಸಿದ್ದಾರೆ.
Shimoga police – ಶಿವಮೊಗ್ಗ ಪೊಲೀಸ್
ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಈ ಪಥ ಸಂಚಲನ ನಡೆಸಲಾಗಿದೆ. ಬಾಬು ಆಂಜನಪ್ಪ, ಪೊಲೀಸ್ ಉಪಾಧಿಕ್ಷಕರು, ಶಿವಮೊಗ್ಗ – ಎ ಉಪ ವಿಭಾಗ, ಗಿರೀಶ್ ಪೊಲೀಸ್ ಉಪಾಧೀಕ್ಷಕರು, ಕಾರವಾರ ಟೌನ್ ಮತ್ತು ರಿಜೇಶ್, ಅಸ್ಸಿಸ್ಟೆಂಟ್ ಕಮಾಂಡೆಂಟ್ ಆರ್.ಎ.ಎಫ್ ರವರ ನೇತೃತ್ವದಲ್ಲಿ ನಿನ್ನೆ ಪಥಸಂಚಲನ ನಡೆಸಲಾಗಿದೆ.
ನಿನ್ನೆ ಸಂಜೆ ನಡೆದ ಪಥಸಂಚಲನ ಮಂಡಲೇಶ್ವರ ದೇವಸ್ಥಾನದ ಆವರಣದಿಂದ ಪ್ರಾರಂಭಿಸಿ ಎ ಎ ವೃತ್ತ, ನ್ಯೂ ಮಂಡ್ಲಿ ವೃತ್ತ, ಸಂದೇಶ್ ಮೋಟರ್ಸ್, ಕೆಜಿಎನ್ ವೃತ್ತ, ಇಮಾಮ್ ಬಡಾ, ಸೀಗೆಹಟ್ಟಿಯಿಂದ ಎ. ಎ. ವೃತ್ತಕ್ಕೆ ಬಂದು ಮುಕ್ತಾಯ ಮಾಡಲಾಯಿತು.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ