SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 9, 2024 Shimoga dam water level
Dam level | ಮಲೆನಾಡು ಶಿವಮೊಗ್ಗದಲ್ಲಿ ಮಳೆ ಮನ್ಸೂಚನೆ ನೀಡಲಾಗಿದೆಯಾದರೂ ಜಲಾನಯನ ಪ್ರದೇಶಗಳಲ್ಲಿ ಮಳೆ ಹೆಚ್ಚಾದಂತಿಲ್ಲ. ಇದಕ್ಕೆ ಪೂರಕವಾಗಿ ಶಿವಮೊಗ್ಗದ ಪ್ರಮುಖ ಜಲಾಶಯವಾದ ಭದ್ರಾ ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರುತ್ತಿಲ್ಲ.
ಭದ್ರಾ ಜಲಾಶಯ- badra dam level
ಶಿವಮೊಗ್ಗದ ಬಿಆರ್ಪಿಯಲ್ಲಿರುವ ಭದ್ರಾ ಜಲಾಶಯಕ್ಕೆ ಇವತ್ತು ಬೆಳಗ್ಗಿನ ಅಂಕಿ ಅಂಶಗಳ ಪ್ರಕಾರ, 9239 ಕ್ಯುಸೆಕ್ಸ್ ನೀರು ಹರಿದು ಬರುತ್ತಿದೆ. ಒಳಹರಿವಿನ ಪ್ರಮಾಣ ಇದಾದರೆ, ಇನ್ನೂ ಡ್ಯಾಮ್ನಿಂದ ಬರೋಬ್ಬರಿ 8047 ಕ್ಯುಸೆಕ್ ನೀರನ್ನ ಹೊರಕ್ಕೆ ಬಿಡಲಾಗುತ್ತಿದೆ. ಒಟ್ಟಾರೆ 71.54 ಟಿಎಂಸಿ ಕೆಪಾಸಿಟಿ ಇರುವ ಡ್ಯಾಮ್ನಲ್ಲಿ ಇವತ್ತು ಬರೋಬ್ಬರಿ68.73 ಟಿಎಂಸಿ ನೀರು ಸಂಗ್ರಹವಾಗಿದೆ.
ಕಳೆದ ವರ್ಷ ಈ ದಿನ ಇದೇ ಭದ್ರಾ ಡ್ಯಾಮ್ನಲ್ಲಿ 44.90 ಟಿಎಂಸಿ ಸಂಗ್ರಹವಾಗಿತ್ತು. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದ 25 ಟಿಎಂಸಿಗೂ ಅಧಿಕ ನೀರು ಡ್ಯಾಮ್ನಲ್ಲಿ ಸಂಗ್ರಹವಾಗಿದೆ.
ಲಿಂಗನಮಕ್ಕಿ ಡ್ಯಾಮ್ – Linganamakki dam
ಇನ್ನೂ ರಾಜ್ಯದ ಪ್ರಮುಖ ಜಲವಿದ್ಯುತ್‌ಗಾರ ಲಿಂಗನಮಕ್ಕಿ ಡ್ಯಾಮ್‌ನಲ್ಲಿಯು ಪ್ರಸ್ತುತ 147.92 ಟಿಎಂಸಿ ನೀರು ಸಂಗ್ರಹವಾಗಿದೆ. ಇದು ಕಳೆದ ವರ್ಷ ಸಂಗ್ರಹವಾಗಿದ್ದ ನೀರಿನ ಪ್ರಮಾಣಕ್ಕಿಂತ ದುಪ್ಪಟ್ಟಿದೆ. ಕಳೆದ ವರ್ಷ ಡ್ಯಾಮ್ನಲ್ಲಿ ಈ ದಿನ 67.62 ಟಿಎಂಸಿ ನೀರು ಸಂಗ್ರಹವಾಗಿತ್ತು. ಇನ್ನೂ ಡ್ಯಾಮ್ಗೆ ಇವತ್ತು ಬೆಳಗಿನ ಅಂಕಿ ಅಂಶಗಳ ಪ್ರಕಾರ, ಒಟ್ಟಾರೆ, 18106 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಈ ಪೈಕಿ 11763 ಕ್ಯೂಸೆಕ್ ನೀರನ್ನು ವಿದ್ಯುತ್ ಉತ್ಪಾದನೆಗಾಗಿ ಬಳಸಿಕೊಳ್ಳಲಾಗುತ್ತಿದೆ.
ಉಳಿದಂತೆ ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟದ ವಿವರ ಹೀಗಿದೆ
ರಾಜ್ಯದ ಎಲ್ಲಾ 14 ಪ್ರಮುಖ ಜಲಾಶಯಗಳಲ್ಲಿ ಒಟ್ಟಾರೆ 895.62 ಟಿ.ಎಂ.ಸಿ ಸಾಮಾರ್ಥ್ಯವಿದ್ದು, 858.26 ಟಿ.ಎಂ.ಸಿ ನೀರು ಸಂಗ್ರಹಣೆಯಾಗಿದ್ದು, ಒಟ್ಟು ಸಾಮಾರ್ಥ್ಯದ ಶೇ.96ರಷ್ಟಿದೆ.
ವಿದ್ಯುತ್ ಉತ್ಪಾಧನೆ ಜಲಾಶಯಗಳಲ್ಲಿ ಶೇ.95ರಷ್ಟು, ಕಾವೇರಿ ಕಣಿವೆ 4 ಜಲಾಶಯಗಳಲ್ಲಿ ಶೇ.99ರಷ್ಟು, ಹಾಗೂ ಕೃಷ್ಣಾ ಕಣಿವೆ ವ್ಯಾಪ್ತಿ ಜಲಾಶಯಗಳಲ್ಲಿ ಶೇ.97ರಷ್ಟು ನೀರಿನ ಸಂಗ್ರಹಣೆಯಿದೆ.
ದಿನಾಂಕ 09-09-2024ರನ್ವಯ ಒಟ್ಟಾರೆ ಎಲ್ಲಾ ಜಲಾಶಯಗಳಿಗೆ 17.8 ಟಿ.ಎಂ.ಸಿ ನೀರು ಹರಿದು ಬಂದಿದ್ದು, ವಿದ್ಯುತ್ ಉತ್ಪಾಧನಾ ಜಲಾಶಯಗಳಿಗೆ 3.1 ಟಿಎಂಸಿ, ಕಾವೇರಿ ಕಣಿವೆ ಜಲಾಶಯಗಳಿಗೆ 1.6 ಟಿಎಂಸಿ ಹಾಗೂ ಕೃಷ್ಣ ಕಣಿವೆ ಜಲಾಶಯಗಳಿಗೆ 13.1 ಟಿಎಂಸಿ ಒಳಹರಿವು ಕಂಡುಬಂದಿದೆ.
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ದರಿಕೆ: ದೂರು, ಪ್ರತಿ ದೂರು ದಾಖಲು
ಪ್ರಜಾವಾಣಿ ವಾರ್ತೆ
ರಿಪ್ಪನ್‌ಪೇಟೆ: ಇಲ್ಲಿನ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ರಾಘವೇಂದ್ರ ಎ.ಎನ್. ಅವರ ಮೇಲೆ ಸಾಗರದ ಶ್ರೀಧರ ನಗರ ಬಡಾವಣೆಯ ಶೈಲಜಾ ಅವರು ನೀಡಿರುವ ದೂರಿನ ಆಧಾರದ ಮೇಲೆ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ.
ರಿಪ್ಪನ್‌ಪೇಟೆಯ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಶೈಲಜಾ ಅವರು ಹೋಗಿ ಬರುತ್ತಿದ್ದಾಗ ಆರೋಪಿ ರಾಘವೇಂದ್ರ ಅವರು ಅವಾಚ್ಯ ಶಬ್ಧಗಳಿಂದ ಬೈಯ್ದು ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿ ದೂರು: ‘ನನ್ನ ಪತಿ ರಾಘವೇಂದ್ರ ಅವರಿಗೆ ₹ 10 ಲಕ್ಷ ನೀಡುವಂತೆ ಶೈಲಜಾ ಅವರು ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ದೂರು ದಾಖಲಿಸುವುದಾಗಿ ಮೊಬೈಲ್ ಪೋನ್ ಮೂಲಕ ಕರೆ ಮಾಡಿ ಬೆದರಿಕೆ ಹಾಕಿದ್ದರು’ ಎಂದು ರಾಘವೇಂದ್ರ ಅವರ ಪತ್ನಿ ಸೀಮಾ ಪೊಲೀಸರಿಗೆ ದೂರು ನೀಡಿದ್ದಾರೆ.
ಶೈಲಜಾ ಅವರ ಕೃತ್ಯಕ್ಕೆ ಅವರ ಪತಿ ವೀರೇಶ್ ಕೂಡ ಬೆಂಬಲವಾಗಿ ನಿಂತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಶೈಲಜಾ ಹಾಗೂ ವೀರೇಶ್ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.