RPF Returns Lost Apple watch ಕಳೆದುಹೋದ ಆಪಲ್ ಸ್ಮಾರ್ಟ್ ವಾಚ್ ಮರಳಿ ನೀಡಿದ ರೈಲ್ವೆ ರಕ್ಷಣಾ ಪಡೆ: ಶಿವಮೊಗ್ಗ ರೈಲಿನಲ್ಲಿ ಪ್ರಯಾಣಿಕರಿಗೆ ನೆರವು
Shivamogga news / ಬೆಂಗಳೂರಿನಿಂದ ಶಿವಮೊಗ್ಗಕ್ಕೆ 16227 ಮೈಸೂರು ತಾಳಗುಪ್ಪ ರೈಲಿನಲ್ಲಿ ಬಂದಿಳಿದ ಪ್ರಯಾಣಿಕರು ರೈಲಿನಲ್ಲಿಯೇ ಕಳೆದುಕೊಂಡಿದ್ದ 20 ಸಾವಿರ ಮೌಲ್ಯದ ಆಪಲ್ ಸ್ಮಾರ್ಟ್ ವಾಚ್ ಅನ್ನು ರೈಲ್ವೆ ರಕ್ಷಣಾ ಪಡೆ (RPF) ಅದನ್ನು ಪತ್ತೆ ಹಚ್ಚಿ ಮಾಲೀಕರಿಗೆ ವಾಪಸ್ ನೀಡಿದೆ. ಈ ಸಂಬಂದ ಆರ್ಪಿಎಫ್ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಲಾಗಿದೆ.

ಜೂನ್ 26 ರಂದು, ಯುವತಿ ಒಬ್ಬರು ಮೈಸೂರು-ತಾಳಗುಪ್ಪ ರೈಲಿನಲ್ಲಿ ಬೆಂಗಳೂರಿನ ಕೆಂಗೇರಿಯಿಂದ ಪ್ರಯಾಣಿಸಿದ್ದರು. A1 ಕೋಚ್‌ನಲ್ಲಿ ಪ್ರಯಾನಿಸಸ್ತಿದ್ದ ಅವರು, ಅಲ್ಲಿಯೇ ತಮ್ಮ ವಾಚ್ ಕಳೆದುಕೊಂಡಿದ್ದರು. ಈ ಸಂಬಂಧ ರೈಲ್ವೆ ಮದತ್ ಪೋರ್ಟಲ್‌ನಲ್ಲಿ ತಿಳಿಸಿದ್ದರು. ಬಳಿಕ RPF ಪ್ರಕಾಶ್ ರವರ ತಂಡ ವಾಚ್ ಪತ್ತೆ ಮಾಡಿ ಅದರ ಮಾಲೀಕರಿಗೆ ನೀಡಿದ್ದಾರೆ.