SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 12, 2024 nagamangala ganesha fight
ಮಂಡ್ಯದ ನಾಗಮಂಗಲದಲ್ಲಿ ನಡೆದ ಗಲಾಟೆ ಸಂಬಂಧ ಈಗಾಗಲೇ ಗೃಹಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಆಕಸ್ಮಿಕವಾಗಿ ಘಟನೆಯಲ್ಲಿ ಕಲ್ಲು ತೂರಾಟ ನಡೆದಿದೆ ಎಂದಿದ್ದಾರೆ.
ಕೆ ಎಸ್ ಈಶ್ವರಪ್ಪ -Clashes during Ganesha immersion procession in Mandya

ಇತ್ತ ಇದೇ ವಿಚಾರದ ಬಗ್ಗೆ ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ. ಹಿಂದೂಗಳೆಲ್ಲರೂ ಸೇರಿ ಹಿಂದೂಗಳ ಆರಾಧ್ಯ ದೈವ ಗಣಪತಿ ಮೆರವಣಿಗೆ ನಡೆಸುವ ಸಂದರ್ಭದಲ್ಲಿ ಗಲಾಟೆ ನಡೆದಿದೆ. ಮೆರವಣಿಗೆ ವೇಳೆ ಪಾಕಿಸ್ತಾನದ ಮನಸ್ಥಿತಿ ಇರುವವರು ಕಿಡಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ.
Stone pelting, lathi charge during Ganesha procession
ಮಸೀದಿ ಎದುರಿಗೆ ಮೆರವಣಿಗೆ ತೆಗೆದುಕೊಂಡು ಹೋಗಬಾರದು, ಮಸೀದಿ ಎದುರಿಗೆ ಡೊಳ್ಳು ಹೊಡಿಯಬಾರದು, ಮಂಗಳವಾದ್ಯ ನುಡಿಸಬಾರದೆಂದು ಕಲ್ಲು ಎಸೆದಿದ್ದಾರೆ, ಪೆಟ್ರೋಲ್ ಬಾಂಬ್ ಎಸೆದು ರಾಷ್ಟ್ರದ್ರೋಹಿ ಕೃತ್ಯವೆಸಗಿದ್ದಾರೆ ಎಂದು ಈಶ್ವರಪ್ಪ ದೂರಿದ್ದಾರೆ.
ದೇಶದಲ್ಲಿ ಕಡಿಮೆ ರಾಜ್ಯದಲ್ಲಿ ಜಾಸ್ತಿ – mandya ganesha galate
ದೇಶದಲ್ಲಿ ಈ ರೀತಿಯಾಗುವುದು ಕಡಿಮೆಯಾಗಿದೆ ಎಂದ ಕೆಎಸ್ ಈಶ್ವರಪ್ಪ ಕರ್ನಾಟಕ ರಾಜ್ಯದಲ್ಲಿ ಮಾತ್ರ ಪಾಕಿಸ್ತಾನ ಮನಸ್ಥಿತಿ ಇರುವವರು ಈ ರೀತಿ ಬದುಕು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಪ್ರಶ್ನೆಯಿಲ್ಲದೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪ್ರಶ್ನೆಯಿಲ್ಲದೇ ಎಲ್ಲಾ ರಾಷ್ಟ್ರಭಕ್ತರು ಇದನ್ನು ಖಂಡಿಸಬೇಕು. ರಾಷ್ಟ್ರದ್ರೋಹಿ ಕೆಲಸವನ್ನು ಖಂಡಿಸಬೇಕು. ರಾಜ್ಯದಲ್ಲಿ, ದೇಶದಲ್ಲಿ ಈ ರೀತಿ ಎಂದೂ ಆಗಬಾರದು. ಯಾರು ಈ ರೀತಿ ಮಾಡಿದ್ದಾರೆ ಅವರ ವಿರುದ್ಧ ಕ್ರಮ ಜರುಗಿಸಬೇಕು
ಆರೋಪಿಗಳನ್ನು ಬಂಧಿಸಿ ಅವರ ಮೇಲೆ ರಾಷ್ಟ್ರದ್ರೋಹಿ ಕೇಸುಗಳನ್ನು ಹಾಕಬೇಕು. ಆರೋಪಿಗಳಿಗೆ ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದರು
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ