dog attack :ಸೆಕ್ಯೂರಿಟಿ ಗಾರ್ಡ್ ಮೇಲೆ ಹುಚ್ಚು ನಾಯಿ ದಾಳಿ| ಆತಂಕಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ
dog attack : ಮಲಗಿದ್ದ ಸೆಕ್ಯೂರಿಟಿ ಗಾರ್ಡ್ ಮೇಲೆ ನಾಯಿಯೊಂದು ದಾಳಿ ನಡೆಸಿರುವ ಘಟನೆ ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ನಾಯಿ ದಾಳಿ ನಡೆಸಿರುವ ಆತಂಕಕಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ
ಸವಳಂಗ ರಸ್ತೆಯಲ್ಲಿರುವ ಜೆಜೆ ಕಾಂಪ್ಲೆಕ್ಸ್ ನಲ್ಲಿ ಕೆಲಸ ಮಾಡುತ್ತಿರುವ ಸೆಕ್ಯೂರಿಟಿ ರಮೇಶ್ ಮಲಗಿದ್ದರು. ಆ ವೇಳೆ ಗೇಟಿನ ಬಾಗಿಲು ತೆಗೆದಿದ್ದ ಹಿನ್ನೆಲೆ ನಾಯಿ ಒಂದು ಏಕಾಏಕಿ ಮನೆಯೊಳಗೆ ನುಗ್ಗಿದೆ. ನಾಯಿ ಒಳಕ್ಕೆ ಬರುತ್ತಲೇ ರಮೇಶ್ರವರಿಗೆ ಎಚ್ಚರವಾಗಿದ್ದು, ಕ್ಷಣಾರ್ಧದಲ್ಲಿ ನಾಯಿ ಅವರ ಮೇಲೆ ದಾಳಿ ನಡೆಸಿದೆ. ಇದರಿಂದಾಗಿ ರಮೇಶ್ರವರಿಗೆ ಗಾಯಗಳಾಗಿದ್ದು,ನಂತರ ರಮೇಶ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
View this post on Instagram