Dhruva sarja :ನಟ ಧ್ರುವ ಸರ್ಜಾ ಅವರ ವಿರುದ್ಧ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ 3.15 ಕೋಟಿ ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ನಿರ್ದೇಶಕ ಹಾಗೂ ನಿರ್ಮಾಪಕರಾದ ರಾಘವೇಂದ್ರ ಹೆಗಡೆ ಎಂಬುವವರು ಈ ದೂರನ್ನು ನೀಡಿದ್ದಾರೆ.
Dhruva sarja ಏನಿದು ಕೇಸ್
ದೂರಿನ ಪ್ರಕಾರ, ರಾಘವೇಂದ್ರ ಹೆಗಡೆ ಅವರು 2016ರಲ್ಲಿ ಧ್ರುವ ಸರ್ಜಾ ಅವರೊಂದಿಗೆ ಸಿನಿಮಾ ನಿರ್ಮಿಸಲು ಒಪ್ಪಿಕೊಂಡಿದ್ದರು. ಈ ಸಂಬಂಧ, ಧ್ರುವ ಸರ್ಜಾ ಅವರು ಸಿನಿಮಾ ಮುಂಗಡವಾಗಿ 3 ಕೋಟಿ ಕೇಳಿದ್ದಾರೆ. ಹೆಗಡೆ ಅವರು ಬಡ್ಡಿದರದಲ್ಲಿ ಸಾಲ ಪಡೆದು, 3.15 ಕೋಟಿ ಹಣವನ್ನು ಧ್ರುವ ಸರ್ಜಾ ಅವರಿಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಫೆಬ್ರವರಿ 21, 2019 ರಂದು ಇವರಿಬ್ಬರ ನಡುವೆ ಔಪಚಾರಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದ ಪ್ರಕಾರ, ಚಿತ್ರದ ಚಿತ್ರೀಕರಣವು ಜನವರಿ 2020 ರಲ್ಲಿ ಪ್ರಾರಂಭವಾಗಿ ಜೂನ್ 2020 ರೊಳಗೆ ಮುಗಿಯಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರೀಕರಣ ಪ್ರಾರಂಭವಾಗಿಲ್ಲ. ನಂತರ ಹೆಗಡೆ ಅವರು ಹಲವು ಬಾರಿ ಹಣವನ್ನು ಮರಳಿ ಕೇಳಿದಾಗ, ಧ್ರುವ ಸರ್ಜಾ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಮತ್ತು ಕರೆಗಳನ್ನು ಸ್ವೀಕರಿಸಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಹೆಗಡೆ ಅವರು ಮುಂಬೈನಲ್ಲಿ ದೂರು ದಾಖಲಿಸಿದ್ದಾರೆ.
