SHIVAMOGGA | MALENADUTODAY NEWS | ಮಲೆನಾಡು ಟುಡೆ Feb 22, 2025
ಶಿವಮೊಗ್ಗ ನಗರದಲ್ಲಿ ನಿನ್ನೆದಿನ ಎರಡು ಕ್ರೈಂ ಘಟನೆಗಳು ನಡೆದಿದ್ದವು, ಈ ಸಂಬಂಧ ಎಸ್‌ಪಿ ಮಿಥುನ್ ಕುಮಾರ್ ಮಾತನಾಡಿದ್ದು, ನಡೆದ ಅಪರಾಧ ಘಟನೆ ಹಾಗೂ ಅಕ್ರಮ ಮರಳು ಗಣಿಗಾರಿಕೆಯ ಬಗ್ಗೆ ಅವರು ಏನು ಹೇಳಿದರು ಎಂಬುದನ್ನು ಗಮನಿಸೋಣ.
ಸುದ್ದಿ 1 : ರೌಡಿಶೀಟರ್ ಕಾಲಿಗೆ ಗುಂಡು
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಟೆಂಪ್ಟು ಮರ್ಡರ್ ಕೇಸ್‌ನಲ್ಲಿ ಗುಂಡಾ ಅಲಿಯಾಸ್ ರವಿ ಎಂಬಾತ ವಾಂಟೆಡ್ ಇದ್ದ. ಆತನನ್ನು ಅರೆಸ್ಟ್ ಮಾಡುವ ಸಲುವಾಗಿ ತೆರಳಿದ್ದ ವೇಳೆ ಪೊಲೀಸ್ ಸಿಬ್ಬಂದಿ ಆದರ್ಶರವರ ಮೇಲೆ ಆತ ಹಲ್ಲೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಪಿಎಸ್‌ಐ ಕೃಷ್ಣರವರು ಆತನ ಕಾಲಿಗೆ ಶೂಟ್ ಮಾಡಿ, ವಶಕ್ಕೆ ಪಡೆದಿದ್ದಾರೆ. ಆತನ ವಿರುದ್ಧ ನಾಲ್ಕು ಕೇಸ್‌ಗಳಿವೆ. ರಾಬರಿ, ಕೊಲೆಯತ್ನ ಸೇರಿದಂತೆ ಗಂಭೀರ ಪ್ರಕರಣಗಳು ರವಿ ವಿರುದ್ಧವಿದ್ದು, ಆತ ರೌಡಿಶೀಟರ್ ಸಹ ಆಗಿದ್ದಾನೆ ಎಂದು ಎಸ್‌ಪಿ ಮಿಥು ಕುಮಾರ್ ತಿಳಿಸಿದ್ದಾರೆ.
ಸುದ್ದಿ 2 : ಮೂರು ಶವ ಪತ್ತೆ
ಗಾಜನೂರು ಸಮೀಪ ತುಂಗಾನಗರ ಡ್ಯಾಂ ಹಿನ್ನೀರಿನಲ್ಲಿ ಮೂವರ ಶವ ಪತ್ತೆಯಾಗಿದೆ. 40-45 ವಯಸ್ಸಿನ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರ ಶವ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅವರು ಯಾರು ಎಂಬುದು ಇದುವರೆಗೂ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಅವರ ಸಾವಿನ ಕಾರಣ ತಿಳಿದುಬರಲಿದೆ. ಆನಂತರ ಈ ಬಗ್ಗೆ ಇನ್ನಷ್ಟು ತನಿಖೆ ಮುಂದುವರಿಯಲಿದೆ. ಸ್ಥಳೀಯರು ಬೆಳಗ್ಗೆ ಹೊಳೆಬದಿಗೆ ಹೋಗಿದ್ದಾಗ ಮೃತದೇಹಗಳು ಇರುವುದು ಗೊತ್ತಾಗಿದೆ. ಆ ಬಳಿಕ ಸ್ಥಳಕ್ಕೆ ತೆರಳಿದ ತುಂಗಾ ನಗರ ಪೊಲೀಸರು ಮೃತದೇಹಗಳ ಗುರುತು ಪತ್ತೆಗೆ ಮುಂದಾಗಿದ್ದಾರೆ. ಇನ್ನೂ ಮೃತರು ಸ್ಥಳೀಯರಲ್ಲ ಎಂಬ ಮಾಹಿತಿ ಇದೆ. ಈ ಬಗ್ಗೆ ಪೂರ್ತಿ ತನಿಖೆಯಾದ ಬಳಿಕ ಮತ್ತಷ್ಟು ಮಾಹಿತಿ ಸಿಗಲಿದೆ.
ಸುದ್ದಿ 3 : ಮರಳು ಗಣಿಗಾರಿಕೆ
ಈಗಾಗಲೇ ಅಧೀನ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದ್ದು, ಯಾವುದೇ ಕಂಪ್ಲೆಂಟ್ ಬಂದರೂ ತಕ್ಷಣವೇ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ ಈ ಸಂಬಂಧ ಗಣಿಗಾರಿಕೆ ಇಲಾಖೆಯ ಅಧಿಕಾರಿಗಳು ರೇಡ್ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳು ಪೊಲೀಸ್ ಇಲಾಖೆಯ ಸಹಾಯವನ್ನು ಪಡೆಯುವಂತೆ ಮಾತನಾಡಿದ್ದೇನೆ. ಯಾವುದೇ ರೇಡ್ ಇದ್ದರೂ ಪೊಲೀಸ್ ಇಲಾಖೆಗೆ ತಿಳಿಸಿ ಅರ್ಹ ಭದ್ರತೆಯೊಂದಿಗೆ ಸ್ಥಳಗಳ ಮೇಲೆ ರೇಡ್ ನಡೆಸುವಂತೆ ಚರ್ಚಿಸಿದ್ದೇನೆ ಎಂದರು.
SUMMARY | sp mithun kumar reaction to city incidents
KEY WORDS | sp mithun kumar reaction to city incidents