Dasara : ಬಾನು ಮುಷ್ತಾಕ್ ದಸರಾ ಉದ್ಘಾಟನೆ : ಬಿವೈ ರಾಘವೇಂದ್ರ ಹೇಳಿದ್ದೇನು
ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ರವರನ್ನು ರಾಜ್ಯ ಸರ್ಕಾರ ಆಹ್ವಾನಿಸಿದ್ದು, ಇದಕ್ಕೆ ಕೆಲವೆಡೆ ಅಪಸ್ವರಗಳು ಕೇಳಿಬಂದಿವೆ. ಈ ಬಗ್ಗೆ ಇಂದು ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ, “ಬಾನು ಮುಷ್ತಾಕ್ ಅವರು ನಾಡಿನ ಭುವನೇಶ್ವರಿಯನ್ನೇ ಒಪ್ಪಿಲ್ಲ. ಹಾಗಿದ್ದ ಮೇಲೆ, ನಮ್ಮ ಚಾಮುಂಡೇಶ್ವರಿಯನ್ನು ಒಪ್ಪುತ್ತಾರ ಎಂದು ಪ್ರಶ್ನಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ದಸರಾ ಉದ್ಘಾಟನೆಗೆ ಸಾಹಿತಿಯನ್ನು ಕರೆಯುತ್ತಿರುವುದಕ್ಕೆ ನಾವು ಧರ್ಮದ ಚೌಕಟ್ಟಿನಲ್ಲಿ ವಿರೋಧಿಸುತ್ತಿಲ್ಲ. ಆದರೆ, ಬಾನು ಮುಷ್ತಾಕ್ ನಮ್ಮ ನಾಡಿನ ಭುವನೇಶ್ವರಿಯನ್ನೇ ಒಪ್ಪಿಲ್ಲ ಎಂಬ ಕಾರಣಕ್ಕೆ, ನಮ್ಮ ಚಾಮುಂಡೇಶ್ವರಿಯನ್ನೇ ಒಪ್ಪುತ್ತಾರಾ ಎಂಬ ಪ್ರಶ್ನೆ ನಮಗೆಲ್ಲ ಮೂಡಿದೆ. ಈಗಾಗಲೇ ಈ ಬಗ್ಗೆ ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದೆ. ಈ ವಿಚಾರದ ಬಗ್ಗೆ ನಮ್ಮ ನಾಯಕರೆಲ್ಲರೂ ಮಾತನಾಡಿದ್ದಾರೆ” ಎಂದರು.
Dasara : ಮಾಜಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಘವೇಂದ್ರ, ಚಾಮುಂಡಿ ದೇವಸ್ಥಾನ ಕೇವಲ ಹಿಂದೂಗಳ ಆಸ್ತಿ ಅಲ್ಲ. ದಸರಾ ಧಾರ್ಮಿಕ ಆಚರಣೆಯಲ್ಲ, ಸಾಂಸ್ಕೃತಿಕ ಆಚರಣೆ” ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಘವೇಂದ್ರ, ಡಿ.ಕೆ. ಶಿವಕುಮಾರ್ ಅವರ ಮನಸ್ಸು ಗೊಂದಲದ ಗೂಡಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂಗಳ ವಿಚಾರದಲ್ಲಿ ಅನಗತ್ಯವಾಗಿ ಮೂಗು ತೂರಿಸುವ ಕೆಲಸ ಮಾಡುತ್ತಿದೆ. ಇತರ ಧರ್ಮದವರನ್ನು ಸೆಳೆಯುವ ಉದ್ದೇಶದಿಂದ ಹಿಂದೂಗಳಿಗೆ ನೋವುಂಟು ಮಾಡುತ್ತಿದೆ. ಉಪಮುಖ್ಯಮಂತ್ರಿಗಳ ಹೇಳಿಕೆ ನೋಡಿದರೆ ನಮಗೆ ಬೇಸರವಾಗುತ್ತದೆ. ವಿಧಾನಸಭೆಯಲ್ಲಿ ಆರ್.ಎಸ್.ಎಸ್ ಪ್ರಾರ್ಥನೆಯನ್ನು ಮಾಡಿ, ಆಮೇಲೆ ತಪ್ಪಾಯಿತು ಎಂದು ಕ್ಷಮೆ ಕೋರುತ್ತಾರೆ. ಧರ್ಮಸ್ಥಳ ವಿಚಾರದಲ್ಲೂ ಹಾಗೆಯೇ ನಡೆದುಕೊಂಡಿದ್ದಾರೆ. ಈಗ ಚಾಮುಂಡಿ ದೇವಾಲಯ ಹಿಂದೂಗಳ ಸ್ವತ್ತಲ್ಲ ಎಂದು ಹೇಳಿದ್ದಾರೆ. ರಾಜಮಾತೆ ಪ್ರಮೋದಾದೇವಿ ಅವರು ಈ ಬಗ್ಗೆ ಅತ್ಯಂತ ನೋವಿನಿಂದ ಮಾತನಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಮನಸ್ಸು ಗೊಂದಲದ ಗೂಡಾಗಿದೆ” ಎಂದರು.
Dasara : ಕಾಂಗ್ರೆಸ್‌ನ ಈ ಷಡ್ಯಂತ್ರಗಳನ್ನು ಕರ್ನಾಟಕದ ಜನತೆ ತಾಳ್ಮೆಯಿಂದ ಗಮನಿಸುತ್ತಿದ್ದಾರೆ. ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದು, ಕಾಂಗ್ರೆಸ್ ಪಕ್ಷವನ್ನು ಶಾಶ್ವತವಾಗಿ ಮನೆಗೆ ಕಳುಹಿಸಲು ಎದುರು ನೋಡುತ್ತಿದ್ದಾರೆ. ಈಗಾಗಲೇ ಧರ್ಮಸ್ಥಳದ ವಿಷಯದಲ್ಲಿ ಬಿಜೆಪಿ ಧರ್ಮಸ್ಥಳ ಚಲೋಗೆ ಕರೆ ನೀಡಿದೆ. ಮೈಸೂರು ದಸರಾ ವಿಚಾರದಲ್ಲೂ ಹೀಗೆ ಮಾಡಿದರೆ ಸರಿಯಾದ ಬುದ್ಧಿ ಕಲಿಸುವ ದಿನ ದೂರವಿಲ್ಲ” ಎಂದು ರಾಘವೇಂದ್ರ ಎಚ್ಚರಿಕೆ ನೀಡಿದರು.

1 thought on “ಬಾನು ಮುಷ್ತಾಕ್ ದಸರಾ ಉದ್ಘಾಟನೆ : ಬಿವೈ ರಾಘವೇಂದ್ರ ಹೇಳಿದ್ದೇನು”