SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 22, 2024 shivamogga eid milad
ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ವಿದ್ಯುಕ್ತವಾಗಿ ಆರಂಭವಾಗಿದೆ. ಸಾವಿರಾರು ಮುಸ್ಲಿಮರು ಸಂಪ್ರದಾಯಸ್ಥ ಡ್ರೆಸ್‌ಗಳಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.
ಮೆರವಣಿಗೆ ಹಿನ್ನೆಲೆಯಲ್ಲಿ ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್‌ನಲ್ಲಿ ಮುಸ್ಲಿಮ್ ಯುವಕರು ಡಿಜೆಯೊಂದಿಗೆ ಬರುತ್ತಿದ್ದ ಭಕ್ತಿಯ ಹಾಡುಗಳಿಗೆ ಹೆಜ್ಜೆಹಾಕುತ್ತಿದ್ದಾರೆ.
ಇನ್ನೂ ಇದೇ ವೇಳೆ ಅಮಿರ್ ಅಹಮದ್ ಸರ್ಕಲ್‌ನಲ್ಲಿ ಕೃತಕ ಆನೆಯ ಮೇಲೆ ಕಾಂಗ್ರೆಸ್ ಮುಖಂಡ ಷರೀಫ್ ಆಗಮಿಸಿದ್ದಾರೆ. ಇದು ಅಲ್ಲಿದ್ದವರಿಗೆ ವಿಶೇಷತೆ ಮೂಡಿಸಿತ್ತು, ಹಲವರು ಕೃತಕ ಆನೆಯ ಫೋಟೋವನ್ನ ತೆಗೆದುಕೊಂಡರು.


ಮೆರವಣಿಗೆಯ ಉದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಎಲ್ಲೆಡೆ ಹೆಚ್ಚುವರಿ ಸಿಬ್ಬಂದಿಗಳನ್ನ ಸಹ ನಿಯೋಜಿಸಲಾಗಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ