Dedicated Anavatti ASI Dies in Hit&Run Crash 07 Shivamogga news / ಶಿವಮೊಗ್ಗ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಆನವಟ್ಟಿ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಬಸವರಾಜಪ್ಪ (50) ಅವರು ನಿನ್ನೆ ಕೊನೆಯುಸಿರೆಳೆದಿದ್ದಾರೆ. ಕೋಮಾ ಸ್ಥಿತಿಯಲ್ಲಿದ್ದ ಬಸವರಾಜಪ್ಪ ಅವರನ್ನು ಆನವಟ್ಟಿಯ ಅವರ ಮನೆಗೆ ಕರೆತರಲಾಗಿದ್ದು, ಅಲ್ಲೇ ಅವರು ಪ್ರಾಣಬಿಟ್ಟಿದ್ದಾರೆ.

ಘಟನೆ ವಿವರ ( Dedicated Anavatti ASI Dies in Hit&Run Crash 07)
ಕಳೆದ ಏಪ್ರಿಲ್ 30, 2025 ರಂದು ರಾತ್ರಿ ಸುಮಾರು 10:30ಕ್ಕೆ ಬಸವರಾಜಪ್ಪ ಅವರು ಪ್ರಕರಣವೊಂದರ ತನಿಖೆಗಾಗಿ ಶಿರಾಳಕೊಪ್ಪಕ್ಕೆ ತೆರಳುತ್ತಿದ್ದರು. ಶಿರಾಳಕೊಪ್ಪ ಪಟ್ಟಣದಲ್ಲಿ ಅವರಿಗೆ ಅಪಘಾತ ಸಂಭವಿಸಿತ್ತು. ಇದು ಹಿಟ್ ಅಂಡ್ ರನ್ ಪ್ರಕರಣ ಎಂದು ಹೇಳಲಾಗುತ್ತಿದೆ. ಅಪಘಾತದ ನಂತರ ಅವರನ್ನು ಶಿಕಾರಿಪುರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮಂಗಳೂರಿನ ವೆನ್ಲಾಕ್, ಮಣಿಪಾಲ್, ಮತ್ತು ಮೆಗ್ಗಾನ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತು. ಕೊನೆಯಲ್ಲಿ ಅವರನ್ನು ಶಿರಾಳಕೊಪ್ಪಕ್ಕೆ ತಂದು ಚಿಕಿತ್ಸೆ ಮುಂದುವರಿಸಲಾಗಿತ್ತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಸವರಾಜಪ್ಪ ಅವರು ದುರಂತ ಅಂತ್ಯ ಕಂಡಿದ್ದಾರೆ. ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಮೃತ ಬಸವರಾಜಪ್ಪ ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.

ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್
ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರು ಎಎಸ್‌ಐ ಬಸವರಾಜಪ್ಪ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ನಾವು ಒಬ್ಬ ನಿಷ್ಠಾವಂತ ಎಎಸ್‌ಐ ಅವರನ್ನು ಕಳೆದುಕೊಂಡಿದ್ದೇವೆ” ಎಂದು ಅವರು ತಿಳಿಸಿದ್ದಾರೆ.
ಶಿವಮೊಗ್ಗದ ಇನ್ನಷ್ಟು ಸುದ್ದಿಗಳಿಗಾಗಿ : malenadutoday.com
Anavatti ASI Basavarajappa (50) succumbs to road accident injuries. SP Mithun Kumar condoles the death of the dedicated officer. Hit-and-run case investigated.