SHIVAMOGGA | MALENADUTODAY NEWS | ಮಲೆನಾಡು ಟುಡೆ Feb 13, 2025
ಶಿವಮೊಗ್ಗ ಸಿಟಿ ಬಸ್‌ಗಳ ಸಂಚಾರದ ವೇಳೆ ಆಗುತ್ತಿರುವ ಅನಾಹುತಗಳ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಕೊನೆಗೂ ಎಚ್ಚೆತ್ತುಕೊಂಡಿದೆ. ಈ ನಿಟ್ಟಿನಲ್ಲಿ ಬಸ್ ಮಾಲೀಕರ ಸಭೆ ನಡೆಸಿ ಕೆಲವೊಂದು ಮುಖ್ಯ ಸೂಚನೆಗಳನ್ನು ನೀಡಿದೆ.
ಈ ಹಿಂದೆ ಶಿವಮೊಗ್ಗದ ಬೊಮ್ಮನ ಕಟ್ಟೆಯಲ್ಲಿ ಬಸ್‌ವೊಂದು ಚಾಲಕನ ಕಂಟ್ರೋಲ್ ತಪ್ಪಿ ರಸ್ತೆಪಕ್ಕದಲ್ಲಿ ಪಲ್ಟಿಯಾಗಿತ್ತು. ಆ ಘಟನೆಯಲ್ಲಿ ಮಹಿಳೆಯು ಸೇರಿ ಕೆಲವರು ಗಾಯಗೊಂಡಿದ್ದರು. ಮೇಲಾಗಿ ಸಿಟಿ ಬಸ್‌ಗಳ ಅಡ್ಡಾದಿಡ್ಡಿ ಚಾಲನೆ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಆನಂತರ ಗೋಪಾಳದಲ್ಲಿಯು ಇಂತಹುದ್ದೆ ಘಟನೆಯೊಂದು ನಡೆದಿತ್ತು. ಎರಡು ದಿನಗಳ ಹಿಂದಷ್ಟೆ ನಗರದ ಮೈಲಾರೇಶ್ವರ ದೇವಾಲಯದ ಬಳಿ ಬಸ್‌ನ ಪುಟ್‌ಬೋರ್ಡ್ ಮೇಲೆ ಪ್ರಯಾಣ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ರಸ್ತೆಯಲ್ಲಿ ಬಿದ್ದು ಸಾವನ್ನಪ್ಪಿದ್ದ. ಈ ಘಟನೆ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತಿದ್ದು ಬಸ್ ಮಾಲೀಕರ ಸಭೆಯನ್ನು ನಡೆಸಿದೆ.
ಶಿವಮೊಗ್ಗ ಸಂಚಾರ ವೃತ್ತ ಕಛೇರಿಯಲ್ಲಿ ಶಿವಮೊಗ್ಗ ನಗರ ಸಿಟಿ ಬಸ್ ಮಾಲಿಕರ ಸಭೆಯನ್ನು ನಡೆಸಿದ ಡಿವೈಎಸ್‌ಪಿ ಸಂಜೀವ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಬಸ್ ಮಾಲೀಕರಿಗೆ ನಾಲ್ಕು ಅಂಶಗಳನ್ನು ಪಾಲಿಸುವಂತೆ ಸೂಚನೆ ನೀಡಿದ್ದಾರೆ.
ಬಸ್ ಮಾಲೀಕರಿಗೆ ಸೂಚನೆ
1) ಬಸ್ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಸಿಟಿ ಬಸ್ ನಲ್ಲಿ ಪುಟ್ ಬೋರ್ಡ್ ಪ್ರಯಾಣಕ್ಕೆ ಅವಕಾಶ ನೀಡಬಾರದು.
2) ಸಿಟಿ ಬಸ್ ಗಳನ್ನು ಎಲ್ಲಿ ಅಂದರೆ ಅಲ್ಲಿ ನಿಲ್ಲಿಸಿ ಸುಗಮ ಸಂಚಾರ ಅಡ್ಡಿ ಉಂಟುಮಾಡದೆ ತಮ್ಮಗೆ ನಿಗದಿ ಪಡಿಸಿರುವ ಸಿಟಿ ಬಸ್ ನಿಲ್ದಾಣದಲ್ಲಿ ಮಾತ್ರ ನಿಲ್ಲಿಸುವುದು.
3) ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯವಾಗಿ ಸಿಟಿ ಬಸ್ ಸಂಚಾರ ಮಾಡುವ ವೇಳೆಯಲ್ಲಿ ಡೋರ್ ಹಾಕಿಕೊಂಡ ಚಾಲನೆ ಮಾಡುವುದು.
4) ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿರುತ್ತಾರೆ.
SUMMARY | shivamogga police instruction to shimoga city bus owners
KEY WORDS | shivamogga police instruction, shimoga city bus owners