ಬೈಕ್ ಅಪಘಾತ ಪ್ರಕರಣ : ಸಾಗರ ಕೋರ್ಟ್​ನಿಂದ ಮಹತ್ವದ ತೀರ್ಪು 

ajjimane ganesh

 Jail ಸಾಗರ, ಶಿವಮೊಗ್ಗ, malenadutoday.com :  ಸಾಗರದಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪಘಾತವೆಸಗಿದ ವ್ಯಕ್ತಿಗೆ ಸಾಗರದ ಜೆಎಂಎಫ್​ಸಿ ಕೋರ್ಟ್​ ಶಿಕ್ಷೆ ವಿಧಿಸಿದೆ. ಈ ಪ್ರಕರಣದ ವಿವರ ಹೀಗಿದೆ. 2018ರ ಜನವರಿ 14 ರಂದು ನಡೆದಿದ್ದ ಅಪಘಾತ ಪ್ರಕರಣದಲ್ಲಿ  ಬೈಕ್ ಸವಾರನ ಸಾವಿಗೆ ಕಾರಣನಾದ ಕಾರು ಚಾಲಕನಿಗೆ, ಇಲ್ಲಿನ  ಜೆಎಂಎಫ್‌ಸಿ ನ್ಯಾಯಾಲಯವು ಒಂದುವರೆ ವರ್ಷಗಳ ಜೈಲು ಶಿಕ್ಷೆ ಮತ್ತು ₹9,000 ದಂಡ ವಿಧಿಸಿದೆ.

 Jail Sagara Land Case Sagar Tahsildar Transferred Rashmi H. J. Takes Charge, Couple Assaulted Three Arrested in sagara 09Vehicle Document Renewal akshara Habba Sagara sagara news
akshara Habba Sagara

 Jail  ಅಂದು ನಡೆದಿದ್ದು ಏನು?

ನಂಜನಗೂಡು ತಾಲ್ಲೂಕಿನ ಸಿಂದುವಳ್ಳಿ ಗ್ರಾಮದ ಗಿರೀಶ್ ಅವರು ವೇಗವಾಗಿ ಕಾರು (car) ಚಲಾಯಿಸಿಕೊಂಡು ಬಂದು,  ತ್ಯಾಗರ್ತಿ ಬಳಿ ಚೇತನ್ ರಾಡ್ರಿಗಸ್ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದ್ದರು. ಪರಿಣಾಮ, ಚೇತನ್ ಸ್ಥಳದಲ್ಲೇ ಮೃತಪಟ್ಟಿದ್ದರು. ಸಾಗರ ಟೌನ್​ ಸ್ಟೇಷನ್ ಪೊಲೀಸರು  ಈ ಕುರಿತು ತನಿಖೆ ನಡೆಸಿ  ನ್ಯಾಯಾಲಯಕ್ಕೆ ಚಾರ್ಜ್​ ಶೀಟ್ ಸಲ್ಲಿಸಿದ್ದರು.

ಇನ್ನೂ ಜೆಎಂಎಫ್​ಸಿ ಕೋರ್ಟ್​ನಲ್ಲಿ ವಿಚಾರಣೆ ನಡೆದು ನ್ಯಾಯಾಧೀಶರಾದ ಮಾದೇಶ್ ಎಂ. ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಸಹಾಯಕ ಸರ್ಕಾರಿ ವಕೀಲರಾದ ಚಂದ್ರಶೇಖರ್ ಎಚ್.ಎಸ್. ವಾದ ಮಂಡಿಸಿದ್ದರು.

today news e paper 08
today news e paper 08

 

Share This Article