ಶಿವಮೊಗ್ಗ : ಆಟೋ ಹಾಗೂ ದ್ವಿಚಕ್ರ ವಾಹನ ನಡುವೆ ಡಿಕ್ಕಿ ಸಂಭವಿಸಿದ್ದು ದ್ವಿಚಕ್ರ ವಾಹನ ಸವಾರನ ಸ್ಥಿತಿ ಗಂಭೀರವಾಗಿರುವ ಘಟನೆ ಇಂದು ನಗರದ ಕಮಲಾ ನರ್ಸಿಂಗ್ ಹೋಂ ಬಳಿ ನಡೆದಿದೆ.
ಜಯಸಿಂಹ ಎನ್ನುವವರು ಕಮಲಾ ನರಸಿಂಗ್ ಹೋಂ ಪಕ್ಕದ ರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಆಟೋವೊಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ.ಆಗ ಆಟೋದವರೇ ಜಯಸಿಂಹರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಯಸಿಂಹರವರು ರಾಯರಮಠದಲ್ಲಿ ಅರ್ಚಕರಾಗಿ ಕೆಲಸಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.