Karnataka Congress july 08 / ಶಿವಮೊಗ್ಗ, ಭದ್ರಾವತಿ ಶಾಸಕರ ಜೊತೆ ರಣದೀಪ್ ಸಿಂಗ್ ಸುರ್ಜೇವಾಲಾ ಮೀಟಿಂಗ್​/ ಯಾವಾಗ ಗೊತ್ತಾ

ajjimane ganesh

Karnataka Congress,  ಸುರ್ಜೇವಾಲಾ ಮುಂದೆ ಶಾಸಕರ ಅಹವಾಲು ಸಭೆ!

ರಾಜ್ಯ ಸರ್ಕಾರದದಲ್ಲಿ ಸಚಿವರುಗಳ ಬಗ್ಗೆ ಬೇಸರ ವ್ಯಕ್ತವಾದ ಬೆನ್ನಲ್ಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾರವರನ್ನ ರಾಜ್ಯಕ್ಕೆ ಕಳುಹಿಸಿದ ಹೈಕಮಾಂಡ್​, ಶಾಸಕರಿಗೆ ಪ್ರತ್ಯೇಕವಾಗಿ 20 ನಿಮಿಷದ ಅವಕಾಶ ನೀಡಿ ಅವರುಗಳ ಅಹವಾಲು ಕೇಳಲು ತಿಳಿಸಿತ್ತು. ಅದರಂತೆ ರಾಜ್ಯಕ್ಕೆ ಆಗಮಿಸಿರುವ ಸುರ್ಜೆವಾಲಾ ಪ್ರತಿಯೊಬ್ಬ ಶಾಸಕರ ಬಳಿಯಲ್ಲಿಯು ಅವರ ಸಮಸ್ಯೆಗಳು , ಅಹವಾಲುಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸಲಹೆ ಸೂಚನೆಗಳನ್ನು ಕಲೆಹಾಕುತ್ತಿದ್ದಾರೆ. 

ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನಿನ್ನೆ ಸೋಮವಾರ ಬೆಂಗಳೂರಿನಲ್ಲಿ ಬೆಳಗಾವಿ, ಕಲಬುರಗಿ, ಮತ್ತು ರಾಯಚೂರು ಜಿಲ್ಲೆಯ ಶಾಸಕರೊಂದಿಗೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ, ಸುರ್ಜೇವಾಲಾ ಅವರು ಆಯಾ ಜಿಲ್ಲೆಗಳ ಶಾಸಕರಿಂದ ಪಕ್ಷದ ಸಂಘಟನೆ, ಸ್ಥಳೀಯ ಸಮಸ್ಯೆಗಳು ಮತ್ತು ಮುಂಬರುವ ಚುನಾವಣೆಗಳ ಕುರಿತು ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. 

- Advertisement -
Karnataka Congress july 08
Karnataka Congress july 08

ಇವತ್ತು ಹಾವೇರಿ, ಉತ್ತರಕನ್ನಡ ಹಾಗೂ ಧಾರವಾಡ ಜಿಲ್ಲೆಗಳ ಕಾಂಗ್ರೆಸ್​ ಶಾಸಕರಿಗೆ ಸಮಯ ನೀಡಲಾಗಿದೆ. ಇನ್ನೂ ನಾಡಿದ್ದು ಅಂದರೆ ಬುಧವಾರ, ಶಿವಮೊಗ್ಗ, ಹಾವೇರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆ ಆಯ್ದ ಶಾಸಕರಿಗೆ ಸಮಯ ನೀಡಲಾಗಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ಶಾಸಕ ಬಿಕೆ ಸಂಗಮೇಶ್​ರವರಿಗೆ ಮಧ್ಯಾಹ್ನ 1.20-1.40 ರವರೆಗೆ ಸಮಯಾವಕಾಶ ನೀಡಲಾಗಿದೆ. ಇನ್ನೂ ಇವರ ನಂತರ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ಅವಕಾಶ ನೀಡಲಾಗಿದೆ. ಅವರಿಗೆ 1.40 ರಿಂದ 2.00 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ಈ ಅಹವಾಲು ಸಭೆ ನಡೆಯಲಿದೆ.  

Amid discontent among ministers, Karnataka Congress in-charge Randeep Singh Surjewala is meeting MLAs in Bengaluru, offering 20 minutes to each to address their grievances, discuss local issues, and plan for upcoming elections. Check the schedule for various districts.

Karnataka Congress, Randeep Singh Surjewala, MLA meeting, High Command, Minister discontent, Belagavi, Kalaburagi, Raichur, Haveri, Uttara Kannada, Hubballi-Dharwad, Shivamogga, Chitradurga, Davangere, BK Sangameshwara, Belur Gopalakrishna, KPCC office, Political news Karnataka, Congress internal issues.

 

Share This Article
Leave a Comment

Leave a Reply

Your email address will not be published. Required fields are marked *