SHIVAMOGGA | MALENADUTODAY NEWS | Aug 29, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024
ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮತ್ತು ಮೀನ .
ಇಂದಿನ ರಾಶಿ ಭವಿಷ್ಯ:
Aug 29, 2024 ದಿನಾಂಕದ ಜಾತಕ ಫಲ

ಮೇಷ: ನಿಮಗೆ ಶುಭ ದಿನವಾಗಿರುತ್ತದೆ. ಮನಸ್ಸು ಇತರ ಕಾರ್ಯಗಳಲ್ಲಿ ಹೆಚ್ಚು ನಿರತವಾಗಿರುತ್ತದೆ, ಕೆಲಸವನ್ನು ಪೂರ್ಣಗೊಳಿಸುವಲ್ಲಿ ಸಮಸ್ಯೆ ಉಂಟಾಗುತ್ತದೆ. ನಿಮ್ಮ ಸಲಹೆಗಳನ್ನು ಎಲ್ಲರೂ ಸ್ವಾಗತಿಸುತ್ತಾರೆ. ದಿನವಿಡಿ ಸಂತೋಷಪಡುತ್ತೀರಿ.
ವೃಷಭ: ಇಂದಿನ ರಾಶಿ ಭವಿಷ್ಯ
ಒತ್ತಡದ ದಿನವಾಗಿರುತ್ತದೆ. ಉದ್ಯೋಗದಲ್ಲಿ ಕೆಲವು ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಪಾರ್ಟನರ್ ಶಿಫ್ ಕೆಲಸದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ನಿಮ್ಮ ಮಾನಸಿಕ ಹೊರೆಯಿಂದ ಮುಕ್ತರಾಗಿರುತ್ತೀರಿ
ಮಿಥುನ: ಇಂದಿನ ರಾಶಿ ಭವಿಷ್ಯ
ವ್ಯವಹಾರದಲ್ಲಿ ದೊಡ್ಡ ಘಟನೆ ನಡೆಯಲಿದೆ. ಕಾನೂನು ವಿಷಯದಲ್ಲಿ ಸಮಸ್ಯೆ ಬರಲಿದೆ. ಉದ್ಯೋಗದಲ್ಲಿ ಉತ್ತಮ ಅವಕಾಶ ಸಿಗಲಿದೆ. ಗಮನ ಬೇರೆ ಕಡೆಗೆ ಹೋದರೆ ಸಮಸ್ಯೆಗಳು ಹೆಚ್ಚಾಗಬಹುದು.
ಕರ್ಕಾಟಕ: ಇಂದಿನ ರಾಶಿ ಭವಿಷ್ಯ
ಮಿಶ್ರ ಫಲಿತಾಂಶಗಳ ದಿನವಾಗಿರುತ್ತದೆ. ದೊಡ್ಡ ಕೆಲಸಗಳನ್ನ ಯೋಚಿಸಬಹುದು. ನಿಮ್ಮ ಕೆಲವು ತಪ್ಪುಗಳು ಬಹಿರಂಗವಾಗಬಹುದು. ಜಗಳವಾಗಬಹುದು. ವಿರೋಧಿಗಳನ್ನು ಸುಲಭವಾಗಿ ಸೋಲಿಸಲು ನಿಮಗೆ ಸಾಧ್ಯವಾಗುತ್ತದೆ. ಬುದ್ಧಿವಂತಿಕೆಯಿಂದ ನಿಮ್ಮ ಕೆಲಸಗಳು ನಡೆಯುತ್ತವೆ.
ಸಿಂಹ: ಇಂದಿನ ರಾಶಿ ಭವಿಷ್ಯ
ಹಣಕಾಸು ವಹಿವಾಟು ಚೆನ್ನಾಗಿರಲಿದೆ. ನಿಮ್ಮ ಕೆಲವು ಆಸೆಯೂ ಈಡೇರಬಹುದು. ಕೌಟುಂಬಿಕ ಸಮಸ್ಯೆಗಳ ಬಗ್ಗೆ ಮನೆಯಲ್ಲಿ ಚರ್ಚಿಸುತ್ತೀರಿ. ಸಹೋದ್ಯೋಗಿಗಳೊಂದಿಗೆ ದಿನಕಳೆಯುತ್ತದೆ. ತಾಯಿಯ ಕಡೆಯಿಂದ ನೀವು ಆರ್ಥಿಕ ಲಾಭವನ್ನು ಪಡೆಯುತ್ತೀರಿ.
ಕನ್ಯಾ: ಇಂದಿನ ರಾಶಿ ಭವಿಷ್ಯ
ದಿನದೂಡುವುದು ಕಷ್ಟವೆನಿಸಬಹುದು. ಕೆಲವು ಆಸ್ತಿ ವಿಚಾರದಲ್ಲಿ ಕಲಹ. ಸಹೋದರ ಸಹೋದರಿಯರ ಜೊತೆ ಕಿರಿಕಿರಿ ಆಗಬಹುದು. ಅಂತಿಮವಾಗಿ ದಿನ ಮುಂದಿನ ಹೆಜ್ಜೆಗೆ ನಿರ್ಧಾರಕವಾಗಬಹುದು. ಬಹಳ ಎಚ್ಚರಿಕೆಯಿಂದ ನಡೆಯುತ್ತೀರಿ
ತುಲಾ: ಇಂದಿನ ರಾಶಿ ಭವಿಷ್ಯ
ಎಚ್ಚರಿಕೆಯಿಂದ ವ್ಯವಹಾರಗಳನ್ನು ಮಾಡುತ್ತೀರಿ. ಕೌಟುಂಬಿಕ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಅಪಶ್ರುತಿ ತರಬಹುದು ನಿಮ್ಮ ಸಂತೋಷಕ್ಕೆ ಮುಂದೊಂದು ಸಮಯ ಬರುತ್ತದೆ. ಮನೆಗೆ ಅತಿಥಿಗಳು ಆಗಮಿಸಬಹುದು, ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿ
ವೃಶ್ಚಿಕ: ಇಂದಿನ ರಾಶಿ ಭವಿಷ್ಯ
ಹಣಕಾಸಿನ ದೃಷ್ಟಿಯಿಂದ ಇಂದು ನಿಮಗೆ ಒಳ್ಳೆಯ ದಿನ. ಕೆಲವು ನಿರ್ದಿಷ್ಟ ಕೆಲಸದ ಬಗ್ಗೆ ನೀವು ಚಿಂತಿತರಾಗುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನೀವು ಯಾವುದೇ ಕ್ರಮಗಳನ್ನು ತೆಗೆದುಕೊಂಡರೂ, ನೀವು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ.
ಧನು: ಇಂದಿನ ರಾಶಿ ಭವಿಷ್ಯ
ಕುಟುಂಬದಲ್ಲಿ ಕೆಲವು ದೊಡ್ಡ ಕೆಲಸಕ್ಕೆ ನಿರ್ಧಾರ ಮಾಡುತ್ತೀರಿ. ಆತುರ ಬಿಟ್ಟು ಗಟ್ಟಿ ಚಿಂತನೆ ಮಾಡುತ್ತೀರಿ. ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ತಾಯಿ ಎದುರು ಎಲ್ಲವನ್ನು ಹೇಳಿಕೊಳ್ಳುತ್ತೀರಿ. ಕುಟುಂಬ ವಿವಾದಗಳನ್ನು ಪರಿಹರಿಸಲು ಯೋಚಿಸುತ್ತೀರಿ
ಮಕರ: ಇಂದಿನ ರಾಶಿ ಭವಿಷ್ಯ
ದೈನಂದಿನ ದಿನಚರಿ ಎಂದಿನಂತೆ ಇರುತ್ತದೆ. ಆರೋಗ್ಯ ಜಾಗ್ರತೆ. ಸಾಲ ಸಿಗಬಹುದು.ವಹಿವಾಟಿನಲ್ಲಿ ಉತ್ತಮ ಹಿಡಿತವನ್ನು ಕಾಪಾಡಿಕೊಳ್ಳುವುದು. ಹೊಸದೇನೋ ಮಾಡುವ ಯೋಚನೆಗೆ ಚಾಲನೆ ಸಿಗಬಹುದು.
ಕುಂಭ: ಇಂದಿನ ರಾಶಿ ಭವಿಷ್ಯ
ವಾಹನಗಳನ್ನು ಬಳಸುವಾಗ ಎಚ್ಚರಿಕೆ ಅಗತ್ಯ. ನಿಮ್ಮ ಸ್ಥಗಿತಗೊಂಡ ಕೆಲಸ ಮತ್ತೆ ಪ್ರಾರಂಭವಾಗಬಹುದು. ಸ್ನೇಹಿತರೊಬ್ಬರ ಬಗ್ಗೆ ಸ್ವತಃ ನೀವೇ ಏನೋ ಕಲ್ಪನೆ ಮಾಡಿಕೊಳ್ಳಬಹುದು. ಹೊಸ ಕೆಲಸಗಳಲ್ಲಿ ನಿಮ್ಮ ಆಸಕ್ತಿಯು ಜಾಗೃತಗೊಳ್ಳಬಹುದು.
ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ದಿನವಾಗಿದೆ. ಹಣದ ವಿಚಾರದಲ್ಲಿ ನಿಮ್ಮ ಸ್ನೇಹಿತನೊಂದಿಗೆ ಜಗಳವಾಗುವ ಸಾಧ್ಯತೆಯಿದೆ. ಆದಷ್ಟು ಮೌನವಾಗಿರಿ. ಮನೆಯಲ್ಲಿ ನಿಮ್ಮಿಂದ ನಿರೀಕ್ಷೆ ಇರುತ್ತದೆ. ಅಪೇಕ್ಷಿತ ಲಾಭವನ್ನು ಪಡೆಯಲು ಕಷ್ಟವಾಗಬಹುದು