ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 24, 2025 : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ಎ.ಆರುಣ್ ನೇತೃತ್ವದ ಏಕಸದಸ್ಯ ನ್ಯಾಯಪೀಠವು ವಿಸ್ತೃತ ವಿಚಾರಣೆ ಮುಗಿಸಿ ಇದೀಗ ಆದೇಶವನ್ನು ಕಾಯ್ದಿರಿಸಿದೆ. BSY POXCO Case
ಪ್ರಕರಣದಲ್ಲಿ ಯಡಿಯೂರಪ್ಪ ಅವರ ಮುಂದಿನ ಭವಿಷ್ಯವನ್ನು ನ್ಯಾಯಾಲಯದ ಆದೇಶ ನಿರ್ಧರಿಸಲಿದೆ. ಇನ್ನೂ ಕೇಸ್ನಲ್ಲಿ ಯಡಿಯೂರಪ್ಪ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ಹಿಂದಿನ ಸಮನ್ವಯ ಪೀಠ ನೀಡಿದ್ದ ಆದೇಶವನ್ನು ವಿಚಾರಣಾ ನ್ಯಾಯಾಲಯವು ಸರಿಯಾಗಿ ಪರಿಗಣಿಸಿಲ್ಲ ಮತ್ತು ವಿವೇಚನೆ ಬಳಸಿಲ್ಲ ಎಂದು ವಾದಿಸಿದರು. ಅಲ್ಲದೆ, ತನಿಖಾಧಿಕಾರಿಗಳು ಸಲ್ಲಿಸಿದ್ದ ಸಾಕ್ಷ್ಯವನ್ನು ವಿಚಾರಣಾ ನ್ಯಾಯಾಲಯವು ಗಣನೆಗೆ ತೆಗೆದುಕೊಂಡಿಲ್ಲ ಎಂದು ಅವರು ಪ್ರತಿಪಾದಿಸಿದರು.
ಬಿಎಸ್ವೈ ವಿರುದ್ಧದ ಪ್ರಕರಣ ವಿಚಾರಣೆ ಸೆ.2 ಕ್ಕೆ ಮುಂದೂಡಿದ ಹೈಕೋರ್ಟ್
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಎಂ.ಎ.ಆರುಣ್ ಅವರು, ಪೋಕ್ಸೋ ಪ್ರಕರಣಗಳಲ್ಲಿ ಸಂತ್ರಸ್ತೆಯ ಹೇಳಿಕೆಯನ್ನೇ ಆಧರಿಸಿ ಆರೋಪಿಯನ್ನು ಅಪರಾಧಿ ಎಂದು ನಿರ್ಧರಿಸಲಾಗುತ್ತದೆಯಲ್ಲವೇ ಎಂದು ಪ್ರಶ್ನಿಸಿದರು. ಸಂತ್ರಸ್ತೆಯ ಹೇಳಿಕೆ ಮತ್ತು ಯಡಿಯೂರಪ್ಪ ಅವರೊಂದಿಗಿನ ಆಡಿಯೋ ರೆಕಾರ್ಡಿಂಗ್ ಆರೋಪಿಯ ವಿರುದ್ಧವೇ ಇದೆ. ಉಳಿದ ಸಾಕ್ಷ್ಯಗಳು ನಿಮ್ಮ ಪರವಾಗಿದೆಯೇ ಎಂದು ಯಡಿಯೂರಪ್ಪ ಪರ ವಕೀಲರನ್ನು ಸ್ಪಷ್ಟವಾಗಿ ಕೇಳಿದರು.
ಈ ವೇಳೆ ವಕೀಲ ಸಿ.ವಿ.ನಾಗೇಶ ಅವರು ತಮ್ಮ ವಾದವನ್ನು ಮುಂದುವರಿಸಿ ತನಿಖಾಧಿಕಾರಿಯು ಸಂತ್ರಸ್ತೆಯ ಹೇಳಿಕೆಯನ್ನು ಪರೀಕ್ಷೆಗೊಳಪಡಿಸಿದ್ದು, ಅವರು ಸಂಗ್ರಹಿಸಿದ ಎಲ್ಲಾ ಸಾಕ್ಷ್ಯಗಳನ್ನು ವಿಚಾರಣಾ ನ್ಯಾಯಾಲಯವು ಪರಿಗಣಿಸಬೇಕಿತ್ತು ಎಂದು ಪುನರುಚ್ಚರಿಸಿದರು.

ಈ ಮಧ್ಯೆ ನ್ಯಾಯಪೀಠವು ಬಾಲಕಿ ಮತ್ತು ಯಡಿಯೂರಪ್ಪ ನಡುವಿನ ಸಂಭಾಷಣೆಯ ಆಡಿಯೋ ರೆಕಾರ್ಡಿಂಗ್‌ನ ಅಂಶವನ್ನು ಹೇಗೆ ತಳ್ಳಿಹಾಕುತ್ತೀರಿ ಎಂದು ಮರುಪ್ರಶ್ನೆ ಮಾಡಿತು.
ಆಗ ಯಡಿಯೂರಪ್ಪ ಪರ ವಕೀಲರು ಆಡಿಯೋ ರೆಕಾರ್ಡಿಂಗ್ ಇಲ್ಲ ಎಂದು ಪ್ರತಿಕ್ರಿಯಿಸಿದರು. ಈ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮಕುಮಾರ್ ಅವರು, ಯಡಿಯೂರಪ್ಪ ಮತ್ತು ಬಾಲಕಿಯ ನಡುವಿನ ಸಂಭಾಷಣೆಯ ಆಡಿಯೋ ರೆಕಾರ್ಡಿಂಗ್ ಅನ್ನು ನಾಶಪಡಿಸಲಾಗಿದೆ ಎಂದು ಪ್ರತ್ಯುತ್ತರ ನೀಡಿದರು.
ಬಿ.ಎಸ್. ಯಡಿಯೂರಪ್ಪ ಲಿಂಗಾಯುತರಲ್ಲ : ದಾಖಲೆ ಕೇಳಿದ ಆಯನೂರು ಮಂಜುನಾಥ್
ಆಡಿಯೋ ರೆಕಾರ್ಡಿಂಗ್ ಇಲ್ಲ ಎನ್ನುವುದಾದರೆ, ಯಡಿಯೂರಪ್ಪ ಅವರು ಸಂತ್ರಸ್ತೆಗೆ ₹2 ಲಕ್ಷ ರೂಪಾಯಿ ಹಣವನ್ನು ಏಕೆ ನೀಡಿದ್ದಾರೆ ಎಂದು ಪ್ರಶ್ನಿಸಿದರು. ಅಲ್ಲದೆ, ಸಂತ್ರಸ್ತೆಯನ್ನು ಖಾಸಗಿ ಕೊಠಡಿಗೆ ಕರೆದೊಯ್ದು ಯಡಿಯೂರಪ್ಪ ಆಕೆಯ ಎದೆಯನ್ನು ಸ್ಪರ್ಶಿಸಿದ್ದಾರೆ ಎಂಬುದನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿದೆ ಮತ್ತು ಇದಾದ ನಂತರ ಬಾಲಕಿ ಅಳುತ್ತಾ ಹೊರಬಂದಿದ್ದಾಳೆ ಎಂಬುದನ್ನೂ ನ್ಯಾಯಾಲಯ ಗಮನಿಸಿದೆ ಎಂದು ಅವರು ವಾದಿಸಿದರು.
ವಿಧಿ ವಿಜ್ಞಾನ ಪ್ರಯೋಗಾಲಯದ (FSL) ವರದಿಯ ಪ್ರಕಾರ, ಆಡಿಯೋದಲ್ಲಿರುವ ಧ್ವನಿ ಯಡಿಯೂರಪ್ಪನವರದ್ದೇ ಎಂದು ಸಾಬೀತಾಗಿದೆ ಎಂಬ ಮಹತ್ವದ ಅಂಶವನ್ನು ಪ್ರೊ.ರವಿವರ್ಮಾ ಕುಮಾರ್ ಅವರು ನ್ಯಾಯಪೀಠದ ಗಮನಕ್ಕೆ ತಂದರು. ಉಭಯ ಪಕ್ಷಗಳ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ಎಂ.ಎ.ಆರುಣ್ ಅವರು, ಪ್ರಕರಣದ ವಾಸ್ತವಿಕ ಅಂಶಗಳನ್ನು ದಾಖಲಿಸಿಕೊಂಡು, ಅಂತಿಮವಾಗಿ ಆದೇಶವನ್ನು ಕಾಯ್ದಿರಿಸಿದರು.

BSY POXCO Case: Karnataka High Court Reserves Order After Hearing Arguments
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
