cyber crime shivamogga : 3 ಟೆಲಿಗ್ರಾಂ ಮೂಲಕ ಬಂದ ಮೇಸೇಜ್ ಅನ್ನು ನೋಡಿ ಲಾಭ ಗಳಿಸುವ ಉದ್ದೇಶದಿಂದ ಶಿವಮೊಗ್ಗದ ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.
cyber crime shivamogga : ಹೇಗಾಯ್ತು ಘಟನೆ
ಮೊಬೈಲ್ ಬಳಸುತ್ತಿದ್ದಾಗ ವ್ಯಕ್ತಿಗೆ ಟೆಲಿಗ್ರಾಂ ಮೂಲಕ ಒಂದು ಮೆಸೇಜ್ ಬಂದಿದೆ. ಅದರಲ್ಲಿರುವ ಲಿಂಕ್ ತೆರೆದಾಗ ಒಂದು ಖಾಸಗಿ ಕಂಪನಿಯಂತೆ ನಟಿಸಿರುವ ವಂಚಕರು, ಒಂದು ಗ್ರೂಪ್‌ಗೆ ಸೇರುವಂತೆ ಕೇಳಿದ್ದಾರೆ. ಇದನ್ನು ನಂಬಿ ಗ್ರೂಪ್ ಸೇರಿದ ವ್ಯಕ್ತಿಗೆ, ಮೂರು ‘ಪ್ರೀಪೇಯ್ಡ್ ಟಾಸ್ಕ್’ಗಳನ್ನು ಪೂರ್ಣಗೊಳಿಸಿದರೆ ಶೇ. 30ರಷ್ಟು ಲಾಭ ಸಿಗುತ್ತದೆ ಎಂದು ನಂಬಿಸಿದ್ದಾರೆ. ಲಾಭದ ಆಸೆಯಿಂದ ಹಂತ ಹಂತವಾಗಿ ಒಟ್ಟು 4,63,100 ರೂಪಾಯಿ ವರ್ಗಾಯಿಸಿದ್ದಾರೆ.
ಆದರೆ, ಹಣ ವರ್ಗಾಯಿಸಿದ ನಂತರ ವಂಚಕ ಕಂಪನಿ ಸಂಪೂರ್ಣ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಿದೆ. ಈ ವೇಳೆ ಮೋಸ ಮಾಡಿರುವುದನ್ನು ಅರಿತ ವ್ಯಕ್ತಿ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
