davanagere news ಶಿವಮೊಗ್ಗದ ಇಬ್ಬರು ನಿವಾಸಿಗಳನ್ನು ದಾವಣಗೆರೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಕರಣ ಕುತೂಹಲಕ್ಕೂ ಕಾರಣವಾಗಿದೆ. ನಡೆದಿದ್ದು ಏನು ಎಂಬುದನ್ನು ಗಮನಿಸುವುದಾದರೆ, ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕು ನಲ್ಲಿ ವ್ಯಕ್ತಿಯೊಬ್ಬರ ಮೊಬೈಲ್ ಕಸಿದುಕೊಂಡು ಹೋಗಿದ್ದ ಘಟನೆ ನಡೆದಿತ್ತು. ತಕ್ಷಣವೇ ಅವರು ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ 112 ಪೊಲೀಸರಿಗೆ ಕರೆ ಮಾಡಿ ತಮ್ಮ ಮೊಬೈಲ್ ಕಸಿದುಕೊಂಡು ಹೋಗಿರುವ ಬಗ್ಗೆ ಕಂಪ್ಲೆಂಟ್ ಮಾಡಿದ್ದರು. ವಿಷಯ ತಿಳಿದ ಪೊಲೀಸರು ಆರೋಪಿಗಳ ಜಾಡು ಹಿಡಿಯಲು ಆರಂಭಿಸಿದ್ದರು. ಟವರ್ ಲೊಕೆಷನ್ ಹಾಗೂ ಸ್ಥಳೀಯರ ಮಾಹಿತಿ ಆಧರಿಸಿ ಪೊಲೀಸರು ಆರೋಪಿಗಳಿಬ್ಬರನ್ನು ಹಿಡಿದಿದ್ದರು.
davanagere news
ನ್ಯಾಮತಿ ತಾಲ್ಲೂಕಿನ ಸಾಲಬಾಳು ಕ್ರಾಸ್ ಬಳಿಯ ಕಲ್ಬಿಗಿರಿ ರಂಗನಾಥ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿ ನಡೆದಿದ್ದ ಘಟನೆಯಲ್ಲಿ ಮೊಬೈಲ್ ಕಿತ್ತುಕೊಂಡು ಹೋಗಿದ್ದ ಇಬ್ಬರು ಆರೋಪಿಗಳನ್ನು ಹೊಯ್ಸಳ 112 ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನೆ ನಡೆದು ಕೆಲವೇ ಹೊತ್ತಿನಲ್ಲಿ ಆರೋಪಿಗಳನ್ನ ಬಂಧಿಸಿದ್ದರು. ಈ ಇಬ್ಬರು ಆರೋಪಿಗಳು ಶಿವಮೊಗ್ಗದ ಜಕಾತಿಕೊಪ್ಪದವರು ಎನ್ನಲಾಗಿದೆ. ಶಿವಮೊಗ್ಗ ಇಬ್ಬರನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಬ್ಬರ ಹಿನ್ನೆಲೆಯ ಬಗ್ಗೆ ವಿಚಾರಣೆ ನಡೆಸ್ತಿದ್ದಾರೆ.