ಶಿಕಾರಿಪುರ-ಆನಂದಪುರಕ್ಕೆ ಹೊಸ ಸರ್ಕಾರಿ ಬಸ್ ಸೇವೆ

ajjimane ganesh

New KSRTC Bus : ಆನಂದಪುರ: ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಶಿಕಾರಿಪುರದಿಂದ ಆನಂದಪುರದ ಮಾರ್ಗವಾಗಿ ಸಂಚರಿಸುವ ನೂತನ ಕೆಎಸ್‌ಆರ್‌ಟಿಸಿ ಸರ್ಕಾರಿ ಬಸ್‌ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಚಾಲನೆ ನೀಡಿದ್ದಾರೆ.

ಸಮೀಪದ ಬೈರಾಪುರದಲ್ಲಿ ಹೊಸ ಬಸ್‌ಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಕಳೆದ 2 ವರ್ಷಗಳಿಂದ ಈ ಮಾರ್ಗದಲ್ಲಿ ಸರ್ಕಾರಿ ಬಸ್ ಸೇವೆ (Bus service) ಆರಂಭಿಸಬೇಕೆಂದು ಸಾರ್ವಜನಿಕರು ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಪ್ರಯಾಣಿಕರ ಅನುಕೂಲಕ್ಕಾಗಿ ಈ ಹೊಸ ಬಸ್ ಸೇವೆಯನ್ನು ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

- Advertisement -

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 4,000 ಹೊಸ ಬಸ್‌ಗಳನ್ನು ಖರೀದಿಸಿದ್ದು, ಅವುಗಳಲ್ಲಿ 9 ಬಸ್‌ಗಳನ್ನು ಸಾಗರ ಘಟಕಕ್ಕೆ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಸಾಗರಕ್ಕೆ ಇನ್ನೂ 10 ಬಸ್‌ಗಳನ್ನು ನೀಡುವ ಭರವಸೆಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನೀಡಿದ್ದಾರೆ ಎಂದು ಬೇಳೂರು ತಿಳಿಸಿದರು. ಬೆಳೆ ಮತ್ತು ಮನೆಹಾನಿಯಿಂದ ಸಂಕಷ್ಟಕ್ಕೆ ಒಳಗಾದ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ (Compensation) ಬಿಡುಗಡೆಯಾಗಿದ್ದು, ಅದು ಶೀಘ್ರದಲ್ಲೇ ಫಲಾನುಭವಿಗಳನ್ನು ತಲುಪಲಿದೆ. ಹಾಗೆಯೇ, ಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಯಿಂದಾಗಿ ಮಹಿಳೆಯರಿಗೆ ರಾಜ್ಯದಾದ್ಯಂತ ಸಂಚರಿಸಲು ಬಹಳಷ್ಟು ಸಹಕಾರಿಯಾಗಿದೆ. ಅದರಲ್ಲೂ ವಿಶೇಷವಾಗಿ ಧರ್ಮಸ್ಥಳದಂತಹ ಧಾರ್ಮಿಕ ಕೇಂದ್ರಗಳಿಗೆ ಪ್ರಯಾಣಿಸಲು ಸುಲಭವಾಗಿದೆ ಎಂದರು. ಸಾಗರ ಬಸ್ ಡಿಪೋದ ನವೀಕರಣಕ್ಕಾಗಿ 4 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

New KSRTC Bus

Shikaripur-Anandapura Gets Daily Bus Service

 

Share This Article
Leave a Comment

Leave a Reply

Your email address will not be published. Required fields are marked *