ದೇವರ ಜೊತೆಗೆ ಹೈಕಮಾಂಡ್ ಆಶೀರ್ವಾದವೂ ಬೇಕು | ಹೀಗೇಕೆ ಅಂದ್ರು ಶಾಸಕ ಗೋಪಾಲಕೃಷ್ಣ ಬೇಳೂರು
Our fans have made many vows that Gopalakrishna Belur should become a minister and god and the high command should bless him.

SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 24, 2025
ಶಿವಮೊಗ್ಗ | ಗೋಪಾಲಕೃಷ್ಣ ಬೇಳೂರು ಮಂತ್ರಿ ಆಗಲಿ ಅಂತ ನಮ್ಮ ಅಭಿಮಾನಿಗಳು ಅನೇಕ ಕಡೆ ಹರಕೆ ಮಾಡಿಕೊಂಡಿದ್ದಾರೆ ಅದಕ್ಕೆ ದೇವರು ಹಾಗೂ ಹೈಕಮಾಂಡ್ ಆಶೀರ್ವಾದ ಮಾಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಿಎಂ ಆಗಲಿ ಎಂದು ಸತೀಶ್ ಜಾರಕಿಹೊಳಿ ಅಭಿಮಾನಿಗಳಿಂದ ಸಿಗಂದೂರಿನಲ್ಲಿ ಪೂಜೆ ವಿಚಾರ ಕುರಿತು ನಗರದಲ್ಲಿ ಶಾಸಕರು ಈ ಮೇಲಿನಂತೆ ಪ್ರತಿಕ್ರಿಯಿಸಿದರು. ಅವರ ನೆಚ್ಚಿನ ನಾಯಕರುಗಳಿಗೆ ಅಭಿಮಾನಿಗಳು ದೊಡ್ಡ ಹುದ್ದೆ ಸಿಗಲಿ ಎಂದು ಪೂಜೆ ಸಲ್ಲಿಸುವುದು ಸಹಜ. ಹರಕೆ ಮಾಡಿಕೊಂಡ ತಕ್ಷಣ ದೊಡ್ಡ ಹುದ್ದೆ ಕೊಡುವುದಕ್ಕೆ ಆಗುವುದಿಲ್ಲ ಅದನ್ನು ತೀರ್ಮಾನ ಮಾಡಲು ಹೈಕಮಾಂಡ್ ಇದೆ. ಡಿಕೆ ಶಿವಕುಮಾರ್‌ರವರು ಮುಖ್ಯಮಂತ್ರಿ ಆಗಬೇಕು ಅಂತ ಅವರ ಅಭಿಮಾನಿಗಳು ಹರಕೆ ಮಾಡಿಕೊಂಡಿದ್ದಾರೆ. ನಮ್ಮ ಕಾರ್ಯಕರ್ತರು ಮುಖಂಡರು ನಾನು ಸಹ ಮಂತ್ರಿ ಆಗಲಿ ಅಂತ ಹರಕೆ ಮಾಡಿಕೊಂಡಿದ್ದಾರೆ. ಅದಕ್ಕೆಲ್ಲ ದೇವರು ಹಾಗೂ ಹೈಕಮಾಂಡ್ ಆಶೀರ್ವಾದ ಮಾಡಬೇಕು ಎಂದರು.
SUMMARY | Our fans have made many vows that Gopalakrishna Belur should become a minister and god and the high command should bless him.
KEYWORDS | Gopalakrishna Belur, satish jarkiholi, politics,