GST Trouble UPI Payments Under Scrutiny 16 ಮಲೆನಾಡು ಟುಡೆ ವಿಶೇಷ: ಗ್ರಾಹಕರಿಂದ ಆನ್‌ಲೈನ್ ಮೂಲಕ (UPI) ಹಣ ಸ್ವೀಕರಿಸುತ್ತಿರುವುದು ನಗರದ ಸಣ್ಣ ವ್ಯಾಪಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಪ್ರಮುಖ ಕಾರಣ, ಯುಪಿಐ ಪಾವತಿ ಡೇಟಾವನ್ನು ಆಧರಿಸಿ ವಾಣಿಜ್ಯ ತೆರಿಗೆ ಇಲಾಖೆಯಿಂದ ದಿಢೀರನೆ ಬರುತ್ತಿರುವ ಜಿಎಸ್‌ಟಿ ನೋಟಿಸ್‌ಗಳು. ಇದರಿಂದ ವ್ಯಾಪಾರಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದು, ಮಧ್ಯಮ ವರ್ಗದ ವ್ಯಾಪಾರಸ್ಥರು ‘ಆನ್‌ಲೈನ್ ಪಾವತಿ ಬೇಡವೇ ಬೇಡ’ ಎನ್ನುವಷ್ಟರ ಮಟ್ಟಿಗೆ ಜಿಎಸ್‌ಟಿ ಭಯ ಅವರನ್ನು ಕಾಡುತ್ತಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ https://chat.whatsapp.com/CTxKdbjEu0zLLQD5RTVkRt
2021 ರಿಂದ ಜಿಎಸ್‌ಟಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ವಾಣಿಜ್ಯ ತೆರಿಗೆ ಇಲಾಖೆ, ಇದೀಗ ಸಣ್ಣಪುಟ್ಟ ವ್ಯಾಪಾರಸ್ಥರ ವ್ಯವಹಾರದ ಲೆಕ್ಕಾಚಾರದ ಮೇಲೆ ಕಣ್ಣಿಟ್ಟಿದೆ. ಮೂರು-ನಾಲ್ಕು ವರ್ಷಗಳ ಯುಪಿಐ ಪಾವತಿ ಡೇಟಾವನ್ನು ಸಂಗ್ರಹಿಸಿ, “ನಿಮ್ಮ ಆರು ತಿಂಗಳ ವಹಿವಾಟು ಇಷ್ಟಿದೆ, ಆ ಲೆಕ್ಕದಲ್ಲಿ ಮೂರು ವರ್ಷಕ್ಕೆ ಇಷ್ಟು ಆಗುತ್ತದೆ. ಒಟ್ಟು ವಹಿವಾಟಿನ ಪ್ರಕಾರ ಇಷ್ಟು ಪರ್ಸೆಂಟ್ ಜಿಎಸ್‌ಟಿ ಬರುತ್ತದೆ, ಅದನ್ನು ದಂಡಸಹಿತ ಪಾವತಿಸಿ” ಎಂದು ನೋಟಿಸ್‌ಗಳನ್ನು ನೀಡುತ್ತಿದೆ.

‘ಯಾವುದೇ ಪೂರ್ವ ಮಾಹಿತಿ ನೀಡದೆ ಇದ್ದಕ್ಕಿದ್ದಂತೆ ಇಂತಹ ದೊಡ್ಡ ಮೊತ್ತದ ನೋಟಿಸ್‌ಗಳು ಬರುತ್ತಿರುವುದು ವ್ಯಾಪಾರಿಗಳನ್ನು ಕಂಗೆಡಿಸಿದೆ. “ಆರು ತಿಂಗಳಿಗೆ 20 ಲಕ್ಷ ರೂ. ವ್ಯಾಪಾರ ಮಾಡಿದ್ದೀರಿ ಎಂದು ಲೆಕ್ಕ ಹೇಳಿ, ಮೂರು ವರ್ಷಕ್ಕೆ ಏಕಕಾಲದಲ್ಲಿ ತೆರಿಗೆ ವಿಧಿಸಿದರೆ ನಮಗೆ ಪಾವತಿಸುವುದು ಅಸಾಧ್ಯ” ಎಂದು ಶಿವಮೊಗ್ಗದ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಈ ವಿಷಯದಲ್ಲಿ ಜಿಎಸ್‌ಟಿ ಇಲಾಖೆ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿಕ್ರಿಯಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
GST Trouble UPI Payments Under Scrutiny TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h
ಲಕ್ಷಗಟ್ಟಲೆ ದುಡ್ಡನ್ನು ತೆರಿಗೆ ರೂಪದಲ್ಲಿ ಹೇಗೆ ಕಟ್ಟುವುದು ಎಂದು ವ್ಯಾಪಾರಸ್ಥರು ಪರದಾಡುತ್ತಿದ್ದಾರೆ. ಇದಲ್ಲದೆ, ತೆರಿಗೆಯ ದಂಡ ಮತ್ತು ಅದರ ಸ್ವರೂಪದ ಬಗ್ಗೆ ಗೊಂದಲಕ್ಕೊಳಗಾಗಿದ್ದು, ಮುಂದೇನು ಮಾಡಬೇಕೆಂದು ತಿಳಿಯದೆ ಸಿಕ್ಕಸಿಕ್ಕವರ ಬಳಿ ವಿಚಾರಿಸುತ್ತಿದ್ದಾರೆ. ಕೇವಲ ಶಿವಮೊಗ್ಗದಲ್ಲಿಯೇ ನೂರಾರು ವ್ಯಾಪಾರಸ್ಥರು ಈ ಸಮಸ್ಯೆಗೆ ಸಿಲುಕಿದ್ದಾರೆ. ಪಾನಿಪೂರಿ, ತರಕಾರಿ, ಮಟನ್ ಸ್ಟಾಲ್, ವೆಜ್, ನಾನ್ ವೆಜ್, ಫಿಶ್ ಹೋಟೆಲ್‌ಗಳು ಸೇರಿದಂತೆ ಹೆಚ್ಚು ವ್ಯಾಪಾರ ಮಾಡುವ ಸಣ್ಣ ಗಾಡಿ ಹೋಟೆಲ್‌ಗಳಿಗೂ ಸಹ ಈ ನೋಟಿಸ್‌ಗಳು ರವಾನೆಯಾಗುತ್ತಿವೆ. ಇದರಿಂದ ಉಳಿದ ವ್ಯಾಪಾರಸ್ಥರೂ ಆತಂಕಗೊಂಡಿದ್ದಾರೆ.
GST Trouble UPI Payments Under Scrutiny ಜಿ.ಎಸ್.ಟಿ. ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆಯ ಸ್ಪಷ್ಟನೆ ಮತ್ತು ನಿಯಮಗಳು:
ವಾಣಿಜ್ಯ ತೆರಿಗೆ ಇಲಾಖೆಯು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಜುಲೈ 1, 2017 ರಿಂದ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ಕಾಯಿದೆ 2017ರ ಕಲಂ 22 ರನ್ವಯ, ಈ ಕೆಳಗಿನ ವರ್ತಕರು ಜಿ.ಎಸ್.ಟಿ. ನೋಂದಣಿ ಪಡೆಯುವುದು ಕಡ್ಡಾಯವಾಗಿದೆ:
ಸರಕು ಪೂರೈಕೆದಾರರು: ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ ₹40 ಲಕ್ಷ ರೂಪಾಯಿಗಳನ್ನು ಮೀರಿದರೆ.
ಸೇವೆಗಳ ಪೂರೈಕೆದಾರರು: ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ ₹20 ಲಕ್ಷ ರೂಪಾಯಿಗಳನ್ನು ಮೀರಿದರೆ.
ಈ ಸಮಗ್ರ ವಹಿವಾಟಿನಲ್ಲಿ ವಿನಾಯಿತಿ ಪಡೆದ (Exempted) ಮತ್ತು ತೆರಿಗೆ ವಿಧಿಸಬಹುದಾದ (Taxable) ಸರಕುಗಳು ಮತ್ತು ಸೇವೆಗಳು ಎರಡೂ ಸೇರಿರುತ್ತವೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಆದರೆ, ತೆರಿಗೆ ಬಾಧ್ಯತೆಯು ಕೇವಲ ತೆರಿಗೆ ವಿಧಿಸಬಹುದಾದ ಸರಕುಗಳು ಮತ್ತು ಸೇವೆಗಳಿಗೆ ಮಾತ್ರ ಅನ್ವಯವಾಗುತ್ತದೆ. ಉದಾಹರಣೆಗೆ, ಬ್ರೆಡ್ ಮಾರಾಟದ ಮೇಲೆ ತೆರಿಗೆ ಇರುವುದಿಲ್ಲ, ಆದರೆ ಕುರುಕುಲು ತಿಂಡಿಗಳ ಮೇಲೆ 5% ತೆರಿಗೆ ಬಾಧ್ಯತೆ ಇರುತ್ತದೆ.
GST Trouble UPI Payments Under Scrutiny
ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ : https://malenadutoday.com/category/shivamogga/
ವಾಣಿಜ್ಯ ತೆರಿಗೆ ಇಲಾಖೆಯು ಏಕೀಕೃತ ಪಾವತಿ ವ್ಯವಸ್ಥೆ (ಯು.ಪಿ.ಐ.) ಮೂಲಕ ವರ್ತಕರು 2021-22 ರಿಂದ 2024-25ರ ಸಾಲಿನಲ್ಲಿ ಸ್ವೀಕರಿಸಿರುವ ಹಣದ ವಿವರಗಳನ್ನು ವಿವಿಧ ಯು.ಪಿ.ಐ. ಸೇವೆಗಳ ಪೂರೈಕೆದಾರರಿಂದ ಸಂಗ್ರಹಿಸಿದೆ. ವರ್ತಕರು ಯು.ಪಿ.ಐ. ಮಾತ್ರವಲ್ಲದೆ ನಗದು ಮತ್ತು ಇತರ ವಿಧಾನಗಳಲ್ಲಿಯೂ ಹಣ ಪಡೆಯುವುದರಿಂದ, ಯು.ಪಿ.ಐ. ಮೂಲಕ ₹40 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಪಡೆದಿರುವ ವರ್ತಕರ ವಾರ್ಷಿಕ ವಹಿವಾಟು ಇನ್ನೂ ಗಣನೀಯವಾಗಿ ಹೆಚ್ಚಾಗಿರುತ್ತದೆ ಎಂದು ಇಲಾಖೆ ತಿಳಿಸಿದೆ.
ಸದರಿ ಮಾಹಿತಿಯನ್ನು ಪರಿಶೀಲಿಸಿ, ₹40 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಯು.ಪಿ.ಐ. ಮೂಲಕ ಪಡೆದು, ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017 ರಡಿಯಲ್ಲಿ ನೋಂದಣಿಯನ್ನು ಪಡೆಯದೆ, ತೆರಿಗೆ ಪಾವತಿಸದೆ ಇರುವ ವರ್ತಕರಿಗೆ ನೋಟೀಸು ಜಾರಿಗೊಳಿಸಲಾಗಿದೆ. ಈ ನೋಟೀಸುಗಳಿಗೆ ವರ್ತಕರು ತಾವು ಮಾರಾಟ ಮಾಡಿದ ಸರಕು ಮತ್ತು ಸೇವೆಗಳ ವಿವರಗಳನ್ನು ನೀಡಿ ಸರಿಯಾದ ತೆರಿಗೆಯನ್ನು ಪಾವತಿಸಬೇಕಾಗಿರುತ್ತದೆ.
GST Trouble UPI Payments Under Scrutiny
ಇಂತಹ ವರ್ತಕರು ತಕ್ಷಣವೇ ಜಿ.ಎಸ್.ಟಿ. ನೋಂದಣಿ ಪಡೆಯಬೇಕು ಎಂದು ಇಲಾಖೆ ಸೂಚಿಸಿದೆ. ವಾರ್ಷಿಕ ವಹಿವಾಟು ₹1.5 ಕೋಟಿ ರೂಪಾಯಿಗಳಿಗಿಂತ ಕಡಿಮೆ ಇರುವ ಸಣ್ಣ ವರ್ತಕರು ರಾಜಿ ತೆರಿಗೆ (Composition Scheme) ಆಯ್ಕೆ ಮಾಡಿಕೊಳ್ಳುವ ಮೂಲಕ ಇನ್ನು ಮುಂದೆ ಕೇವಲ 1% ತೆರಿಗೆ ಪಾವತಿಸಬಹುದಾಗಿರುತ್ತದೆ. ಸರಕು ಮತ್ತು ಸೇವಾ ತೆರಿಗೆ ಕಾಯಿದೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ಇಲಾಖೆಯ ಜಾಲತಾಣ https://gst.kar.nic.in/ ಅನ್ನು ಸಂಪರ್ಕಿಸಲು ಸೂಚಿಸಲಾಗಿದೆ.

UPI Payments Trigger GST Notices for Small Businesses in Karnataka; Tax Department Clarifies Rules
Small traders in Karnataka, including Shivamogga, are receiving unexpected GST notices based on UPI transaction data. While alarming, the Commercial Tax Department clarifies GST registration thresholds (₹40L for goods, ₹20L for services) and offers a 1% Composition Scheme for small businesses
ಜಿಎಸ್‌ಟಿ ನೋಟಿಸ್, ಯುಪಿಐ ಪಾವತಿ, ಸಣ್ಣ ವ್ಯಾಪಾರಿಗಳು, ವಾಣಿಜ್ಯ ತೆರಿಗೆ ಇಲಾಖೆ, ಶಿವಮೊಗ್ಗ, ಆನ್‌ಲೈನ್ ಪಾವತಿ, ವ್ಯಾಪಾರ, ತೆರಿಗೆ ನಿಯಮಗಳು, ನೋಂದಣಿ, ಕಾಂಪೋಸಿಷನ್ ಸ್ಕೀಮ್, ಆರ್ಥಿಕತೆ, GST Notice, UPI Payments, Small Businesses, Commercial Tax Department, Shivamogga, Online Payments, Trade, Tax Rules, Registration, Composition Scheme, Economy, #GSTIndia #UPITax #SmallBusiness #TaxNotice #Shivamogga #IndianEconomy #DigitalPayments #GSTCompliance #TaxUpdate
GST Trouble UPI Payments Under Scrutiny