SHIVAMOGGA | MALENADUTODAY NEWS | ಮಲೆನಾಡು ಟುಡೆ Jan 14, 2025
ಶಿವಮೊಗ್ಗದ ಉಂಬ್ಳೆಬೈಲ್‌ನಲ್ಲಿ ಹುಲಿಗಣತಿಗಾಗಿ ಇಟ್ಟಿದ್ದ ಕ್ಯಾಮರಾವನ್ನು ಕಳವು ಮಾಡಿವು ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಉಂಬ್ಳೆಬೈಲಿನ ಹೆಬ್ಬಂಡೆಕೆರೆ ಸರ್ವೆ ನಂಬರ್ 85 ರಲ್ಲಿ ಎರಡು ಕ್ಯಾಮರಾ ಕಳುವಾಗಿದೆ ಎಂಧು ದೂರ ನೀಡಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ಇತ್ತ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಶಿವಮೊಗ್ಗ ದಲ್ಲಿ ಮಹಿಳೆಯೊಬ್ಬರು ಭದ್ರಾವತಿ ಬಸ್ ಹತ್ತಿದ ಸಂದರ್ಭದಲ್ಲಿ ಅವರ ಬ್ಯಾಗ್ ಕಳವು ಮಾಡಲಾಗಿದೆ. ಬ್ಯಾಗ್‌ನಲ್ಲಿ 60 ಸಾವಿರ ರೂಪಾಯಿ ಕ್ಯಾಶ್ ಹಾಗೂ ಮಹತ್ವದ ದಾಖಲೆಗಳು ಇದ್ದವು ಎಂದು ಗೊತ್ತಾಗಿದೆ. ಭದ್ರಾವತಿಗೆ ಹೋಗುವ ಸಂದರ್ಭದಲ್ಲಿ ಬೆಂಗಳೂರು ಮಾರ್ಗದ ಬಸ್ ಹತ್ತಿದ ಸಂದರ್ಭದಲ್ಲಿ ಅವರ ಬ್ಯಾಗ್ ಕಳುವು ಮಾಡಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಇನ್ನೊಂದೆಡೆ ಗಾಂಧಿ ಬಜಾರ್‌ನ ಕೇರಿಯೊಂದರಲ್ಲಿ ಪಶ್ಚಿಮ ಬಂಗಾಳ ಮೂಲದ ಚಿನ್ನದ ಕೆಲಸಗಾರನೊಬ್ಬರ ಚಿನ್ನದ ಪಡೆದು ಆಭರಣ ಮಾಡಿಕೊಡದೇ ವಂಚಿಸಿದ ಸಂಬಂಧ ಕೇಸ್ ದಾಖಲಾಗಿದೆ. ಈ ಕುರಿತಾಗಿ ಕೋಟೆ ಪೊಲೀಸ್ ಠಾಣೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಸೀಗೆಹಟ್ಟಿಯ ನಿವಾಸಿಯೊಬ್ಬರು ಆಭರಣ ಮಾಡಿಸುವ ಸಂಬಂದ ಇಲ್ಲಿನ ಚಿನ್ನದ ಕೆಲಸಗಾನೊಬ್ಬನಿಗೆ ಗಟ್ಟಿ ಬಂಗಾರ ನೀಡಿದ್ದರಂತೆ. ಕೆಲಸ ಮಾಡಿಕೊಡುವುದಾಗಿ ಹೇಳಿದ್ದ ಆರೋಪಿ ರಾಹುಲ್ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾನೆ. ಆ ಬಳಿಕ ಕೆಲಸ ಮಾಡಿಕೊಡದೇ ವಂಚಿಸಿದ್ಧಾನೆ ಎಂದು ಆರೋಪಿಸಲಾಗಿದೆ.
SUMMARY | ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಶಿವಮೊಗ್ಗ, shivamogga crime news
KEY WORDS | ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಶಿವಮೊಗ್ಗ, shivamogga crime news