ಸಕ್ರೆಬೈಲು ಆನೆ ಬಾಲಣ್ಣನ ತಪಾಸಣೆಗಾಗಿ ಬೆಂಗಳೂರಿನಿಂದ ವೈದ್ಯರ ತಂಡ ಆಗಮನ

prathapa thirthahalli
Prathapa thirthahalli - content producer

Bengaluru Veterinary Team ಶಿವಮೊಗ್ಗ: ಸಕ್ರೆಬೈಲು ಆನೆ ಶಿಬಿರದ ಆನೆಗಳ ಆರೋಗ್ಯದ ಸ್ಥಿತಿಗತಿ ಕುರಿತು ಸುದ್ದಿ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ವರದಿಯಾದ ಬೆನ್ನಲ್ಲೆ ಈ ಕುರಿತು ರಾಜ್ಯಾದ್ಯಂತ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡು ತನಿಖೆಗೆ ಆದೇಶಿಸಿದ ಬೆನ್ನಲ್ಲೇ, ಬೆಂಗಳೂರಿನಿಂದ ವಿಶೇಷ ವೈದ್ಯರ ತಂಡವು ಸಕ್ರೆಬೈಲು ಆನೆ ಬಿಡಾರಕ್ಕೆ ಆಗಮಿಸಿದೆ.

ಇಂದು  ಸಕ್ರೆಬೈಲು ಆನೆ ಬಿಡಾರಕ್ಕೆ ಆಗಮಿಸಿರುವ ಈ ವೈದ್ಯರ ತಂಡವು, ಸಕ್ರೆಬೈಲು ಕ್ರಾಲ್ ಬಳಿ ಅನಾರೋಗ್ಯಕ್ಕೀಡಾಗಿದ್ದ ಬಾಲಣ್ಣ ಆನೆಯನ್ನು ತಪಾಸಣೆ ನಡೆಸುತ್ತಿದೆ. ಬಾಲಣ್ಣ ಆನೆಯ ಬಲ ಕಿವಿಗೆ ಗ್ಯಾಂಗ್ರೀನ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಈ ತಪಾಸಣೆ ಮಹತ್ವ ಪಡೆದಿದೆ.

- Advertisement -

ಬಾಲಣ್ಣನ ತಪಾಸಣೆಯ ಜೊತೆಗೆ, ಶಿಬಿರದಲ್ಲಿರುವ ಇತರ ಪ್ರಮುಖ ಆನೆಗಳಾದ ವಿಕ್ರಮ್, ಅಡ್ಕಬಡ್ಕ, ಮತ್ತು ಸಾಗರ್ ಆನೆಗಳ ಆರೋಗ್ಯ ಸ್ಥಿತಿಯನ್ನೂ ಸಹ ವೈದ್ಯಕೀಯ ತಂಡವು ಪರಿಶೀಲನೆ ನಡೆಸಲಿದೆ.

Bengaluru Veterinary Team

Share This Article
Leave a Comment

Leave a Reply

Your email address will not be published. Required fields are marked *