SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 10, 2024 linganamakki dam water level
ಮಲೆನಾಡು ಟುಡೆ ಗೌರಿ ಗಣೇಶ ಹಬ್ಬದ ಮಲೆನಾಡಿನ ವಿಶೇಷ ಸುದ್ದಿಗಳನ್ನ ಹುಡುಕಾಡುತ್ತಿದ್ದಾಗ ಸಿಕ್ಕಿದ್ದು ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಮಲೆನಾಡಲ್ಲಿ ಸ್ಪೆಷಲ್ ಎನಿಸುವಂತೆ ಆಡುವ ಕಾಯಿ ಜೂಜು ಆಟದ ವಿಚಾರ..
ಪಬ್ಜಿ ಆಡುವ ಮಕ್ಕಳಿಗೆ ಈ ಬಗ್ಗೆ ಗೊತ್ತೆ ಇರುವುದಿಲ್ಲ, 80-90 ದಶಕದಲ್ಲಿ ಮಕ್ಕಳಾಗಿದ್ದವರಿಗೆ ಆಟದ ನೆನಪು ಅದರ ಬಗ್ಗೆ ಹೇಳಿದಾಗ ನೆನಪಾಗಲಿಕ್ಕೂ ಸಾಕು. ಆದರೆ ಮಲೆನಾಡ ಹಳ್ಳಿಗಳಲ್ಲಿ ಇಂದಿಗೂ ಕಾಯಿ ಜೂಜಿನಂತ ಆಟ ಇನ್ನೂ ನಡೆಯುತ್ತಲೆ ಇದೆ.
ಮಲೆನಾಡು -malenadu
ಈ ಬಗ್ಗೆ ತೀರ್ಥಹಳ್ಳಿಯ ನೆಂಪೆ ದೇವರಾಜ್‌ರವರು ತಮ್ಮ ಫೇಸ್ ಬುಕ್ ವಾಲ್‌ನಲ್ಲಿ ಒಂದು ವಿಡಿಯೋ ಪೋಸ್ಟ್ ಹಾಕಿದ್ದಾರೆ. ಅದರಲ್ಲಿ ಅವರೇ ಸ್ವತಃ ಕಾಯಿ ಜೂಜಿನ ಮೋಜಿನ ಆಟದ ರೀತಿ ರಿವಾಜು ನಿಯಮ, ಸೋಲು ಗೆಲುವಿನ ಲೆಕ್ಕಾಚಾರವನ್ನೆಲ್ಲಾ ವಿವರಿಸಿದ್ದಾರೆ.
ತೆಂಗಿನ ಕಾಯಿ ಆಟ
ಶಿವಮೊಗ್ಗದಲ್ಲಿ ಈಗಲೂ ಹಲವೆಡೆ ಕಾಯಿ ಜೂಜು ಆಡುತ್ತಾರೆ. ಆದರೆ ಹಳ್ಳಿಯ ಈ ಆಟ ಜಾಸ್ತಿ ಸದ್ದಾಗುವುದಿಲ್ಲ. ಇಷ್ಟಕ್ಕೂ ಕಾಯಿ ಆಟ ಅಂದರೆ ಇಷ್ಟೆ. ಎರಡು ತೆಂಗಿನ ಕಾಯಿಗಳನ್ನ ಒಂದಕ್ಕೊಂದು ಡಿಕ್ಕಿ ಹೊಡೆಸುವುದು ಆಟದ ಪ್ರಮುಖ ನಿಯಮ. ಹತ್ತಿಪ್ಪತ್ತು ಅಡಿ ದೂರದಲ್ಲಿ ಎದುರುಬುದುರಾಗಿ ನಿಂತುಕೊಂಡ ಇಬ್ಬರು ವ್ಯಕ್ತಿಗಳು ಆಯ್ಕೆ ಮಾಡಿ ತಂದ ತೆಂಗಿನ ಕಾಯಿಯನ್ನ ನೆಲದ ಮೇಲೆ ಬಲಕೊಟ್ಟು ಉರುಳಿಸುತ್ತಾರೆ. ಹೀಗೆ ಉರುಳಿಸಿದ ಕಾಯಿ ಎದುರಾಳಿಯ ಕಾಯಿಗೆ ಡಿಕ್ಕಿಯಾಗಿ ಒಡೆದರೇ ಆಟ ಗೆದ್ದಂತೆ. ಒಡೆದು ಹೋದ ಕಾಯಿಗೆ ಗೆದ್ದವನಿಗೆ. ಆತ ತಂದ ತೆಂಗಿನ ಕಾಯಿ ಎಷ್ಟು ಕಾಯಿಯನ್ನು ಒಡೆಯುತ್ತದೆಯೋ ಅಲ್ಲಿಯವರೆಗೂ ಆಟ ಮುಂದುವರಿಯುತ್ತದೆ. ಹೊಸ ಹೊಸ ಎದುರಾಳಿಗಳ ತೆಂಗಿನ ಕಾಯಿಯ ಬುರುಡೆ ಒಡೆದ ಕಾಯಿಗೆ ಬಂಟ ಎನ್ನುತ್ತಾರೆ.
ಮಲೆನಾಡಲ್ಲಿ ಈ ಆಟ ಕುಶಾಲಿಗಾಗಿ ಆಡುತ್ತಾರೆ. ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿದ್ದವರು ಅಕ್ಕಪಕ್ಕದವರೂ ಊರು ಮನೆಯವರು ಈ ಆಟ ಆಡುವುದು ವಿಶೇಷ. ಇಲ್ಲಿ ತೆಂಗಿನ ಕಾಯಿ ಆಟಕ್ಕೆಂದೆ ಅಂಗಡಿಯವರು ಒಂದಿಷ್ಟು ಕಾಯಿ ಸುಲಿಸಿ ತಂದಿಟ್ಟಿರುತ್ತಾರೆ. ಒಟ್ಟಾರೆ ಆಟ ಸಖತ್ ಗಮ್ಮತ್ತಾಗಿರುತ್ತದೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನೆಂಪೆ ದೇವರಾಜ್‌ರವರೇ ಹೇಳುತ್ತಾರೆ. ಅವರ ಧ್ವನಿಯಲ್ಲಿ ಆಟ ಮತ್ತಷ್ಟು ಮಜ ಕೊಡುತ್ತದೆ.
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ