Kashmir Attack | ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಶಿವಮೊಗ್ಗದ ವಿಜಯನಗರದ ಮಂಜುನಾಥ್ ಎಂಬವರು ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಶಿವಮೊಗ್ಗಕ್ಕೆ ತರುವ ಸಲುವಾಗಿ ಪ್ರಯತ್ನಗಳು ನಡೆದಿವೆ. ಇತ್ತ ರಾಜಕೀಯ ಮುಖಂಡರು ಮಂಜುನಾಥ್ರವರ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ.
ತಾಯಿಗೆ ತಿಳಿಯದ ವಿಚಾರ
ನಿನ್ನೆ ಸಂಜೆ ಮಂಜುನಾಥ್ ರವರ ಸಾವಿನ ವಿಚಾರ ಶಿವಮೊಗ್ಗದಲ್ಲಿರುವ ಮಂಜುನಾಥ್ರವರ ಕುಟುಂಬಸ್ಥರಿಗೆ ತಿಳಿಯಿತು. ಆದರೆ ಮಂಜುನಾಥ್ರವರ ತಾಯಿಗೆ ಈ ಬಗ್ಗೆ ವಿಷಯ ತಿಳಿಸಿರಲಿಲ್ಲ. ಹೀಗಾಗಿ ತಮ್ಮ ಮಗ ಸೊಸೆ ಮೊಮ್ಮಗ ಸುರಕ್ಷಿತವಾಗಿದ್ದಾರಾ? ಎಂದು ಪ್ರಶ್ನಿಸುತ್ತಿದ್ದರು. ಸಂಬಂಧಿಕರು , ನೆರೆಹೊರೆಯವರು ತಾಯಿಯ ಪ್ರಶ್ನೆಯನ್ನು ಕೇಳಿ, ಕಣ್ಣೀರು ತುಂಬಿಕೊಂಡರು.
Kashmir Attack |ಮಗನ ರಿಸಲ್ಟ್ ನೋಡಿ ಟೂರ್ಗೆ ಹೊರಟಿದ್ದರು
ಮಂಜುನಾಥ್ರವರ ಮಗ ಅಭಿಜಯ ಕಾಮರ್ಸ್ 98 ಪರ್ಸೆಂಟ್ ತೆಗೆದುಕೊಂಡು ಸೆಕೆಂಡ್ ಪಿಯುಸಿ ಪಾಸ್ ಆಗಿದ್ದರು. ಈ ಖುಷಿಯ ಸಾಧನೆಯನ್ನು ಸಂಭ್ರಮಿಸುವ ಸಲುವಾಗಿ ಮಂಜುನಾಥ್ ಕಾಶ್ಮೀರಕ್ಕೆ ತೆರಳಿದ್ದರು. ಏಪ್ರಿಲ್ 24 ಕ್ಕೆ ಇವರು ವಾಪಸ್ ಆಗಬೇಕಿತ್ತು. ಅಷ್ಟರಲ್ಲಿ ಅಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮಂಜುನಾಥ್ರವರು ಸಾವನ್ನಪ್ಪಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ
ಮಂಜುನಾಥ್ ರಾವ್ ರವರು ರಿಯಲ್ ಎಸ್ಟೇಟ್ ಉದ್ಯಮಿ. ಇವರ ಪತ್ನಿ ಪಲ್ಲವಿ ಮ್ಯಾಮ್ಕೋಸ್‌ನ ಬೀರೂರು ಶಾಖೆಯಲ್ಲಿ ವ್ಯವಸ್ಥಾಪಕಿ ಆಗಿದ್ದಾರೆ. ತಂದೆ ಮಹಾಬಲ ರಾವ್ ನಿಧನರಾಗಿದ್ದು, ತಾಯಿ ಸುಮತಿ ಹಾಗೂ ಕುಟುಂಬದೊಂದಿಗೆ ಮಂಜುನಾಥ್ ವಾಸವಿದ್ದರು.
Kashmir Attack |ಬೇಲ್ ಪುರಿ ತಿನ್ನುತ್ತಿದ್ದಾಗ ದಾಳಿ
ಕಾಶ್ಮೀರದ ಪಹಲ್ಗಾಮ್ನಲ್ಲಿ ಮಂಜುನಾಥ್ರವರ ಕುಟುಂಬ ಬೇಲ್ಪುರಿ ತಿನ್ನುತ್ತಿದ್ದರು. ಈ ವೇಳೆ ಗುಂಡಿನ ಮಳೆ ಸುರಿಸಿದ್ದಾರೆ ಉಗ್ರರು. ನಡೆದ ಘಟನೆ ಬನ್ನೆ ಪಲ್ಲವಿಯವರು ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಅವರ ಜೊತೆಗೆ ಸಾಗರದ ಪ್ರವಾಸಿಗರು ಇರುವುದಾಗಿ ತಿಳಿದು ಬಂದಿದೆ.ಇನ್ನೊಂದೆಡೆ ಬೆಂಗಳೂರಿಗೆ ಪ್ರವಾಸಿಗರ ತಂಡವೊಂದು ಐಸ್ ಕ್ರಿಮ್ ತಿನ್ನುವ ಸಲುವಾಗಿ ದಾರಿಮಧ್ಯೆ ನಿಂತ ಕಾರಣಕ್ಕೆ, ಉಗ್ರರ ದಾಳಿಯಿಂದ ಬಚಾವ್ ಆಗಿದ್ದಾರೆ.