ಮಾಲೀಕನಿಂದ ಟೂರ್‌ ಪ್ಯಾಕೇಜ್‌ | ಶಿವಮೊಗ್ಗದಿಂದ ಪ್ಲೈಟ್‌ ಹತ್ತಿ ಗೋವಾಕ್ಕೆ ಹೊರಟ ಮಹಿಳಾ ಕಾರ್ಮಿಕರು

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌ 

ಶಿವಮೊಗ್ಗಕ್ಕೆ ಏರ್‌ಪೋರ್ಟ್‌ ಬಂದಿರುವುದು ಒಂದು ರೀತಿಯಲ್ಲಿ ಹಲವು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ವಿಮಾನ ನಿಲ್ದಾಣ ಪ್ರವಾಸಿ ಕೇಂದ್ರವಾಗಿಯು ಬದಲಾಗುತ್ತಿದೆ. ಈ ಹಿಂದೆ ಶಿವಮೊಗ್ಗ ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕೆಲವು ಶಾಲೆಯ ಮಕ್ಕಳನ್ನು ಅಲ್ಲಿನ ಶಿಕ್ಷಕರು ಪ್ರವಾಸ ಕಾರ್ಯಕ್ರಮದ ಭಾಗವಾಗಿ ಶಿವಮೊಗ್ಗದ ಮೂಲಕ ಬೆಂಗಳೂರಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಿದ್ದರು. ನಿನ್ನೆ ದಿನ ಉಂಬ್ಳೇ ಬೈಲು ಸರ್ಕಾರಿ ಶಾಲೆಯ ಮಕ್ಕಳನ್ನು ವಿಮಾನ ನಿಲ್ದಾಣದಲ್ಲಿ ವಿಮಾನ ಬಂದಿಳಿಯುವುದನ್ನು ತೋರಿಸಲೆಂದೆ ಪ್ರವಾಸಕ್ಕೆ ಕರೆದುಕೊಂಡು ಬರಲಾಗಿತ್ತು. 

- Advertisement -

Malenadu Today

ಇವತ್ತು ವಿಮಾನ ನಿಲ್ದಾಣದ ಮೂಲಕ ಗೋವಾಕ್ಕೆ ವಿಮಾನದಲ್ಲಿ ಕೃಷಿಕರೊಬ್ಬರು ತಮ್ಮ ತೋಟದ ಕಾರ್ಮಿಕರನ್ನು ಗೋವಾಕ್ಕೆ ಕರೆದೊಯ್ಯುವ ಸುದ್ದಿಯೊಂದು ಮಲೆನಾಡು ಟುಡೆಗೆ ಲಭ್ಯವಾಗಿದೆ. ತಮ್ಮ ತೋಟದಲ್ಲಿ ಕೆಲಸ ಮಾಡುವ 11 ಮಂದಿ ಕೂಲಿ ಕಾರ್ಮಿಕರನ್ನು ವಿಶ್ವನಾಥ್‌ ಎಂಬವರು ಶಿವಮೊಗ್ಗ ಟು ಗೋವಾ ವಿಮಾನದಲ್ಲಿ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. 

Malenadu Today

ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಶಿರಗನಹಳ್ಳಿ ಗ್ರಾಮದ ರೈತ ವಿಶ್ವನಾಥ್‌ರವರು ತಮ್ಮ ತೋಟಕ್ಕೆ ಬರುವ ಕಾರ್ಮಿಕರ ಬಳಿ ವಿಚಾರಿಸುವಾಗ, ಅವರುಗಳು ತಾವು ವಿಮಾನದಲ್ಲಿ ಹೋಗಬೇಕು ಎನ್ನುವ ಆಸೆ ಹೊಂದಿದ್ದಾಗಿ ತಿಳಿಸಿದ್ದಾರೆ. ಅದಕ್ಕಾಗಿ ಏರ್ಪಾಡು ಮಾಡಿದ ವಿಶ್ವನಾಥ್‌ ಎಲ್ಲರನ್ನೂ ತಿರುಪತಿಗೆ ಕರೆದೊಯ್ಯಲು ಮುಂದಾಗಿದ್ದರು. ಆದರೆ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಇವತ್ತು ಎಲ್ಲರನ್ನೂ ಗೋವಾಕ್ಕೆ ಕರೆದೊಯ್ದಿದ್ದಾರೆ. 12 ಮಹಿಳೆಯರ ಪೈಕಿ 11 ಮಹಿಳೆಯರು ಇವತ್ತು ಗೋವಾಕ್ಕೆ ಪ್ರವಾಸ ಹೊರಟಿದ್ದಾರೆ. ಫೆಬ್ರವರಿ 20 ಕ್ಕೆ ಅಲ್ಲಿಂದ ಶಿವಮೊಗ್ಗಕ್ಕೆ ಪುನಃ ವಿಮಾನದಲ್ಲಿ ವಾಪಸ್‌ ಆಗಲಿದ್ದಾರೆ. 

Malenadu Today

ಪ್ಲೈಟ್‌ನಲ್ಲಿ ಹೊರಟ ಕಾರ್ಮಿಕ ಮಹಿಳೆಯರು ಒಂದೇ ರೀತಿಯ ಸೀರೆಯನ್ನು ಉಟ್ಟು ಖುಷಿಯಲ್ಲಿ ಫೋಟೋಗಳಿಗೆ ಫೋಸ್‌ ಕೊಟ್ಟಿದ್ದಾರೆ. ಅಲ್ಲದೆ ಫಸ್ಟ್‌ ಟೈಂ ವಿಮಾನ ಏರಿದ ಖುಷಿಯಲ್ಲಿ ಗಗನಸಖಿಯರ ಜೊತೆ ತಮ್ಮ ಹಳ್ಳಿ ಭಾಷೆಯಲ್ಲಿ ಮಾತನಾಡಿ ಸಂತಸ ಪಟ್ಟಿದ್ದಾರೆ. 

Malenadu Today

Malenadu Today

Malenadu Today

SUMMARY |  owner took his twelve workers on a flight from Shivamogga airport to Goa.

KEY WORDS | twelve workers,  flight from Shivamogga airport , shivamogga to Goa flight

Share This Article
Leave a Comment

Leave a Reply

Your email address will not be published. Required fields are marked *