ಮೆಗ್ಗಾನ್‌ನಲ್ಲಿ ಮೆಡಿಸಿನ್‌ಗಾಗಿ ಕಾದು ಕಾದು ತಲೆತಿರುಗಿ ಬೀಳ್ತಿದ್ದಾರೆ | ಜನರ ಸಮಸ್ಯೆ ಆಲಿಸುತ್ತಾರಾ?

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 11, 2025 ‌‌ 

ಶಿವಮೊಗ್ಗ  | ಮೆಗ್ಗಾನ್‌ ಆಸ್ಪತ್ರೆಯಲ್ಲಿ ಹೊರರೋಗಿಗಳು ವೈದ್ಯರು ಬರೆದುಕೊಟ್ಟ ಮಾತ್ರೆ ಪಡೆದುಕೊಳ್ಳಲು ಸರತಿ ಸಾಲಿನಲ್ಲಿ ನಿಂತು ತಲೆತಿರುಗಿ ಬೀಳುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದಕ್ಕೆ ಕಾರಣ  ಇಫಾರ್ಮಸಿ.. ಹೌದು ಸದ್ಯ ಮೆಗ್ಗಾನ್‌ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಮಾತ್ರೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಇದರ ಬಗ್ಗೆ ಬೋರ್ಡ್‌ ಸಹ ಅಂಟಿಸಲಾಗಿದೆ. ಆದರೆ ಈ ವ್ಯವಸ್ಥೆಯ ದೋಷವನ್ನು ಬದಲಾಯಿಸುವ ನಿಟ್ಟಿನಲ್ಲಿ ಮಾಡಲಾದ ಬದಲಾವಣೆಯಿಂದ ಜನರು ಇಲ್ಲದ ತಾಪತ್ರಯ ಅನುಭವಿಸುತ್ತಿದ್ದಾರೆ. 

- Advertisement -

Malenadu Today

ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆ

ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಔಷಧ ವಿತರಣೆ ಕೌಂಟರ್‌ನಲ್ಲಿ ಮಾತ್ರೆಗಳನ್ನು ವೈದ್ಯರು ಬರೆದುಕೊಡುವ ಚೀಟಿಯನ್ನು ಆನ್‌ಲೈನ್‌ನ ಮೂಲಕ ಔಷಧಿ ವಿತರಣಾ ಕೌಂಟರ್‌ಗೆ ರವಾನೆ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಇದಕ್ಕಾಗಿ ಸರ್ವರ್‌ ಒಂದನ್ನು ಕಲ್ಪಿಸಲಾಗಿದೆ. ಇದನ್ನು ಫಾರ್ಮಸಿ ಎಂದು ಕರೆಯಲಾಗ್ತಿದೆ. ಹೊರರೋಗಿಗಳನ್ನು ತಪಾಸಣೆ ಮಾಡುವ ವೈದ್ಯರು ಅವರಿಗೆ ನೀಡಬೇಕಾದ ಔಷಧದ ವಿವರವನ್ನು ಆನ್‌ಲೈನ್‌ ಮೂಲಕ ಔಷಧ ವಿತರಣ ಕೌಂಟರ್‌ನಲ್ಲಿರುವ ಸಿಸ್ಟಮ್‌ಗೆ ರವಾನೆ ಮಾಡುತ್ತಾರೆ. ಅದನ್ನು ಪರಿಶೀಲಿಸಿ ಮೆಡಿಕಲ್‌ ಕೌಂಟರ್‌ನಲ್ಲಿ ಔಷಧ ವಿತರಣೆ ಮಾಡಲಾಗುತ್ತಿದೆ. 

Malenadu Today

 

ಆದರೆ ಈ ವ್ಯವಸ್ಥೆಯನ್ನು ಪರಿಪೂರ್ಣವಾಗಿ ಜಾರಿಮಾಡುವಲ್ಲಿ ತಾಂತ್ರಿಕ ದೋಷ ಎದುರಾಗಿದೆ. ಪರಿಣಾಮ ಮೆಗ್ಗಾನ್‌ ಮೆಡಿಕಲ್‌ ಕೌಂಟರ್‌ನ ಬಳಿ ಅನಾರೋಗ್ಯ ಪೀಡಿತರು ನೂರಾರು ಸಂಖ್ಯೆ ಕ್ಯೂ ನಿಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ನಿನ್ನೆ ದಿನ ಈ ಬಗ್ಗೆ ಪರಿಶೀಲನೆ ನಡೆಸಿದಾಗ ಮೆಗ್ಗಾನ್‌ ಮೆಡಿಕಲ್‌ ಕೌಂಟರ್‌ ಬಳಿ ಜನರ ದಂಡೆ ಕಾದೆ ನಿಂತಿತ್ತು. ಮೊದಲೇ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಗೆ ಬಂದಿದ್ದ ಜನರ ಪೈಕಿ ಕೆಲವರು ಮೆಡಿಕಲ್‌ ಕೌಂಟರ್‌ ಬಳಿ ನಿಲ್ಲಲಾಗದೇ ತಲೆತಿರುಗಿ ಕುಸಿದ ಘಟನೆ ಸಹ ನಡೆದಿದೆ. ಇಷ್ಟಾದರೂ ಆಸ್ಪತ್ರೆಯ ಆಡಳಿತ ವ್ಯವಸ್ಥೆ ಲೋಪದೋಷಗಳನ್ನ ಸರಿಪಡಿಸುವುದಾಗಲಿ, ಅಲ್ಲಿದ್ದ ಜನರಿಗೆ ತೊಂದರೆಯಾಗದಂತೆ ಔಷಧಿ ವಿತರಣೆ ಮಾಡುವ ಪ್ರಯತ್ನ ಮಾಡಿಲ್ಲ. 

Malenadu Today

ಇನ್ನೂ ಆನ್‌ಲೈನ್‌ನಲ್ಲಿ ಇನ್ನೂ ಚೀಟಿ ಬಂದಿಲ್ಲ ಎಂದು ರೋಗಿಗಳೇ ಪದೆಪದೇ ವೈದ್ಯರ ಬಳಿ ಹೋಗಿ ವಿಚಾರಿಸುತ್ತಿದ್ದರು. ಅತ್ತ ವೈದ್ಯರು ನಾವು ಅಪ್‌ಲೋಡ್‌ ಮಾಡಿದ್ದೇವೆ ಎಂದರೆ, ಮೆಡಿಕಲ್‌ ಕೌಂಟರ್‌ನಲ್ಲಿ ಇನ್ನೂ ಚೀಟಿ ಬಂದಿಲ್ಲ ಎಂಬ ಉತ್ತರ ಬರುತ್ತಿತ್ತು. ಇದು ಅತ್ತ ವೈದ್ಯರಿಗೂ ಇತ್ತ ರೋಗಿಗಳಿಗೂ ಸಂಕಷ್ಟ ತಂದಿಟ್ಟಿತ್ತು. ಈ ಬಗ್ಗೆ ದೂರು ಹೇಳಿಕೊಂಡ ವ್ಯಕ್ತಿಯೊಬ್ಬರು ತಮಗಾದ ಸಮಸ್ಯೆಯ ಅಳಲು ತೋಡಿಕೊಂಡಿದ್ದಷ್ಟೆ ಅಲ್ಲದೆ ಮೆಡಿಕಲ್‌ ಕೌಂಟರ್‌ ಬಳಿ ಕಾಯುತ್ತಿದ್ದ ಹಿರಿಯ ನಾಗರಿಕರ ಸ್ಥಿತಿಗತಿಯ ಬಗ್ಗೆ ಪ್ರಶ್ನಿಸಿದರು. 

Malenadu Today

ಇದೇ ವಿಚಾರದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಮೆಗ್ಗಾನ್‌ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಟಿಡಿ ತಿಮ್ಮಪ್ಪ ಇ  ಫಾರ್ಮಸಿ ಹೆಸರಿನ ಹೊಸ ವ್ಯವಸ್ಥೆಯು ಜಾರಿ  ಆಗಿದ್ದು ಆರಂಭದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗುತ್ತಿದೆ ಸದ್ಯದಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ. ಆದರೆ, ಅಷ್ಟರವರೆಗೆ ರೋಗಿಗಳಿಗೆ ಮೆಡಿಕಲ್‌ ಕೌಂಟರ್‌ ನಲ್ಲಿ ಕಾಯುವ ಪರಿಸ್ಥಿತಿ ಎದುರಾಗದಂತೆ ತಡೆಯಬೇಕಾದ ಕ್ರಮ ಅವರು ಕೈಗೊಳ್ಳಬೇಕು ಎಂಬುದು ಸರತಿ ಸಾಲಿನಲ್ಲಿ ನಿಲ್ಲುತ್ತಿರುವವರ ಆಗ್ರಹವಾಗಿದೆ. 

Malenadu Today

ಈ ಹಿಂದೆ ರೋಗಿಯೊಬ್ಬರು, ತಮ್ಮ ಹೆಸರಿನ ಚೀಟಿ ಬರೆಸಿದ ಬಳಿಕ ಸಂಬಂಧಪಟ್ಟ ವೈದ್ಯರನ್ನು ಕಂಡು ಅವರಿಗೆ ಸಮಸ್ಯೆ ವಿವರ ತಿಳಿಸಿ ಮಾತ್ರೆ ಚೀಟಿ ಪಡೆದುಕೊಳ್ಳುತ್ತಿದ್ದರು. ಇದೀಗ ಅವರ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ನಮೂದಾಗುವ ಯುಎಸ್‌ಐಡಿ ನಂಬರ್‌ ಅಡಿಯಲ್ಲಿ ಇಫೈಲ್‌ ಒಂದು ಒಪನ್‌ ಆಗುತ್ತದೆ. ಅದರಲ್ಲಿ ಡಾಕ್ಟರ್‌ಗಳು ರೋಗಿಗೆ ನೀಡಬೇಕಾದ ಔಷಧಗಳ ವಿವರ ನಮೂದಿಸ್ತಿದ್ದಾರೆ. ಅದನ್ನು ಪರಿಶೀಲಿಸಿ ಮೆಡಿಕಲ್‌ ಕೌಂಟರ್‌ನಲ್ಲಿ ಔಷಧಗಳನ್ನು ವಿತರಿಸಲಾಗುತ್ತಿದೆ. ಆದರೆ ಈ ಸಿಸ್ಟಮ್‌ನ್ನು ಸಮರ್ಪಕವಾಗಿ ಜಾರಿಗೆ ತರದಿದ್ದರೇ ಪ್ರತಿನಿತ್ಯವೂ ಮೆಗ್ಗಾನ್‌ನಲ್ಲಿ ಹೊಸ ಹೊಸ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇದೆ.

 

  

SUMMARY  |  shivamogga McGANN Teaching District Hospital, SIMS medicine problem

 

KEY WORDS | shivamogga McGANN Teaching District Hospital, SIMS medicine problem

Share This Article
Leave a Comment

Leave a Reply

Your email address will not be published. Required fields are marked *