ದಿನಭವಿಷ್ಯ! ಧನಲಾಭ! ಪ್ರೇಮ ಮಿಲನ ! ಈ ದಿನದ ವಿಶೇಷ

ajjimane ganesh

Rashi Bhavishya Kannada  ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 29, 2025:  ಇಂದಿನ ರಾಶಿ ಭವಿಷ್ಯ ,ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಶರದೃತುವಿನ ಕಾರ್ತಿಕ ಮಾಸ, ಅಷ್ಟಮಿ ತಿಥಿ. ನಕ್ಷತ್ರ: ಉತ್ತರಾಷಾಢ. ರಾಹು ಕಾಲ: ಮಧ್ಯಾಹ್ನ 12.00 ರಿಂದ 1.30 ರವರೆಗೆ.ಯಮಗಂಡ: ಬೆಳಿಗ್ಗೆ 7.30 ರಿಂದ 9.00 ರವರೆಗೆ.

Daily horoscope Rashi Bhavishya Kannada astrology October 29 2025 horoscope, Today's Rashi Phala, Kannada Panchanga
Daily horoscope Rashi Bhavishya Kannada astrology October 29 2025 horoscope, Today’s Rashi Phala, Kannada Panchanga

ದಾವಣಗೆರೆ, ಶಿವಮೊಗ್ಗ, ಉತ್ತರಕನ್ನಡ, ಚಾಮರಾಜನಗರ, ಪುತ್ತೂರು ಎಷ್ಟಿದೆ ಅಡಿಕೆ ದರ

- Advertisement -

ದಿನಭವಿಷ್ಯ

ಮೇಷ : ಆತ್ಮೀಯ ಗೆಳೆಯರಿಂದ ಬೆಂಬಲ ಮತ್ತು ಸಹಾಯ ದೊರೆಯಲಿದೆ. ಅನಿರೀಕ್ಷಿತವಾಗಿ ಧನಲಾಭ. ಕೈಗೊಳ್ಳುವ ಎಲ್ಲ ಪ್ರಯತ್ನಗಳಲ್ಲಿಯೂ ಯಶಸ್ಸನ್ನು ಸಾಧಿಸುತ್ತೀರಿ. ಧಾರ್ಮಿಕ ಸ್ಥಳಗಳಿಗೆ ಭೇಟಿ. ವ್ಯಾಪಾರ-ವ್ಯವಹಾರ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಾಣುವಿರಿ.

ವೃಷಭ : ಸಾಲ ಆಗಬಹುದು. ಅನಿರೀಕ್ಷಿತ ಪ್ರಯಾಣ, ವ್ಯವಹಾರಗಳು ಸ್ವಲ್ಪ ಮಟ್ಟಿಗೆ ನಿಧಾನ ಗತಿಯಲ್ಲಿ ಸಾಗಲಿವೆ. ಅನಗತ್ಯ ಖರ್ಚು-ವೆಚ್ಚಗಳು ಹೆಚ್ಚಾಗುವ ಸಂಭವವಿದೆ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಹೆಗಲಿಗೆ ಬೀಳಲಿವೆ. ದೈಹಿಕ ತೊಂದರೆ ಕಾಣಿಸಿಕೊಳ್ಳಬಹುದು

ಮಿಥುನ : ಕೌಟುಂಬಿಕ ಸದಸ್ಯರೊಂದಿಗೆ ವಿವಾದ ಉಂಟಾಗಬಹುದು. ಆದಾಯಕ್ಕಿಂತ ಹೆಚ್ಚು ಖರ್ಚಾಗುವ ಸಾಧ್ಯತೆ ಇದೆ. 

ವ್ಯವಹಾರದಲ್ಲಿ ಕೆಲವು ಸಮಸ್ಯೆ ಎದುರಿಸಬೇಕಾಗುತ್ತದೆ. ಉದ್ಯೋಗದಲ್ಲಿ ಹೊಸ ಪ್ರಯತ್ ವಿಫಲಗೊಳ್ಳಬಹುದು. 

Daily horoscope Rashi Bhavishya Kannada astrology October 29 2025 horoscope, Today's Rashi Phala, Kannada Panchanga
Daily horoscope Rashi Bhavishya Kannada astrology October 29 2025 horoscope, Today’s Rashi Phala, Kannada Panchanga

ಶಿವಮೊಗ್ಗದಲ್ಲಿ ನಡೆಯುತ್ತಿದ್ದಿದ್ದು ಸಾಗರದಲ್ಲಿಯು ಶುರುವಾಯ್ತು! ದಾಖಲಾಯ್ತು ಕೇಸ್

ಕರ್ಕಾಟಕ : ಗೌರವ ಮತ್ತು ಮನ್ನಣೆ ಲಭಿಸಲಿದೆ. ಧನಲಾಭ. ಆಸ್ತಿ ಸಂಬಂಧಿತ ವಿವಾದ ಪರಿಹಾರಗೊಳ್ಳುತ್ತವೆ. ಮನೆ ಅಥವಾ ವಾಹನ ಖರೀದಿಗಾಗಿ ಸಾಲ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ಗಳಿಸುತ್ತೀರಿ. ಕೆಲಸದ ಸ್ಥಳದಲ್ಲಿ ವಿಶೇಷವಾದ ಮನ್ನಣೆ ದೊರೆಯಲಿದೆ.

ಸಿಂಹ:  ಹೊಸ ಪರಿಚಯ. ದೇವಸ್ಥಾನಗಳಿಗೆ ಭೇಟಿ. ಕುಟುಂಬದಲ್ಲಿ ಶುಭ ಕಾರ್ಯ. ಆಸ್ತಿ ಲಾಭ. ಕಠಿಣ ಪರಿಶ್ರಮಕ್ಕೆ ತಕ್ಕ ಯಶಸ್ಸು ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಯಾವುದೇ ಅಡ್ಡಿ-ಆತಂಕಗಳು ಇರುವುದಿಲ್ಲ.

ಕನ್ಯಾ:  ಜವಾಬ್ದಾರಿ ಅಧಿಕವಾಗಲಿವೆ. ವ್ಯವಹಾರದಲ್ಲಿ ಕೆಲವು ತೊಡಕು. ಕೆಲಸದಲ್ಲಿ ಅಡೆತಡೆ ಉಂಟಾಗಬಹುದು. ಆರೋಗ್ಯ ಸಂಬಂಧಿತ ಸಮಸ್ಯೆ ಕಾಡಬಹುದು. ಮಾನಸಿಕ ಒತ್ತಡ

ತುಲಾ : ಕೈಗೊಳ್ಳುವ ಕೆಲಸದಲ್ಲಿ ಕೆಲವು ಅಡೆತಡೆ.ಸಮಸ್ಯೆಗಳು ಎದುರಾಗಲಿದೆ. ಅನಿರೀಕ್ಷಿತ  ಪ್ರಯಾಣ, ಒತ್ತಡ ಹೆಚ್ಚಾಗಬಹುದು. ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷಿತ ಫಲಿತಾಂಶ. ಉದ್ಯೋಗದಲ್ಲಿ ಬದಲಾವಣೆ

ವೃಶ್ಚಿಕ: ಹೊಸ ಕೆಲಸ. ಉತ್ತಮ ಮತ್ತು ಶುಭ ಸುದ್ದಿಗಳನ್ನು ಕೇಳುವಿರಿ. ಹಣ ಗಳಿಸುವ ಯೋಗವಿದೆ. ವ್ಯಾಪಾರದಲ್ಲಿ ಹೊಸ ಹುರುಪು ಮತ್ತು ಉತ್ತೇಜನ. ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು

ಧನು:  ವಿವಾದ ಉದ್ಭವಿಸಬಹುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಸಂಬಂಧಿಕರೊಂದಿಗೆ ಕಾರಣವಿಲ್ಲದೆ ದ್ವೇಷವು ಬೆಳೆಯಬಹುದು. ವ್ಯವಹಾರದಲ್ಲಿ ನಿರೀಕ್ಷಿತ ಲಾಭವಿರದು. ಉದ್ಯೋಗದಲ್ಲಿ ಕೆಲಸದ ಒತ್ತಡ ಮತ್ತು ಹೊರೆ ಹೆಚ್ಚಾಗುತ್ತದೆ

Daily horoscope Rashi Bhavishya Kannada astrology October 29 2025 horoscope, Today's Rashi Phala, Kannada Panchanga
Daily horoscope Rashi Bhavishya Kannada astrology October 29 2025 horoscope, Today’s Rashi Phala, Kannada Panchanga

ಮಕರ : ಕಠಿಣ ಪರಿಶ್ರಮ. ಹೊಸ ಸಂಪರ್ಕ.ಆದಾಯದಲ್ಲಿ ಹೆಚ್ಚಳ. ಬಹಳ ದಿನಗಳ ಹಿಂದೆ ದೂರವಾದ ಸ್ನೇಹಿತರನ್ನು ಭೇಟಿಯಾಗುವಿರಿ. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ತೃಪ್ತಿಕರ ಪ್ರಗತಿ.

ಕುಂಭ : ವಿರೋಧ ಎದುರಿಸಬೇಕಾಗಬಹುದು. ಆದಾಯವು ನಿರೀಕ್ಷೆಯಷ್ಟು ಹೆಚ್ಚಾಗದಿರಬಹುದು. ದೂರ ಪ್ರಯಾಣ ಇರಬಹುದು. ವ್ಯಾಪಾರ-ವ್ಯವಹಾರ ನಿಧಾನ ಗತಿಯಲ್ಲಿ ಸಾಗಲಿವೆ. ಉದ್ಯೋಗಗಳಲ್ಲಿ ಕೆಲವು ಸಮಸ್ಯೆ ಎದುರಿಸಬೇಕಾಗಬಹುದು

ಮೀನ:  ವ್ಯವಹಾರದಲ್ಲಿ ಉತ್ತಮ ಮುನ್ನಡೆ. ಆಸ್ತಿ ವಿವಾದ. ಶುಭ ಸಮಾಚಾರಗ. ವಾಹನ ಖರೀದಿಸುವ ಸಾಧ್ಯತೆ ಇದೆ.ಉದ್ಯೋಗಿಗಳಿಗೆ ಉತ್ತಮ ಮನ್ನಣೆ 

Daily horoscope Rashi Bhavishya Kannada astrology October 29 2025 horoscope, Today’s Rashi Phala, Kannada Panchanga

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Share This Article
Leave a Comment

Leave a Reply

Your email address will not be published. Required fields are marked *