Missing case : ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು, ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಮೂವರು ವ್ಯಕ್ತಿಗಳು ಕಾಣೆಯಾಗಿದ್ದು, ಇವರ ಸುಳಿವು ದೊರೆತಲ್ಲಿ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Missing case ಸದಾನಂದ ಶೆಟ್ಟಿ
ಅಕ್ಕಸಾಲಿಕೊಪ್ಪದ ನಿವಾಸಿ ಸದಾನಂದ ಶೆಟ್ಟಿ, ಬಿನ್ ಸೂರಣ್ಣ ಶೆಟ್ಟಿ, ಎಂಬುವವರು 2024ರ ಜೂನ್‌ನಿಂದ ಕಾಣೆಯಾಗಿದ್ದಾರೆ. ಈ ಕುರಿತು ಅವರ ಸಹೋದರಿ ವಿಮಲ ಅವರು ಸೆಪ್ಟೆಂಬರ್ 2, 2025ರಂದು ದೂರು ದಾಖಲಿಸಿದ್ದಾರೆ. ಸದಾನಂದ ಅವರ 95 ವರ್ಷದ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಚಹರೆ: ಸುಮಾರು 5.5 ಅಡಿ ಎತ್ತರ, ಉದ್ದನೆಯ ಮುಖ, ಗೋಧಿ ಬಣ್ಣ, ಬಿಳಿ ಕೂದಲು ಹಾಗೂ ಸಾಧಾರಣ ಮೈಕಟ್ಟು.
ತುಳಸೀದಾಸ್
ತನಿಕಲ್ ಬೆಟ್ಟಬಸವಾನಿ ಗ್ರಾಮದ ನಿವಾಸಿ ಹರೀಶ್ ಜಿ. ಆರ್. ಬಿನ್ ಜಿ. ಹೆಚ್. ರಂಗಪ್ಪ ಗೌಡ ಅವರ ಅಣ್ಣ ತುಳಸೀದಾಸ್, ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾ ಆಶ್ರಮದ ಹಾಸ್ಟೆಲ್‌ನಲ್ಲಿ ಪಿಯುಸಿ ಓದುತ್ತಿದ್ದರು. 1982ರ ಜನವರಿ 14ರಂದು ಕಾಲೇಜಿಗೆಂದು ಹೋದವರು ಕಾಣೆಯಾಗಿದ್ದಾರೆ ಎಂದು ಅವರ ಸಹೋದರ ಆಗಸ್ಟ್ 6, 2025ರಂದು ದೂರು ನೀಡಿದ್ದಾರೆ.
ಚಹರೆ : (ಕಾಣೆಯಾದ ಸಮಯದಲ್ಲಿ): ಸುಮಾರು 5 ಅಡಿ ಎತ್ತರ, ಉದ್ದನೆಯ ಮುಖ, ಗೋಧಿ ಬಣ್ಣ, ಕಪ್ಪು ಕೂದಲು ಹಾಗೂ ಸಾಧಾರಣ ಮೈಕಟ್ಟು.
Missing case ಪವಿತ್ರ
ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿ ಗ್ರಾಮದ ನಿವಾಸಿ ಅರುಣ್ ಎಸ್. ಬಿನ್ ಸೋಮಶೇಖರ್ ಅವರ 24 ವರ್ಷದ ಪತ್ನಿ ಪವಿತ್ರಾ ಕಾಣೆಯಾಗಿದ್ದಾರೆ. ಇವರು ಬೆಜ್ಜವಳ್ಳಿಯಲ್ಲಿರುವ ಒಂದು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 4, 2025ರಂದು ಕೆಲಸಕ್ಕೆಂದು ಹೋಗಿದ್ದವರು ಇದುವರೆಗೂ ಮನೆಗೆ ವಾಪಸ್ ಬಂದಿಲ್ಲ.
ಚಹರೆ: ಸುಮಾರು 4 ಅಡಿ ಎತ್ತರ, ದುಂಡು ಮುಖ, ಗೋಧಿ ಬಣ್ಣ, ಕಪ್ಪು ಕೂದಲು ಹಾಗೂ ಸಾಧಾರಣ ಮೈಕಟ್ಟು. ಮನೆ ಬಿಡುವಾಗ ನೀಲಿ ಮತ್ತು ಬಿಳಿ ಬಣ್ಣದ ಚೂಡಿದಾರ ಧರಿಸಿದ್ದರು.
ಮೇಲೆ ತಿಳಿಸಿದ ಯಾವುದೇ ವ್ಯಕ್ತಿಗಳ ಕುರಿತು ಸುಳಿವು ಸಿಕ್ಕಲ್ಲಿ, ತಕ್ಷಣವೇ ಮಾಳೂರು ಪೊಲೀಸ್ ಠಾಣೆ (ಮೊ: 9480803353), ಸಿಪಿಐ ಮಾಳೂರು ವೃತ್ತ (ಮೊ: 9480803333), ಅಥವಾ ಶಿವಮೊಗ್ಗ ಪೊಲೀಸ್ ಕಂಟ್ರೋಲ್ ರೂಂ (ಮೊ: 9480803300) ಅನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಕೋರಿದೆ.

