Belur gopalakrishna july 11, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣರ ಜನಪರ ಕಾಳಜಿ: ವೃದ್ಧೆಯೊಂದಿಗೆ ಆತ್ಮೀಯ ಸಂವಾದದ ವಿಡಿಯೋ ವೈರಲ್ !
Belur gopalakrishna ಶಿವಮೊಗ್ಗ: ಶಾಸಕರೆಂದರೆ ಸಾಮಾನ್ಯವಾಗಿ ಐಷಾರಾಮಿ ಕಾರುಗಳಲ್ಲಿ ಸಂಚರಿಸುವುದು, ಸಭೆಗಳಿಗೆ ಹಾಜರಾಗುವುದು ಮತ್ತು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಇಷ್ಟೇ ಅವರ ಕೆಲಸಗಳಾಗಿರುತ್ತವೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ. ತಮ್ಮ ಕಾರ್ಯಕರ್ತರ ಜೊತೆಗಷ್ಟೇ ಒಡನಾಟವಿಟ್ಟುಕೊಂಡು, ಸಾರ್ವಜನಿಕರೊಂದಿಗೆ ಬೆರೆಯುವುದು ಅಥವಾ ಅವರ ಕಷ್ಟಗಳನ್ನು ಆಲಿಸುವ ಗೋಜಿಗೆ ಹೋಗುವುದಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಆದರೆ, ಇದರ ನಡುವೆಯೂ ಕೆಲವು ಶಾಸಕರು ಸಾರ್ವಜನಿಕರೊಂದಿಗೆ ಬೆರೆತು, ಅವರ ಸಮಸ್ಯೆಗಳನ್ನು ಆಲಿಸುವ ಮೂಲಕ ಶಾಸಕನೆಂಬ ಹಮ್ಮು-ಬಿಮ್ಮು ಇಲ್ಲದೆ ನಡೆದುಕೊಳ್ಳುತ್ತಾರೆ. ಇದಕ್ಕೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ತಾಜಾ ಉದಾಹರಣೆಯಾಗಿದ್ದಾರೆ.
Belur gopalakrishna ಬೇಳೂರು ಗೋಪಾಲಕೃಷ್ಣ ಅವರು ಯಾವಾಗಲೂ ಜನರೊಂದಿಗೆ ಬೆರೆಯುವ ವ್ಯಕ್ತಿ. ಅವರಿಗೆ ಬಡವರು ಮತ್ತು ವೃದ್ಧರೆಂದರೆ ಎಲ್ಲಿಲ್ಲದ ಪ್ರೀತಿ. ಇದಕ್ಕೆ ನಿದರ್ಶನವೆಂಬಂತೆ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಕಾರಿನಲ್ಲಿ ತೆರಳುತ್ತಿದ್ದ ಗೋಪಾಲಕೃಷ್ಣನವರಿಗೆ ರಸ್ತೆಯಲ್ಲಿ ಕೋಲು ಹಿಡಿದು ನಡೆದುಕೊಂಡು ಹೋಗುತ್ತಿದ್ದ ಸುಮಾರು 90 ವರ್ಷ ಆಸುಪಾಸಿನ ವೃದ್ಧೆಯೊಬ್ಬರು ಕಾಣಸಿಗುತ್ತಾರೆ.
ಅವರನ್ನು ಕಂಡ ಗೋಪಾಲಕೃಷ್ಣ ತಕ್ಷಣವೇ ತಮ್ಮ ಗಾಡಿ ನಿಲ್ಲಿಸಿ, ಆ ವೃದ್ಧೆ ಇರುವಲ್ಲಿಗೆ ಬರುತ್ತಾರೆ. ನಂತರ, ತಮ್ಮ ಮುಗ್ಧ ಮನಸ್ಸಿನಿಂದ ನಾಟಿ ಧೀವರ ಭಾಷೆಯಲ್ಲಿ ತಮ್ಮನ್ನು ತಾವು ಪರಿಚಯ ಮಾಡಿಕೊಳ್ಳುತ್ತಾರೆ. “ಯಾವೂರಮ್ಮ ನಿಂದು? ಯಾಕ್ ಮಾರೇತಿ, ಈ ಇಳಿ ವಯಸ್ಸಲ್ಲಿ ಈತರ ಓಡಾಡ್ತೀಯಾ? ನಿನಗೆ ಮನೇಲಿ ಇರಕ್ಕಾಗಲ್ಲೇನೇ?” ಎಂದು ಆಪ್ಯಾಯತೆಯಿಂದ ಮಾತನಾಡಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ವೃದ್ಧೆ, “ನನಗೆ ಬೇಜಾರಾಗುತ್ತೆ, ಅದಕ್ಕೆ ತಿರುಗಾಡುತ್ತೇನೆ” ಎಂದು ಹೇಳುತ್ತಾರೆ. ನಂತರ ಗೋಪಾಲಕೃಷ್ಣ, “ನಿಂಗೆ ಏನು ಬೇಕು ಕೇಳು, ಕೊಡುತ್ತೇನೆ” ಎನ್ನುತ್ತಾರೆ. ಆಗ ವೃದ್ಧೆ, “ನೀನೇನು ಕೊಟ್ಟರೂ ಸಹ ನಾನು ತೆಗೆದುಕೊಳ್ಳುತ್ತೇನೆ” ಎನ್ನುತ್ತಾರೆ. ಕೊನೆಗೆ ಗೋಪಾಲಕೃಷ್ಣ ವೃದ್ಧೆಗೆ ಒಂದಿಷ್ಟು ಹಣವನ್ನು ನೀಡಿ ಕಳುಹಿಸುತ್ತಾರೆ.

ಹೀಗೆ ಶಾಸಕರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, “ಶಾಸಕರೆಂದರೆ ಈ ರೀತಿ ಇರಬೇಕು” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಈ ಹಿಂದೆ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಸಹ ಶಿವಮೊಗ್ಗ ನಗರದ ಕೆಲವೆಡೆ ಸ್ಕೂಟರ್‌ನಲ್ಲಿ ತೆರಳುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.

View this post on Instagram