ಕೆಎಸ್‌ಆರ್‌ಟಿಸಿ ಬಸ್ ಮತ್ತು ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ,ಇಬ್ಬರ ಸಾವು

ajjimane ganesh

KSRTC : ಕಡೂರು, ಚಿಕ್ಕಮಗಳೂರು:  malenadutoday news :  ಕೆಎಸ್‌ಆರ್‌ಟಿಸಿ ಬಸ್ ಮತ್ತು ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಶಿವಪುರ ಗೇಟ್ ಬಳಿ ಸಂಭವಿಸಿದೆ.

ಈ ಘಟನೆ ನಿನ್ನೆ ದಿನ ಅಂದರೆ, ಮಂಗಳವಾರ ಮುಂಜಾನೆ ಸಂಭವಿಸಿದ್ದು, ಘಟನೆಯಲ್ಲಿ ಕ್ಯಾಂಟರ್‌ನ ಚಾಲಕ ಹುಬ್ಬಳ್ಳಿಯ ನಿವಾಸಿ, 30 ವರ್ಷದ ಮೋಹನ್ ಮತ್ತು ಧಾರವಾಡದ 40 ವರ್ಷದ ಕ್ಲೀನರ್ ಮೊಹಮ್ಮದ್ ಆಸಿಫ್  ಸಾವನ್ನಪ್ಪಿದ್ದಾರೆ. ಈ ಕುರಿತಾಗಿ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

- Advertisement -

KSRTC Bus and Canter Collide Near Kadur 

 

Share This Article
1 Comment

Leave a Reply

Your email address will not be published. Required fields are marked *