health tips by malenadu today ಶಿವಮೊಗ್ಗ, malenadu today news : August 20 2025 : ಸಾಮಾನ್ಯವಾಗಿ ದೇಹ ಘಟ್ಟಿಯಾಗಿ ಇಟ್ಕೊಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಅವರದ್ದೆ ಆದ ಕಾರಣಕ್ಕೆ ವ್ಯಾಯಾಮ ಮಾಡೋದಕ್ಕೆ ಬಹುತೇಕರು ಹೋಗಲ್ಲ. ಹಾಗಂತ ದೇಹ ಹಾಗೆ ಮಾತು ಕೇಳುತ್ತಾ. ರಜಿನಿಕಾಂತ್ ಹೇಳುವ ಹಾಗೆ, ದೇಹವನ್ನು ದಂಡಿಸದೆ ಹೋದರೆ ಒಂದು ಅದು ನಮ್ಮನ್ನು ದಂಡಿಸದೆ ಬಿಡೋದಿಲ್ಲ. ಹೀಗಾಗಿ ಆರೋಗ್ಯ ಭಾಗ್ಯ ಎನ್ನುವುದು ಒಪ್ಪಿಕೊಳ್ಳಲೇಬೇಕು. ಆದರೂ ಬ್ಯುಸಿ ಲೈಫ್ನಲ್ಲಿ ಹೇಗೆ ವ್ಯಾಯಾಮಕ್ಕೆ ಅಂತಾ ಟೈಂಕೊಡೋದು ಎನ್ನುವವರಿಗೆ ಇಲ್ಲಿದೆ ಸರಳ ಸೂತ್ರ
ಇದನ್ನು ಸಹ ಓದಿ : 15 ದಿನ ಶಿವಮೊಗ್ಗ ಜಿಲ್ಲೆಯಲ್ಲಿ ಪೇಪರ್ ಬ್ಲಾಷ್ಟಿಂಗ್ ಹಾಗೂ ಸಿಡಿಮದ್ದು ನಿಷೇಧ https://malenadutoday.com/ganesh-chaturthi/
ಏನಂದರೆ, ಜಿಮ್ಗೆ ಹೋಗದೆ ಅಥವಾ ಮನೆಯಲ್ಲಿಯೇ ಗಂಟೆಗಟ್ಲೆ ವರ್ಕೌಟ್ ಮಾಡದೇನೆ ಆರೋಗ್ಯವನ್ನು ಮತ್ತಷ್ಟು ಚೈತನ್ಯಗೊಳಿಸಬಹುದು. ಸೋವಿಯತ್ ವಿಶೇಷ ಪಡೆಗಳ ತರಬೇತುದಾರರು ಬಳಸುತ್ತಿದ್ದ ಈ ತಂತ್ರ ಈಗ ಸ್ವಲ್ಪ ಫೇಮಸ್ ಆಗುತ್ತಿದೆ ಅಂತಾ ಅಂತಾರಾಷ್ಟ್ರಿಯ ಮೀಡಿಯಾವೊಂದು ವರದಿ ಮಾಡಿದೆ. ‘ಗ್ರೀಸಿಂಗ್ ದಿ ಗ್ರೂವ್ (Greasing the Groove-GtG)’ ಎಂದು ಕರೆಯಲ್ಪಡುವ ಈ ತಂತ್ರಗಾರಿಕೆಯಲ್ಲಿ ಆಗಾಗ ವ್ಯಾಯಾಮ ಮಾಡಲು ಹೇಳಲಾಗಿದೆ ಅಂದರೆ, ಪ್ರತಿ ಸಲ ಬಾಗಿಲ ಬಳಿ ಹೋದಾಗ, ಅಥವಾ ಸಜ್ಜಾ ಸಿಕ್ಕಾಗ 3 ಪುಲ್-ಅಪ್ ಮಾಡುವುದ, ಟಾಯ್ಲೆಟ್ಗೆ ಹೋಗಿ ಬರುವಾಗ 10 ಸ್ಕ್ವಾಟ್ ಹೊಡೆಯುವುದು ಊಟಕ್ಕೆ ಮುಂಚೆ 5 ಪುಷ್-ಅಪ್ ಮಾಡುವುದು, ಹೀಗೆ ಇಷ್ಟವಾಗುವ ಹಾಗೂ ಅನುಕೂಲಕ್ಕೆ ಥರುವಾದ ಎಕ್ಸ್ಸೈಜ್ಗಳನ್ನು ಮಾಡುವುದರಿಂದ ದೇಹವೂ ಫಿಟ್ ಆಗಿರುತ್ತದೆ.

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
ಟೈಂ ಸಹ ಉಳಿಯುತ್ತದೆ ಎಂಬುದು ಇದರ ಸಾರಸ್ಯಕರ ಚಿಂತನೆ. ವಿಶೇಷ ಅಂದರೆ, ಇದರಿಂದ ಸ್ನಾಯುಗಳ ಬೆಳವಣಿಗೆಯಷ್ಟೆ ಅಲ್ಲದೆ, ನರಮಂಡಲದ ಮೇಲೂ ಕೆಲವು ಪರಿಣಾಮ ಬೀರುತ್ತದಯಂತೆ. ಮೇಲಾಗಿ ಇದನ್ನು ಹೀಗೆ ಮಾಡಬೇಕು ಎಂಬ ರೂಲ್ಸ್ ಇಲ್ಲ, ಇಷ್ಟೆ ಭಾರ ಎತ್ತಬೇಕು ಅನ್ನುವ, ಅಥವಾ ಇಷ್ಟೆ ಹೊತ್ತು ಮಾಡಬೇಕು ಅಥವಾ ಈಥರಕ್ಕೆ ಈಥರ ಎನ್ನುವ ಯಾವುದೆ ನಿಯಮ ಇಲ್ಲದೆ ಮಾಡುವುದನ್ನ ಪ್ರತಿದಿನ ಮಾಡಿದರೆ, ಪ್ರಯತ್ನ ಅಭ್ಯಾಸವಾಗುವುದರಲ್ಲಿ ಅನುಮಾನ ಇಲ್ಲವಂತೆ
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
health tips by malenadu today