SHIVAMOGGA | MALENADUTODAY NEWS | Aug 26, 2024 ಮಲೆನಾಡು ಟುಡೆ
ಬೆಂಗಳೂರು ರಾಮೇಶ್ವರಂಕಫೆ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮುಸಾವೀರ್ ಹುಸೇನ್ ಶಾಜೀಬ್ ನ ವಿಚಾರಣೆ ನಾಳೆ ತೀರ್ಥಹಳ್ಳಿ ಕೋರ್ಟ್‌ನಲ್ಲಿ ನಡೆಯಲಿದೆ. ನಾಳೆ ಅಂದರೆ, ಆಗಸ್ಟ್ 27ಕ್ಕೆ ಶಂಕಿತ ಉಗ್ರನ ವಿಚಾರಣೆಯನ್ನ ವೀಡಿಯೋ ಕಾನ್ಸರೆನ್ಸ್ ಮೂಲಕ ನಡೆಸಲಾಗುತ್ತಿದೆ.
ಏನಿದು ಪ್ರಕರಣ
ತೀರ್ಥಹಳ್ಳಿಯಲ್ಲಿ ಮುಸಾವೀರ್ ಸಂಬಂಧ ಭಯೋತ್ಪಾದನೆಗೆ ಸಂಬಂಧಿಸಿದದ ಪ್ರಕರಣಗಳಿಲ್ಲ. ಆದರೆ ಮೂಲತಃ ತೀರ್ಥಹಳ್ಳಿಯವನಾದ ಈತ ನಾಪತ್ತೆಯಾಗುವುದಕ್ಕೂ ಮೊದಲು ವ್ಯಕ್ತಿಯೊಬ್ಬರ ಜೊತೆಗೆ ಗಲಾಟೆ ಮಾಡಿಕೊಂಡಿದ್ದ. ಆ ಪ್ರಕರಣದಲ್ಲಿ ದಾಖಲಾಗಿದ್ದ ದೂರು, ಎಫ್‌ಐಆರ್ ನಲ್ಲಿ ಮುಸಾವೀರ್ ಕೂಡ ಆರೋಪಿ.
ಈತ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಇದುವರೆಗೂ ವಿಚಾರಣೆ ನಡೆದಿರಲಿಲ್ಲ. ಇದೀಗ ರಾಮೇಶ್ವರಂ ಕಫೆ ಸ್ಫೋಟ ಪ್ರಕರಣದಲ್ಲಿ ಮುಸಾವೀರ್ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ಆತನನ್ನು ತೀರ್ಥಹಳ್ಳಿಯಲ್ಲಿ ನಡೆದಿದ್ದ ಗಲಾಟೆ ಕೇಸ್ ಸಂಬಂಧ ಕೋರ್ಟ್ ಮುಂದೆ ಹಾಜರು ಪಡಿಸಲಾಗುತ್ತಿದೆ.
ಈತನನ್ನ ನೇರವಾಗಿ ಹಾಜರುಪಡಿಸುವ ಅವಕಾಶವನ್ನ ಪೊಲೀಸ್ ಇಲಾಖೆ ಕೈ ಚೆಲ್ಲಿದ್ದು, ಭದ್ರತೆಯ ಕಾರಣಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಸಾವೀರ್‌ನನ್ನ ಹಾಜರುಪಡಿಸುತ್ತಿದೆ. ಬೆಂಗಳೂರಿನ ಜೈಲಿನಿಂದಲೇ ನೇರವಾಗಿ ವೀಡಿಯೋ ಕಾನ್ಸರೆನ್ಸ್ ಮುಸಾವೀರ್ ತೀರ್ಥಹಳ್ಳಿ ಕೋರ್ಟ್‌ಗೆ ಹಾಜರಾಗಲಿದ್ದಾನೆ


ಇನ್ನಷ್ಟು ಸುದ್ದಿಗಳು
-
Shivamogga court | @ಜೈಲರ್ ಕೊಲೆ ಕೇಸ್ | ಇಬ್ಬರು ಮಹಿಳೆಯರಿಗೆ ಜೀವಾವಧಿ ಶಿಕ್ಷೆ , ಮೂವರಿಗೆ ಐದು ವರ್ಷ ಜೈಲು
-
ವೃದ್ಧಾಪ್ಯ ವೇತನದ ದುಡ್ಡು ಕೇಳಿದ್ರೆ ಗೆಟ್ ಔಟ್ , ಹೋಗಿ ಸಾಯಿ ಅಂತಾರಂತೆ | ಅಜ್ಜಿ ಅಳಲನ್ನ ಆಲಿಸುತ್ತಾ ವ್ಯವಸ್ಥೆ?
-
Anandpur Sagar | ಐತಿಹಾಸಿಕ ಪುಷ್ಕರಣಿಯಲ್ಲಿ ಈಜುವಾಗ ಬೆಂಗಳೂರು ಮೂಲದ ಯುವಕ ಸಾವು