ಶಿವಮೊಗ್ಗದಿಂದಲಾ ಕಿಚ್ಚ ಸುದೀಪ್ ಚುನಾವಣಾ​ ಸ್ಪರ್ದೆ? ಚಿತ್ರದುರ್ಗದಿಂದನಾ? ಏನಿದು ವರದಿ?

ನಿನ್ನೆಯಿಂದಲೂ ನಟ ಕಿಚ್ಚ ಸುದೀಪ್​ (kiccha sudeep politics)ರಾಜಕೀಯಕ್ಕೆ ಬರುತ್ತಾರೆ. ಈ ಸಂಬಂಧ ಅವರನ್ನು ಪಕ್ಷ ಸೇರಿ ಸ್ಪರ್ದೆಗಿಳಿಯುವಂತೆ ಆಹ್ವಾನಿಸಲಾಗಿದೆ ಎಂಬ ಸುದ್ದಿಗಳು ಜೋರಾಗಿ ಹರಿದಾಡುತ್ತಿದೆ.

ಸಾಗರ ಸುದ್ದಿ :  ನಡೆವ ಘಟನೆಗಳಿಗೆಲ್ಲಾ ಕೋಮು ಬಣ್ಣ ಕಲ್ಪಿಸುವುದು ಬೇಡ

ಕಿಚ್ಚಸುದೀಪ್ ಅವರನ್ನು ಕಾಂಗ್ರೆಸ್ ಗೆ ಕರೆತಂದು ಕಣಕ್ಕಿಳಿಸುವ ಪ್ರಯತ್ನಗಳು ನಡೆದಿದ್ದು, ರಾಹುಲ್ ಗಾಂಧಿಯ ಆಪ್ತ ಮೂಲಗಳು ಕಿಚ್ಚ ಸುದೀಪ್​ರ ಮನೆಗೆ ಹೋಗಿ ಈ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ನಿನ್ನೆ ಎಲ್ಲಾ ಮಿಡಿಯಾಗಳಲ್ಲಿಯು ಟಾಂ…ಟಾಂ ಆಗಿದ್ದವು. ಆದರೆ ಈ ಬಗ್ಗೆ ಕಿಚ್ಚ ಸುದೀಪ್ ಯಾವುದೇ ಪ್ರತಿಕ್ರಿಯೆ  ಇದುವರೆಗೂ ಕೊಟ್ಟಿಲ್ಲ. ಅದರ ಹೊರತಾಗಿಯು ಸುದೀಪ್​ರ ಕ್ಷೇತ್ರ ಆಯ್ಕೆಯವರೆಗೂ ಸುದ್ದಿ ವಿಸ್ತಾರಗೊಂಡಿದೆ. 

ಶಿವಮೊಗ್ಗ ನಗರದ ರಾಗಿಗುಡ್ಡದ ಬಳಿಯಲ್ಲಿ ಕಾಣಿಸಿಕೊಂಡ ಬೆಂಕಿ

ಶಿವಮೊಗ್ಗ  & ಚಿತ್ರದುರ್ಗ

ಸುದೀಪ್ ಅವರನ್ನು ಕರೆತರುವ ಪ್ರಯತ್ನವನ್ನು ಖ್ಯಾತ ಚಿತ್ರನಟಿ ರಮ್ಯಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂಲಕ ಪ್ರಯತ್ನ ನಡೆಯುತ್ತಿದೆ ಎಂಬುದು ಪ್ರಮುಖ ಸುದ್ದಿಯಾಗಿದೆ. ಇನ್ನೂ ಸುದೀಪ್​ರವರು ಬಯಸಿದರೇ ಶಿವಮೊಗ್ಗ ಅಥವಾ ಚಿತ್ರದುರ್ಗ ಕ್ಷೇತ್ರಗಳಲ್ಲಿ ಅವರನ್ನು ಕಣಕ್ಕಿಳಿಸುವ ಯೋಚನೆ ಹಾಗೂ ಪ್ರಸ್ತಾವವು ನಡೆದಿದೆ ಎಂದು ರಾಜ್ಯ ಮಾಧ್ಯಮಗಳು ಸುದ್ದಿ ಮಾಡಿವೆ. 

ಸಾಗರ ಟೌನ್​ನಲ್ಲಿ ಹಲ್ಲೆಗೆ ಯತ್ನ ಕೇಸ್​/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ

ವಾಲ್ಮೀಕಿ ಸಮುದಾಯಕ್ಕೆ ಸೇರಿದ ಕಿಚ್ಚ ಸುದೀಪ್​ರನ್ನು ಪಕ್ಷಕ್ಕೆ ಸೆಳೆದರೆ ಹಿಂದುಳಿದ ಸಮುದಾಯಗಳ ಮತಗಳನ್ನ ಒಟ್ಟುಗೂಡಿಸಿ ಪಕ್ಷದತ್ತ ಸೆಳೆಯಬಹುದು ಎಂಬುದು ಕಾಂಗ್ರೆಸ್​ನಲ್ಲಿನ ಲೆಕ್ಕಾಚಾರ ಎನ್ನಲಾಗ್ತಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

ಯಾವುದಕ್ಕೂ ಕಿಚ್ಚ ಸುದೀಪ್​ ಈ ಬಗ್ಗೆ ಮೌನ ಮುರಿದು, ತಮ್ಮ ಬಗೆಗಿನ ಎಲೆಕ್ಷನ್ ಸುದ್ದಿ ಸತ್ಯ ವರದಿಯೋ? ವದಂತಿಯೋ? ಎಂಬುದನ್ನ ಸ್ಪಷ್ಟಪಡಿಸಬೇಕಿದೆ. 

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು