sagara news today 10-06-2025 : ksrtc ಚಾಲಕನ ಸಮಯ ಪ್ರಜ್ಙ್ನೆಯಿಂದ ಉಳಿಯಿತು ಜೀವ 

prathapa thirthahalli
Prathapa thirthahalli - content producer

sagara news today :  ಮನುಷ್ಯನಲ್ಲಿ ಮಾನವೀಯತೆ ಹಾಗೂ ಸಹಾಯ ಮಾಡುವ ಮನೋಭಾವವಿದ್ದರೆ ಆತ ಎಂತಹವರನ್ನು ಗೆಲ್ಲಬಹುದು. ಹಾಗೆಯೇ ಯಾವುದೇ ಪರಿಸ್ಥಿತಿಯಲ್ಲಿರುವ ವ್ಯಕ್ತಿಗಳ ಕಷ್ಟಕ್ಕೆ ಸ್ಪಂಧಿಸಿ ಅವರ ಜೀವವನ್ನು ಉಳಿಸಬಹುದು. ಅದಕ್ಕೆ ನಿದರ್ಶನವೆಂಬಂತೆ ಅನಂದಪುರದಲ್ಲಿ ಕೆಎಸ್​ ಆರ್​ಟಿಸಿ ಚಾಲಕ ಪ್ರಯಾಣಿಕರೊಬ್ಬರ ಜೀವವನ್ನು ಉಳಿಸಿ ಮಾನವಿಯತೆಯನ್ನು ಮೆರೆದಿದ್ದಾರೆ.

sagara news today :  ಏನಿದು ಘಟನೆ 

ಕೆಎಸ್​ಆರ್​ಟಿಸಿ ಬಸ್​ ನಿನ್ನೆ ತಡ ರಾತ್ರಿ ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಆವೇಳೆ ಆನಂದಪುರದ ಬಳಿ  ಬಸ್​ನಲ್ಲಿದ್ದ ಅಬ್ದುಲ್ ಗಫರ್ ಎನ್ನುವ ಪ್ರಯಾಣಿಕರಿಗೆ ಉಸಿರು ಕಟ್ಟಿದ ಅನುಭವವಾಗಿ ಅಸ್ವಸ್ಥಗೊಂಡರು. ಕೂಡಲೇ ಪರಿಸ್ಥಿತಿಯನ್ನರಿತ ಬಸ್​ ಚಾಲಕ ಬಸ್​ನ್ನು ಆನಂದಪುರದ ಸರ್ಕಾರಿ ಆಸ್ಪತ್ರೆ  ಆವರಣದೊಳಗೆಯೇ  ಚಾಲನೆ ಮಾಡಿಕೊಂಡು ಹೋಗಿದ್ದಾರೆ. ನಂತರ ಅಲ್ಲಿ ಪ್ರಯಾಣಿಕನನ್ನು  ಆಸ್ಪತ್ರೆಗೆ ದಾಖಲಿಸಿದರು. ಚಾಲಕನ ಸಮಯ ಪ್ರಜ್ಙ್ನೆ ಹಾಗೂ ಸಹಾಯದ ಮನೋಭಾವನೆಗೆ ಎಲ್ಲೆಡೆ ಶ್ಲಾಘನೆಗೆ ವ್ಯಕ್ತವಾಗಿದೆ.

- Advertisement -

 

 

 

Share This Article
1 Comment

Leave a Reply

Your email address will not be published. Required fields are marked *