BREKING | ಪುರದಾಳ್ ಸುತ್ತಮುತ್ತ ಉಪಟಳ ನೀಡುತ್ತಿದ್ದ ಕಾಡಾನೆ ಸಾವು?

13

ಶಿವಮೊಗ|  ಲಯನ್ ಸಫಾರಿ ಸಮೀಪದಲ್ಲಿ ಕಾಡಾನೆಯೊಂದು ಸಾವನ್ನಪ್ಪಿದೆ…ಮಲೆನಾಡು ಟುಡೆಗೆ ವೈಯಕ್ತಿಕ ವಾಗಿ ಲಭ್ಯವಾದ ಮಾಹಿತಿ ಪ್ರಕಾರ ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವ ಪುರದಾಳ್ ಅಗಸವಳ್ಳಿ ಸಿರಿಗೆರೆ ಆಯನೂರು ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಂಡಂತಹ ಕಾಡಾನೆಗಳ ಪೈಕಿ ಈ ಆನೆಯು ಉಪಟಳ ನೀಡುತ್ತಿತ್ತು ಎನ್ನಲ್ಲಾಗಿದೆ…..

 ಅರಕರೆ ವೈಲ್ಡ್ ಲೈಫ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..ಕಾಡಿನ ಆನೆ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಮಲೆನಾಡು ಟುಡೆಗೆ ಲಭ್ಯವಾಗಿದೆ. ಈ ಬಗ್ಗೆ ಮಲೆನಾಡು ಟುಡೆ ವೈಲ್ಡ್ ಲೈಫ್ dfo ಪ್ರಸನ್ನ ಪಟಗಾರ್ ರವರನ್ನ ಸಂಪರ್ಕಿಸಿತು. ಅವರು ಮಾತನಾಡಿ ept  , ಎಲಿಪೆಂಟ್ ಪ್ರೊಟೆಕ್ಟಿವ್ ಟ್ರಂಚ್ ಅಥವಾ ಆನೆ ಸಂರಕ್ಷಣಾ ಗುಂಡಿ ಒಳಗೆ ಕಾಡಾನೆ ಬಿದ್ದಿದೆ ..ಅಲ್ಲಿ ಬಿದ್ದಂತಹ ಕಾಡಾನೆಯು ಅಲ್ಲಿಂದ ಮೇಲಕ್ಕೆ ಬರಲಾಗಿದೆ..ಎರಡು ದಿನಗಳ ಹಿಂದೆಯೆ ಕಾಡಾನೆ ಸಾವನ್ನಪ್ಪಿರುವ ಸಾದ್ಯತೆ ಇದೆ..ಕಾಡಾನೆ  ಹಿಂದಿನ ಹಾಗು ಮುಂದಿನ ಕಾಲುಗಳು ಟ್ವಿಸ್ಟ್ ಆದಂತಿದೆ..ಈ ಬಗ್ಗೆ ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ತಿಳಿಸಿದರು

- Advertisement -
Share This Article
1 Comment

Leave a Reply

Your email address will not be published. Required fields are marked *